ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳು, ಹೊಸ ನಟರು ಹಾಗೂ ನಿರ್ದೇಶಕರ ಎಂಟ್ರಿ ಆಗ್ತಾನೆ ಇದೆ. ಈಗ ಜೊತೆ ಜೊತೆಯಲ್ಲಿ ಸೀರಿಯಲ್ ಖ್ಯಾತಿಯ ಮೇಘಾ ಶೆಟ್ಟಿ ಜೊತೆ ಯುವ ನಟ ಕವೀಶ್ ಶೆಟ್ಟಿ ಸಿನಿಮಾ ಮಾಡಲು ಮುಂದಾಗಿದ್ದು, ಹೆಸರಿಡದ ಚಿತ್ರವನ್ನ ನಿರ್ದೇಶಕ ಸಡಗರ ರಾಘವೇಂದ್ರ ನಿರ್ದೇಶಿಸಲಿದ್ದಾರೆ.
ಚೊಚ್ಚಲ ನಿರ್ದೇಶನದಲ್ಲಿ ರಾಘವೇಂದ್ರ ಈ ಚಿತ್ರವನ್ನ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಹೀಗೆ ಬಹುಭಾಷೆಯಲ್ಲಿ ಅದ್ದೂರಿಯಾಗಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಹಿಂದೆ ‘ಜಿಲ್ಕ’ ಸಿನಿಮಾ ಮಾಡಿದ ಕವೀಶ್ ಶೆಟ್ಟಿ, ಹೆಸರಿಡದ ಈ ಚಿತ್ರಕ್ಕಾಗಿ ಸತತವಾಗಿ ಜಿಮ್ಮಿನಲ್ಲಿ ಬೆವರು ಹರಿಸುತ್ತಾ ಫೈಟ್ ಮತ್ತು ಡ್ಯಾನ್ಸ್ ರಿಹರ್ಸಲ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇದೊಂದು ಅಪ್ಪಟ ಔಟ್ ಅಂಡ್ ಔಟ್ ಮಾಸ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಎನ್ನುವ ಸುಳಿವು ದೊರೆಯುತ್ತಿದೆ.
ಮರಾಠಿಗರ ಕನಸಿನ ಹುಡುಗಿ ಶಿವಾನಿ ಸುರ್ವೆ ಮತ್ತು ವಿರಾಟ್ ಮಡ್ಕೆ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಅದಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ತಯಾರಾಗುತ್ತಿದೆ ಎಂದರೆ ಖಂಡಿತವಾಗಿಯೂ ಚಿತ್ರದ ಟೈಟಲ್ ಕೂಡ ಆ ಮಟ್ಟದಲ್ಲಿಯೇ ಇರಲಿದೆಯಂತೆ.
ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ತಂಡ ಈಗಾಗಲೇ ಮೊದಲನೇ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿ ಇದೇ ತಿಂಗಳ ಕೊನೆಯಲ್ಲಿ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧಗೊಳ್ಳುತ್ತಿದೆ. ಆದರೂ ಚಿತ್ರತಂಡ ಇನ್ನೂ ಚಿತ್ರದ ಟೈಟಲ್ ಗುಟ್ಟು ಬಿಟ್ಟು ಕೊಟ್ಟಿಲ್ಲ ಎನ್ನುವುದು ಒಂದು ಕಡೆಯಾದರೆ ಚಿತ್ರದ ಫಸ್ಟ್ ಲುಕ್ ಹೇಗಿರುತ್ತದೆ ಕುತೂಹಲ ಹುಟ್ಟಿಸಿದೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದಿಂದ ಜಾಕ್ವೆಲಿನ್ ಫರ್ನಾಂಡೀಸ್ಗೆ ಗೇಟ್ಪಾಸ್?