ETV Bharat / sitara

ವರ್ಷಾಂತ್ಯದಲ್ಲಿ ಸಿನಿ ಪ್ರಿಯರಿಗೆ ರಸದೌತಣ: ರಿಲೀಸ್​​ಗೆ ರೆಡಿಯಾಗಿವೆ ಸ್ಟಾರ್​​ ನಟರ ಸಿನಿಮಾಗಳು

author img

By

Published : Nov 14, 2019, 11:40 AM IST

ಇದೇ ಡಿಸೆಂಬರ್​​ ತಿಂಗಳಲ್ಲಿ ಕನ್ನಡದ ಹಲವು ಸಿನಿಮಾಗಳು ರಿಲೀಸ್​ಗೆ ಸಿದ್ದವಾಗಿವೆ. ಸ್ಯಾಂಡಲ್​​​ವುಡ್​​ನಲ್ಲಿ ಸ್ಟಾರ್​​ ನಟರ ಸಿನಿಮಾಗಳು ಜೋರು ಸದ್ದು ಮಾಡುತ್ತಿವೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್, ರಾಧಿಕಾ ಕುಮಾರಸ್ವಾಮಿ ಅಭಿನಯದ ಸಿನಿಮಾಗಳು ಇದೇ ಡಿಸೆಂಬರ್​​ನಲ್ಲಿ ತೆರೆಗೆ ಅಪ್ಪಳಿಸಲಿವೆ.

ಈ ವರ್ಷಾಂತ್ಯ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ

ಈ ವರ್ಷಾಂತ್ಯ ಸಿನಿಪ್ರಿಯರಿಗೆ ಹಬ್ಬವೋ ಹಬ್ಬ! ಒಂದರ ಹಿಂದೊಂದು ಸಿನಿಮಾಗಳು ಇದೇ ಡಿಸೆಂಬರ್​ನಲ್ಲಿ ಬೆಳ್ಳಿ ತೆರೆ ಮೇಲೆ ಮೂಡಲು ನಾ ಮುಂದು ತಾ ಮುಂದು ಎನ್ನುತ್ತಾ ತುದಿಗಾಲಿನಲ್ಲಿ ನಿಂತ ಹಾಗೆ ಕಾಣಿಸುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್ ಹಾಗು ರಾಧಿಕಾ ಕುಮಾರಸ್ವಾಮಿ ಅಭಿನಯದ ಸಿನಿಮಾಗಳು ಇದೇ ಡಿಸೆಂಬರ್​​ನಲ್ಲಿ ತೆರೆಗೆ ಅಪ್ಪಳಿಸಲಿವೆ.

darshan
ದರ್ಶನ್​​ ಅಭಿನಯದ 'ಒಡೆಯ' ಚಿತ್ರದ ಪೋಸ್ಟರ್‌

ಇದೇ ತಿಂಗಳ ಕೊನೆಯ ವಾರ ಅಂದ್ರೆ ಡಿಸೆಂಬರ್​ 27ಕ್ಕೆ ರಕ್ಷಿತ್​​ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಕೂಡ ತೆರೆಗೆ ಬರುತ್ತಿದೆ. ಇದು ಕೂಡಾ ದೊಡ್ಡ ಬಜೆಟ್​​ನ ಸಿನಿಮಾವಾಗಿದ್ದು, ಮೂರು ಮಂದಿ ನಿರ್ಮಾಪಕರು ಹಣ ಹೂಡಿದ್ದಾರೆ.

rakshit
'ಅವನೇ ಶ್ರೀಮನ್ನರಾಯಣ'ದಲ್ಲಿ ರಕ್ಷಿತ್​ ಶೆಟ್ಟಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ದಬಾಂಗ್​​-3’ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ಬರುತ್ತಿದೆ. ಈ ಸಿನಿಮಾವನ್ನು ಡಿಸೆಂಬರ್​​ ತಿಂಗಳ 20ಕ್ಕೆ ರಿಲೀಸ್​ ಮಾಡಲು ಚಿತ್ರತಂಡ ಈಗಾಗಲೇ ನಿರ್ಧರಿಸಿದೆ. ಇದು ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾಗಿದೆ. ಸೋನಾಕ್ಷಿ ಸಿನ್ಹಾ ಚಿತ್ರದ ಕಥಾ ನಾಯಕಿ. ಪ್ರಭುದೇವ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಸುದೀಪ್​​ ಸಿನಿಮಾದಲ್ಲಿ ವಿಲನ್​ ಆಗಿ ಮಿಂಚಿದ್ದಾರೆ.

dabbang 3
ದಬಾಂಗ್​- 3

ಕನ್ನಡದ ಇನ್ನಿತರ ಬಹುನಿರೀಕ್ಷಿತ ಸಿನಿಮಾಗಳಾದ ಏಳು ನಿರ್ದೇಶಕರನ್ನೊಳಗೊಂಡ ರಿಷಬ್ ಶೆಟ್ಟಿ ಕಲ್ಪನೆಯ ‘ಕಥಾ ಸಂಗಮ’, ಸತೀಶ್ ನೀನಾಸಂ ಮತ್ತು ಅದಿತಿ ಪ್ರಭುದೇವ ನಟನೆಯ ‘ಬ್ರಹ್ಮಚಾರಿ’, ಜಗ್ಗೇಶ್ ಅಭಿನಯದ ‘ತೋತಾಪುರಿ’, ರಾಧಿಕಾ ಕುಮಾರಸ್ವಾಮಿ ಅಭಿನಯದ ‘ದಮಯಂತಿ’, ವಿಕಾಸ್ ಮತ್ತು ಸಿಂಧು ಲೋಕನಾಥ್ ಅಭಿನಯದ ‘ಕಾಣದಂತೆ ಮಾಯವಾದನು’, ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್’ ಸೇರಿದಂತೆ ಹಲವಾರು ಸಿನಿಮಾಗಳು ತೆರೆ ಕಾಣಲು​ ಆಗಲು ಸರತಿಯಲ್ಲಿ ನಿಂತಿವೆ.

damayanti
ದಮಯಂತಿ
jaggesh
ಜಗ್ಗೇಶ್​​
ramesh
ರಮೇಶ್​ ಅರವಿಂದ್​

ಡಿಸೆಂಬರ್ ತಿಂಗಳು ಸಿನಿಮಾ ಹಬ್ಬ

ವರ್ಷದ ಕೊನೆಯ ತಿಂಗಳು ಈ ಭಾರಿ ನೂರಾರು ಕೋಟಿಗಳಷ್ಟು ಹಣ ಹೂಡಿರುವ ಕನ್ನಡ ಸಿನಿಮಗಳು ಬಿಡುಗಡೆ ಆಗಲಿದೆ. ಛಾಲೆಂಜಿಂಗ್ ಸ್ಟಾರ್ ದರ್ಶನ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್ ಹಿಂದಿ ಸಿನಿಮಾ, ಅಲ್ಲದೆ ಇನ್ನ ಆರು ಪ್ರತಿಭಾನ್ವಿತ ಕನ್ನಡ ನಟರುಗಳ ಸಿನಿಮಗಳು ಬಿಡುಗಡೆಯ ಹೊಸ್ತಿಲಲ್ಲಿ ಇದೆ.

ಡಿಸೆಂಬರ್ 12 ರಂದು ಛಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆಯ ಎಂದು ಸುದ್ದಿ ತಲುಪಿಸಿದ್ದಾರೆ ನಿರ್ದೇಶಕ ಎಂ ಡಿ ಶ್ರೀಧರ್. ಇದು ಸಂದೇಶ್ ಕಂಬೈನ್ಸ್ ಚಿತ್ರ. ಇದೆ ವರ್ಷ ಅಮರ್ ಅಭಿಷೇಕ್ ಅಂಬರೀಶ್ ಚಿತ್ರ ಸಂದೇಶ್ ಕಂಬೈನ್ಸ್ ನಿರ್ಮಾಣ ಮಾಡಿತ್ತು.ಈಗ ಮತ್ತೊಂದು ದೊಡ್ಡ ಬಜೆಟಿನ ಸಿನಿಮಾ  ಒಡೆಯ ಬರುತ್ತಿದ್ದಾನೆ.

ಈ ಡಿಸೆಂಬರ್ ತಿಂಗಳ ಕಡೆಯ ವಾರ ಬಿಡುಗಡೆಗೆ ಸಜ್ಜಾಗಿರಿವುದು ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ ನಾರಾಯಣ ಕನ್ನಡ ಸಿನಿಮಾ. ದೊಡ್ಡ ಬಜೆಟಿನ, ಭಾರಿ ತಾರಗಣದ ಚಿತ್ರ ಮೂರು ನಿರ್ಮಾಪಕರುಗಳಿಂದ ಈ ಸಿನಿಮಾಕ್ಕೆ ಹಣ ಹೂಡಲಾಗಿದೆ. ಈ ಚಿತ್ರದಿಂದ ವಿಶ್ವಾದ್ಯಂತ 300 ಕೋಟಿ ರೂಪಾಯಿ ವ್ಯಾಪಾರ ಮಾಡಲಾಗುವುದು ಎಂಬ ಲೆಕ್ಕಾಚಾರ ಸಹ ಈಗಾಗಲೇ ತಲುಪಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ದಬಾಂಗ್ 3 ಕನ್ನಡ ಭಾಷೆಯಲ್ಲೂ ಸಹ ಡಬ್ ಆಗಿ ಬರುತ್ತಿದೆ ಡಿಸೆಂಬರ್ ತಿಂಗಳಿನಲ್ಲಿ. ಇದು ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ. ಸೋನಾಕ್ಷಿ ಸಿನ್ಹಾ ಚಿತ್ರದ ಕಥಾ ನಾಯಕಿ. ಕನ್ನಡದವರೆ ಆದ ಪ್ರಭು ದೇವ ಈ ಚಿತ್ರದ ನಿರ್ದೇಶಕರು.

ಕನ್ನಡದ ಇನ್ನಿತರ ಬಹು ನಿರೀಕ್ಷಿತ ಸಿನಿಮಗಳಾದ ಏಳು ನಿರ್ದೇಷ್ಕರುಗಳ ರಿಷಬ್ ಶೆಟ್ಟಿ ಕಥಾ ಸಂಗಮ’, ಸತೀಶ್ ನೀನಾಸಮ್, ಅದಿತಿ ಪ್ರಭುದೇವ ಬ್ರಹ್ಮಚಾರಿ’, ಜಗ್ಗೇಶ್ ಅಭಿನಯದ ತೋತಾಪುರಿ ತೊಟ್ಟು ಕಿಲ್ಬೆಕು’.. ರಾಧಿಕಾ ಕುಮಾರಸ್ವಾಮಿ ದಮಯಂತಿ’, ವಿಕಾಸ್, ಸಿಂಧು ಲೋಕನಾಥ್ ಅಭಿನಯದ ಕಾಣದಂತೆ ಮಾಯವಾದನು’, ರಮೇಶ್ ಅರವಿಂದ್ ಶಿವಾಜಿ ಸುರತ್ಕಲ್’, ಹೊಸಬರ ಸಿನಿಮಗಳಾದ ತಕ್ಕರ್ (ದರ್ಶನ್ ಸಂಬಂದಿ ಮನೋಜ್ ನಾಯಕ), ಸೂರಜ್ ಕೃಷ್ಣ (ಗಣೇಶ್ ಸಹೋದರ) ಅಭಿನಯದ ನಾನೇ ರಾಜ’....ಹೀಗೆ ಹಲವಾರು ಸಿನಿಮಗಳು ಕ್ಯೂ ಅಲ್ಲಿ ನಿಂತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.