ETV Bharat / sitara

ಮೆಗಾಸ್ಟಾರ್​ಗೆ ಜನ್ಮದಿನದ ಸಂಭ್ರಮ.. ಟೈಟಲ್ ಲಾಂಚ್ ಮಾಡಿದ ಮಹೇಶ್ ಬಾಬು - ಮೆಗಾಸ್ಟಾರ್ ಚಿರಂಜೀವಿ ಜನ್ಮ ದಿನ

67ನೇ ವರ್ಷಕ್ಕೆ ಕಾಲಿಟ್ಟ ಮೆಗಾಸ್ಟಾರ್​ಗೆ ನಟರು, ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Chiranjeevi
Chiranjeevi
author img

By

Published : Aug 22, 2021, 10:33 AM IST

ಹೈದರಾಬಾದ್: ಟಾಲಿವುಡ್​ ಖ್ಯಾತ ನಟ, ಮೆಗಾಸ್ಟಾರ್ ಚಿರಂಜೀವಿಗೆ ಇಂದು ಜನ್ಮ ದಿನದ ಸಂಭ್ರಮ. 67ನೇ ವರ್ಷಕ್ಕೆ ಕಾಲಿಟ್ಟ ಮೆಗಾಸ್ಟಾರ್​ಗೆ ನಟರು, ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಚಿರಂಜೀವಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅಭಿಮಾನಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಚಿತ್ರರಂಗ ಅಷ್ಟೇ ಅಲ್ಲ, ರಾಜಕೀಯಕ್ಕೂ ಅದ್ಧೂರಿಯಾಗಿ ಎಂಟ್ರಿ ಕೊಟ್ಟು ಚುನಾವಣಾ ರಾಜಕೀಯದಲ್ಲಿ ಸೋಲು-ಗೆಲುವು ಕಂಡ ನಾಯಕನಾಗಿ ಹೊರಹೊಮ್ಮಿದ್ದಾರೆ.

ನನ್ನ ಜನ್ಮ ದಿನದ ಹಿನ್ನೆಲೆ ಅಭಿಮಾನಿಗಳು ಮೂರು ಸಸಿಗಳನ್ನು ನೆಟ್ಟು, ಬೆಳೆಸಬೇಕು. ಈ ಮೂಲಕ ತಮ್ಮ ಪ್ರೀತಿ ಅಭಿಮಾನ ತೋರಬೇಕು ಎಂದು ಶನಿವಾರ ಟ್ವೀಟ್ ಮಾಡಿ ಚಿರಂಜೀವಿ ಮನವಿ ಮಾಡಿದ್ದರು. ಜೊತೆಗೆ ಈ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಿ, ಇದನ್ನು ಬೆಂಬಲಿಸಿ ಎಂದು ಅಭಿಮಾನಿಗಳಿಗೆ ಕೋರಿದ್ದರು.

ಜನ್ಮದಿನಕ್ಕೆ ಟೈಟಲ್ ಲಾಂಚ್:

ಚಿರಂಜೀವಿ ಜನ್ಮದಿನದ ಹಿನ್ನೆಲೆ ಅವರ ಹೊಸ ಚಿತ್ರ ಬೋಲಾ ಶಂಕರ್ ಟೈಟಲ್ ಬಿಡುಗಡೆ ಆಗಿದೆ. ನಟ ಮಹೇಶ್ ಬಾಬು ಈ ಚಿತ್ರ ಟೈಟಲ್ ಅನಾವರಣಗೊಳಿಸಿ, ಮೆಗಾಸ್ಟಾರ್​ಗೆ ಶುಭಾಶಯ ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.