ಸದ್ಯಕ್ಕೆ ಟಾಲಿವುಡ್ನ ಬಹುನಿರೀಕ್ಷಿತ, ಬಹುತಾರಾಗಣದ ಹಾಗೂ ಬಿಗ್ಬಜೆಟ್ನ ಚಿತ್ರ ಎಂದರೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈ ರಾ ನರಸಿಂಹ ರೆಡ್ಡಿ'. ಚಿತ್ರದ ಚಿತ್ರೀಕರಣ ಇದೀಗ ಭರದಿಂದ ಸಾಗಿದೆ.

ಬಹಳ ದಿನಗಳಿಂದ ಚಿತ್ರದ ಚಿತ್ರೀಕರಣದಲ್ಲಿ ಬಿಡುವಿಲ್ಲದೆ ಭಾಗವಹಿಸಿದ್ದ ಮೆಗಾಸ್ಟಾರ್ ಚಿರಂಜೀವಿ ಇದೀಗ ಸ್ವಲ್ಪ ದಿನಗಳ ಕಾಲ ಬ್ರೇಕ್ ಪಡೆದು ಪತ್ನಿ ಸುರೇಖ ಜೊತೆ ವಿದೇಶಕ್ಕೆ ಹಾರಿದ್ದಾರೆ. ಜಪಾನಿನ ಕೆಲವೊಂದು ಸುಂದರ ತಾಣಗಳಲ್ಲಿ ಚಿರು ಹಾಗೂ ಸುರೇಖ ಎಂಜಾಯ್ ಮಾಡುತ್ತಿದ್ದಾರೆ. ಈ ಫೋಟೋಗಳು ಇದೀಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಫೋಟೋಗಳನ್ನು ನೋಡಿದಾಗ ಸಿನಿಮಾ, ವೈಯಕ್ತಿಕ ಕೆಲಸಗಳ ನಡುವೆ ಸದಾ ಬ್ಯುಸಿಯಿರುತ್ತಿದ್ದ ಚಿರಂಜೀವಿ ಹಾಗೂ ಪತ್ನಿ ಸುರೇಖ ಎಲ್ಲಾ ಟೆನ್ಷನ್ಗಳಿಂದ ದೂರವಿದ್ದು ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ.

ಇನ್ನು ಸ್ವತಂತ್ಯ್ರ ಹೋರಾಟಗಾರ ಉಯ್ಯಾಲವಾಡ ನರಸಿಂಹರೆಡ್ಡಿ ನಿಜಜೀವನದ ಕಥೆಯನ್ನು ಹೊಂದಿರುವ 'ಸೈ ರಾ ನರಸಿಂಹ ರೆಡ್ಡಿ' ಸಿನಿಮಾವನ್ನು ರಾಮ್ಚರಣ್ ತೇಜ ನಿರ್ಮಿಸುತ್ತಿದ್ದರೆ ಸುರೇಂದರ್ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ಜಪಾನ್ ಪ್ರವಾಸದ ನಂತರ ಮೆಗಾಸ್ಟಾರ್ ಸೈ ರಾ ಶೂಟಿಂಗ್ನಲ್ಲಿ ಭಾಗವಹಿಸಲು ಚೀನಾಗೆ ತೆರಳಲಿದ್ದಾರೆ. ಚಿತ್ರದ ಕೆಲವೊಂದು ಸನ್ನಿವೇಶಗಳನ್ನು ಚೀನಾದಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.