'ಅಶ್ಚಿನಿ ನಕ್ಷತ್ರ'ದ ಚೆಲುವೆ ನಟಿ ಮಯೂರಿ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಲವ್ ಕಂ ಅರೆಂಜ್ ಮ್ಯಾರೇಜ್ ಆಗಲಿರೋ ಮಯೂರಿ ಮದುವೆ ನಾಳೆಯೇ ನಡೆಯಲಿದೆ.
ಬಹುಕಾಲದ ಗೆಳೆಯನ ಜೊತೆ ನಟಿ ಮಯೂರಿ ಸಪ್ತಪದಿ ತುಳಿಯೋಕೆ ಸಿದ್ಧರಾಗಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಅರುಣ್ ಹಾಗೂ ನಟಿ ಮಯೂರಿ ಹತ್ತು ವರ್ಷ ಪರಸ್ಪರ ಪ್ರೀತಿಸುತ್ತಿದ್ದು ಈಗ ಕುಟುಂಬದವರ ಒಪ್ಪಿಸಿ ಸಿಕ್ಕಿದ್ದು ಮಯೂರಿ ಮದುವೆ ಆಗ್ತಿದ್ದಾರೆ.
ಮಯೂರಿ ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ರು. ಅಜಯ್ ರಾವ್ ಅಭಿನಯದ 'ಕೃಷ್ಣ ಲೀಲಾ' ಚಿತ್ರ ಮಯೂರಿಗೆ ಒಳ್ಳೆ ನೇಮು ಫೇಮು ಕೊಟ್ಟಿತ್ತು. ಅಲ್ಲದೆ ಇತ್ತೀಚೆಗೆ ಮಯೂರಿ 'ರುಸ್ತುಂ' ಚಿತ್ರದಲ್ಲಿ ಶಿವಣ್ಣನ ತಂಗಿ ಪಾತ್ರದಲ್ಲಿ ಕಾಣಿಸಿದ್ರು, ಜೊತೆಗೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಷ್ಟಕಾಮ್ಯ' ಚಿತ್ರದಲ್ಲೂ ಲೀಡ್ ರೋಲ್ ಪ್ಲೇ ಮಾಡಿದ್ದಾರೆ.
ಸದ್ಯ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.