ವಿಜಯ್ ದಳಪತಿ ಅಭಿನಯದ ತಮಿಳಿನ 'ಮಾಸ್ಟರ್' ಸಿನಿಮಾ ಅಬ್ಬರ ಜೋರಾಗಿಯೇ ಇದೆ. ಸಿನಿಮಾ ರಿಲೀಸ್ ಆದಾಗಿಂದಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದೆ. ಈ ಚಿತ್ರ ತೆರೆ ಕಂಡ ಕೇವಲ 9 ದಿನಕ್ಕೆ ಬರೋಬ್ಬರಿ 200 ಕೋಟಿ ಬಾಚಿದೆ.
ಹೌದು, ವಿಶ್ವದಾದ್ಯಂತ ರಿಲೀಸ್ ಆಗಿರುವ ಲೋಕೇಶ್ ಕನಗರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾ 200 ಕೋಟಿ ಸಂಪಾದನೆ ಮಾಡಿದ್ದು, ಈ ಮೂಲಕ ವಿಜಯ್ ಅಭಿನಯದ 4ನೇ ಚಿತ್ರ 200 ಕೋಟಿ ಗಳಿಕೆ ಮಾಡಿದಂತಾಗಿದೆ.
ಮತ್ತೊಂದು ವಿಶೇಷ ಅಂದ್ರೆ ಕೇವಲ ತಮಿಳುನಾಡು ಒಂದರಲ್ಲೇ 100 ಕೋಟಿ ಕ್ಲಬ್ ಸೇರಿದೆ. ಇದು ಕೂಡ ದಾಖಲೆಯಾಗಿದೆ. ಈ ಹಿಂದೆ ತೆರೆ ಕಂಡಿದ್ದ ವಿಜಯ್ ನಟನೆಯ ಮೆರ್ಸಲ್, ಸರ್ಕಾರ್ ಹಾಗೂ ಬಿಗಿಲ್ ಚಿತ್ರಗಳು 200 ಕೋಟಿ ಗಳಿಸಿದ್ದವು. ಇದೀಗ ಈ ಪಟ್ಟಿಗೆ ಮಾಸ್ಟರ್ ಸೇರಿದೆ.
ಸಿನಿಮಾದಲ್ಲಿ ವಿಜಯ್ ಕಾಲೇಜು ಮಾಸ್ಟರ್ ಪಾತ್ರದಲ್ಲಿ ನಟಿಸಿದ್ದು, ವಿಜಯ್ ಸೇತುಪತಿ ಖಳನಟನಾಗಿ ಅಭಿನಯಿಸಿದ್ದಾರೆ.