ETV Bharat / sitara

'ಬ್ಲಾಕ್​ ಪ್ಯಾಂಥರ್​​​-2' ಚಿತ್ರೀಕರಣ ದಿನಾಂಕ ಮುಂದೂಡಿದ ಮಾರ್ವೆಲ್ ಸ್ಟುಡಿಯೋ - ಚಡ್ವಿಕ್ ಬೋಸ್​​​ಮ್ಯಾನ್ ನಿಧನ

2021 ಮಾರ್ಚ್​ನಲ್ಲಿ ಆರಂಭಿಸಲು ನಿರ್ಧರಿಸಲಾಗಿದ್ದ 'ಬ್ಲಾಕ್​ ಪ್ಯಾಂಥರ್​​​-2' ಚಿತ್ರೀಕರಣದ ದಿನಾಂಕವನ್ನು ಮಾರ್ವೆಲ್ ಸ್ಟುಡಿಯೋ ಮುಂದೂಡಿದೆ. 2021 ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Shooting for Black Panther sequel in July 2021
ಬ್ಲಾಕ್​ ಪ್ಯಾಂಥರ್ 2 ಚಿತ್ರೀರಕಣ ಮುಂದಕ್ಕೆ
author img

By

Published : Nov 21, 2020, 1:58 PM IST

'ಬ್ಲಾಕ್ ಪ್ಯಾಂಥರ್' ಖ್ಯಾತಿಯ ನಟ ಚಡ್ವಿಕ್ ಬೋಸ್​ಮ್ಯಾನ್ ಇದೇ ವರ್ಷ ಆಗಸ್ಟ್​ನಲ್ಲಿ ನಿಧನರಾಗಿದ್ದು ಅವರ ಸಾವು ಹಾಲಿವುಡ್ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿತ್ತು. ಆದ್ದರಿಂದ 2021 ಮಾರ್ಚ್​ನಲ್ಲಿ ಆರಂಭಿಸಲು ನಿರ್ಧರಿಸಿದ್ದ 'ಬ್ಲಾಕ್​ ಪ್ಯಾಂಥರ್​​​-2' ಚಿತ್ರೀಕರಣವನ್ನು 2021 ಜುಲೈನಲ್ಲಿ ಆರಂಭಿಸಲು ಮಾರ್ವೆಲ್ ಸ್ಟುಡಿಯೋ ನಿರ್ಧರಿಸಿದೆ.

ಚಡ್ವಿಕ್ ಬೋಸ್​ಮ್ಯಾನ್ ಹಠಾತ್ ನಿಧನದ ನಂತರ ನಿರ್ಮಾಪಕ ರಿಯಾನ್​ ಕ್ಲೂಗ್ಲರ್​​ ಹಾಗೂ ಮಾರ್ವೆಲ್ ಸ್ಟುಡಿಯೋ ಬಹಳ ಶಾಕ್​​​​​ನಲ್ಲಿದ್ದು ಚಿತ್ರ ನಿರ್ಮಾಣದ ವಿಚಾರವನ್ನು ಬದಿಗೊತ್ತಿತ್ತು. ಆದರೆ ಈಗ ಬೋಸ್​ಮ್ಯಾನ್ ನಿಧನದ ದು:ಖದಿಂದ ಎಲ್ಲರೂ ಹೊರ ಬರುತ್ತಿದ್ದು ಸೀಕ್ವೆಲ್ ಮಾಡಲು ಸಿದ್ಧತೆ ಮಾಡುತ್ತಿದೆ. ಇದಕ್ಕೂ ಮುನ್ನ 2021 ಮಾರ್ಚ್​ನಲ್ಲಿ ಚಿತ್ರೀಕರಣ ಆರಂಭಿಸಬೇಕು ಎನ್ನಲಾಗಿತ್ತು. ಆದರೆ ಈಗ ಸೀಕ್ವೆಲ್ ಆರಂಭದ ದಿನಾಂಕ ಮುಂದೂಡಲಾಗಿದ್ದು ಜುಲೈನಲ್ಲಿ ಚಿತ್ರೀಕರಣ ಆರಂಭಿಸಲು ನಿರ್ಧರಿಸಿರುವುದಾಗಿ ಹಾಲಿವುಡ್ ರಿಪೋರ್ಟರ್ ವರದಿ ಮಾಡಿದೆ.

ಮಾರ್ವೆಲ್ ಸ್ಟುಡಿಯೋ ಬ್ಯಾನರ್​​​ನಿಂದ ಪ್ರತಿ ವರ್ಷ ಯಾವುದಾದರೊಂದು ಚಿತ್ರ ಬಿಡುಗಡೆಯಾಗುತ್ತಿತ್ತು. ಆದರೆ 2020 ರಲ್ಲಿ ಮಾತ್ರ ಈ ಸಂಸ್ಥೆಯಿಂದ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಸದ್ಯಕ್ಕೆ 'ಬ್ಲಾಕ್​ ಪ್ಯಾಂಥರ್' ಸೀಕ್ವೆಲ್​​ ತಯಾರಿ ನಡೆದಿದ್ದು ಅಟ್ಲಾಂಟದಲ್ಲಿ ಸುಮಾರು 6 ತಿಂಗಳ ಕಾಲ ಚಿತ್ರೀಕರಣ ನಡೆಯಲಿದೆ. ಆದರೆ ಬೋಸ್​​ಮ್ಯಾನ್ ಪಾತ್ರಕ್ಕೆ ಬೇರೆ ಯಾವ ನಟನನ್ನು ಕರೆತರಲಾಗುತ್ತಿದೆ ಎಂಬ ವಿಚಾರವನ್ನು ಮಾತ್ರ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಮೆಕ್ಸಿಕನ್ ನಟ ಟೆನೋಚ್ ಹುಯೆರ್ಟಾ, ಲೆಟಿಟಿಯಾ ರೈಟ್, ಲುಪಿಟಾ ನ್ಯೊಂಗ್, ವಿನ್ಸ್ಟನ್ ಟ್ಯೂಕ್, ಏಂಜೆಲಾ ಬಾಸ್ಸೆಟ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.