ETV Bharat / sitara

ಮಂಡ್ಯ ಸಂಸದೆ ಸುಮಲತಾಗೆ ಕೈ ಮುಗಿದು ಗೌರವ ಸೂಚಿಸಿದ ಮೋದಿ - undefined

ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿದ್ದಾರೆ. ನಿನ್ನೆ ಕೇಂದ್ರ ಜಲಶಕ್ತಿ ಸಚಿವರ ಜೊತೆ ಮಾತುಕತೆ ನಡೆಸಿದ ಅವರು, ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ.

ಚಿತ್ರಕೃಪೆ : ಟ್ವಿಟರ್​
author img

By

Published : Jun 21, 2019, 9:01 PM IST

ಬೆಂಗಳೂರು: ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್​ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ.

ನವದೆಹಲಿಯಲ್ಲಿಂದು ಈ ಔಪಚಾರಿಕ ಭೇಟಿ ನಡೆಯಿತು. ಪ್ರಧಾನಿ ಮೋದಿ, ಸುಮಲತಾರಿಗೆ ಕೈ ಮುಗಿದು ಗೌರವ ಸೂಚಿಸಿದ್ದಾರೆ. ಇದೇ ವೇಳೆ ಸುಮಲತಾ ಕೂಡಾ ಎರಡು ಕೈ ಜೋಡಿಸಿ ಪ್ರತಿಗೌರವ ಸೂಚಿಸಿದ್ದಾರೆ. ಈ ವೇಳೆ ಕಲಬುರಗಿ ಬಿಜೆಪಿ ಸಂಸದ ಉಮೇಶ್ ಜಾಧವ್ ಕೂಡ ಹಾಜರಿದ್ದರು. ಈ ಪೋಟೋಗಳನ್ನು ಸುಮಲತಾ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನಿನ್ನೆಯಷ್ಟೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದ ಸುಮಲತಾ, ಮಂಡ್ಯ ರೈತರ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು, ಅವುಗಳ ಪರಿಹಾರಕ್ಕೆ ಮನವಿ ಸಲ್ಲಿಸಿದ್ದರು.

ಪ್ರಧಾನಿ ಮೋದಿ ಅವರ ಭೇಟಿ ಮಾಡಿದ ಮಂಡ್ಯ ನೂತನ ಸಂಸದೆ...!!!

ಕಳೆದ ನಾಲ್ಕೈದು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ಮಂಡ್ಯದ ನೂತನ‌ ಸಂಸದೆ ಸುಮಲತಾ ಅಂಬರೀಶ್ ,ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಸುಮಲತಾ ಅವರನ್ನು ತುಂಭಾ ಗೌರವವಾಗಿ ಮಾತನಾಡಿಸಿದ್ದಾರೆ ಮೋದಿಯವರನ್ನು ಭೇಟಿ ಮಾಡಿದಾಗ ಸುಮಲತಾ ಅವರು ಪ್ರಧಾನಿಗೆ ಕೈ ಮುಗಿದು ಗೌರವ ಸೂಚಿಸಿದ್ದಾರೆ.ಅಲ್ಲದೆ ಮೋದಿ ಕೂಡ ಸುಮಲತಾ ಅವರಿಹೆ ಕೈ ಮುಗಿದು ಗೌರವದಿಂದ ಸುಮಲತಾ ಅವರನ್ನು ಮಾತನಾಡಿಸಿದ್ದಾರೆ. ಅಲ್ಲದೆ ಮೋದಿಯವರ ಜೊತೆ ಸುಮಲತಾ ಪೋಟೋ ತೆಗೆಸಿಕೊಂಡಿದ್ದಾರೆ.ಇನ್ನೂ ಈ ಪೋಟೋಗಳನ್ನು ಸುಮಲತಾ ಅವರ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಸುಮಲತಾ ಅಂಬರೀಶ್ ಕಳೆದ ನಾಲ್ಕೈದು ದಿನಗಳಿಂದ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡ್ತಿದ್ದು ತುಂಭಾ ಕುತೂಹಲ ಕೆರಳಿಸಿದೆ.ಜೊತೆಗೆ ರಾಜ್ಯದ ಕಾಂಗ್ರೆಸ್ ನಾಯಕರ ಜೊತೆಗೂ ಉತ್ತಮ‌ ಬಾಂದವ್ಯ ಹೊಂದಿರುವ ಸುಮಲಾತಾ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಜೊತೆ ಸುಮಲತಾ ಅವರು ಕಾಣಿಸಿಕೊಳ್ತಿದ್ದಾರೆ ಎಂಬ ಮಾತು ಸದ್ಯ ರಾಜಕೀಯ ವಲಯದಲ್ಲಿ ಕೇಳಿಬರ್ತಿದೆ...

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.