ನವದೆಹಲಿ:ನಟಿ ಮಂದಿರಾ ಬೇಡಿ ಅಗಲಿದ ಪತಿಯನ್ನು ನೆನೆದು ಮತ್ತೊಮ್ಮೆ ಭಾವುಕರಾಗಿದ್ದಾರೆ. ಚಿತ್ರ ನಿರ್ಮಾಪಕ ದಿವಂಗತ ರಾಜ್ ಕೌಶಲ್ ಅವರನ್ನು ನೆನೆದು ಮಂದಿರಾ ಭಾವಾನಾತ್ಮಕ ಪೋಸ್ಟ್ ವೊಂದನ್ನು ಹಾಕಿದ್ದಾರೆ.
'ರಾಜಿ' ಎಂದು ಬರೆದಿರುವ ಚಿತ್ರವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ''ಮಿಸ್ ಯು ರಾಜಿ '' ಎಂದು ಮಂದಿರಾ ಬೇಡಿ ಬರೆದು ಕೊಂಡಿದ್ದಾರೆ. ಮಂಗಳವಾರ ರಾತ್ರಿ 'Miss You Raji' ಎಂದು ಮಂದಿರಾ ಪೋಸ್ಟ್ ಹಾಕಿದ್ದಾರೆ. 1999 ರಲ್ಲಿ ರಾಜ್ ಕೌಶಲ್ ಹಾಗೂ ಮಂದಿರಾ ಬೇಡಿ ವಿವಾಹವಾಗಿದ್ದರು. ಇವರಿಗೆ ವೀರ್ ಎಂಬ ಮಗನಿದ್ದು, ಹೆಣ್ಣು ಮಗುವೊಂದನ್ನು ದತ್ತು ಪಡೆಯಲು ಬಯಸಿ ಕಳೆದ ಜುಲೈನಲ್ಲಿ ದತ್ತು ಪಡೆಯುವ ಮೂಲಕ ಮಗಳನ್ನು ರಾಜ್ ದಂಪತಿ ಮನೆಗೆ ಬರಮಾಡಿಕೊಂಡಿದ್ದರು.
ಮಂದಿರಾ ಬೇಡಿ ಪತಿ 49 ವರ್ಷ ವಯಸ್ಸಿನ ರಾಜ್ ಕೌಶಲ್ ಇತ್ತೀಚೆಗಷ್ಟೇ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾದರು. ಕಾಪಿರೈಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ರಾಜ್ ಕೌಶಲ್ ಅವರು 1998 ರಲ್ಲಿ ತಮ್ಮದೇ ಆದ ಜಾಹೀರಾತು ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು ಮತ್ತು 800 ಕ್ಕೂ ಹೆಚ್ಚು ಜಾಹೀರಾತುಗಳನ್ನು ನಿರ್ದೇಶಿಸಿದರು. ಜೊತೆಗೆ ಪ್ಯಾರ್ ಮೇ ಕಭಿ ಕಭಿ, ಶಾದಿ ಕಾ ಲಾಡು ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದರು.