ನಿನ್ನೆ ಕೆ ಆರ್ ರಸ್ತೆಯಲ್ಲಿರೋ ಅಕ್ಷ ಆಸ್ಪತ್ರೆಗೆ ಭೇಟಿ ನೀಡಿ ಜನರಲ್ ಚೆಕಪ್ ಮಾಡಿಸಿದ್ದ ಮೇಘನಾರಾಜ್ ಇಂದು ವೈದ್ಯರ ಸಲಹೆ ಮೇರೆಗೆ ಹೆರಿಗೆಗಾಗಿ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮೇಘನಾ ರಾಜ್ ಆಸ್ಪತ್ರೆಗೆ ದಾಖಲಾಗ್ತಿದಂತೆ, ಚಿರಂಜೀವಿ ಸರ್ಜಾ ತಾಯಿ ಅಮ್ಮಾಜಿ, ಅಜ್ಜಿ ಲಕ್ಷ್ಮಿದೇವಿ ಮೇಘನಾರನ್ನ ನೋಡಲು ಆಸ್ಪತ್ರೆಗೆ ಆಗಮಿಸಿದ್ದಾರೆ. ಮತ್ತೊಂದು ಕಡೆ ಚಿರಂಜೀವಿ ಸರ್ಜಾ ಕುಟುಂಬ ಹಾಗೂ ಸುಂದರ ರಾಜ್ ಫ್ಯಾಮಿಲಿ ಶುಭ ಘಳಿಗೆಯನ್ನ ಎದುರು ನೋಡುತ್ತಿದ್ದಾರೆ.
ಮನೆಗೆ ಆಗಮಿಸಲಿರೋ ಮುದ್ದು ಕಂದಮ್ಮನನ್ನ ಬರಮಾಡಿಕೊಳ್ಳಲು ಎರಡು ಕುಟುಂಬದವರು ಕಾಯುತ್ತಿದ್ದು, ಸಂತೋಷದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಅಣ್ಣನ ಮಗುವಿಗಾಗಿ ಧ್ರುವ ಸರ್ಜಾ ದುಬಾರಿ ಬೆಲೆಯ ಬೆಳ್ಳಿ ತೊಟ್ಟಿಲನ್ನ ಖರೀದಿಸಿರೋದು ಮತ್ತಷ್ಟು ಸಂಭ್ರಮ ಹೆಚ್ಚಿಸಿದೆ.