ETV Bharat / sitara

ಪ್ರೀತಿಯ 'ಇಚ್ಚಕ್ಕಾ'ನೊಂದಿಗಿನ ಮೋಹನ್​ಲಾಲ್ ಫೋಟೊ ವೈರಲ್

author img

By

Published : Jan 8, 2021, 6:54 AM IST

ಮಂದಹಾಸದ ಮುಖದಿಂದ ಕೂಡಿದ ಮಮ್ಮುಟ್ಟಿ ಜೊತೆಗಿರುವ ಕ್ಯಾಂಡಿನ್ ಫೋಟೋವನ್ನು ಮೋಹನ್​ಲಾಲ್ ಹಂಚಿಕೊಂಡಿದ್ದು, ಜೊತೆಗೆ ವಿತ್​ 'ಇಚ್ಚಕ್ಕಾ' ( ಅಣ್ಣ) ಎಂದು ಬರೆದುಕೊಂಡಿದ್ದಾರೆ. ಸದ್ಯ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Malyalam Actor Mohanlal Shared Pictur with Mammutty
ಮಮ್ಮುಟ್ಟಿಯೊಂದಿಗಿನ ಫೋಟೋ ಹಂಚಿಕೊಂಡ ಮೋಹನ್​ಲಾನ್

ಮಾಲಿವುಡ್​ನ ಸುಪ್ರಸಿದ್ಧ ನಟರಾದ ಮೋಹನ್​ಲಾಲ್​ ಮತ್ತು ಮಮ್ಮುಟ್ಟಿ ನಡುವಿನ ಸಹೋದರ ಬಂಧ ಇಂದು ನಿನ್ನೆಯದಲ್ಲ. ಕೆಲವೊಂದು ಸಲ, ಈ ನಟರು ಜೊತೆಗಿರುವ ಫೋಟೋ ಹಂಚಿಕೊಂಡರೆ, ಅದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುವುದಿದೆ. ಅದೇ ರೀತಿ ಇತ್ತೀಚೆಗೆ ಮಮ್ಮುಟ್ಟಿ ಜೊತೆಗಿರುವ ಫೋಟೋ ಒಂದನ್ನು ಮೋಹನ್​ಲಾಲ್ ತಮ್ಮ ಇನ್​​​ಸ್ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ.

ಮಂದಹಾಸದ ಮುಖದಿಂದ ಕೂಡಿದ ಮಮ್ಮುಟ್ಟಿ ಜೊತೆಗಿರುವ ಕ್ಯಾಂಡಿಡ್​ ಫೋಟೋವನ್ನು ಮೋಹನ್​ಲಾಲ್ ಹಂಚಿಕೊಂಡಿದ್ದು, ಜೊತೆಗೆ ವಿತ್​ 'ಇಚ್ಚಕ್ಕಾ' ( ಅಣ್ಣ) ಎಂದು ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ತಾರಾಪಟ್ಟ ಬಂದ ಬಳಿಕ, ನಟ - ನಟಿಯರು ಪರಸ್ಪರ ಮುಖವೇ ನೋಡುವುದಿಲ್ಲ. ಅಂತಹುದರಲ್ಲಿ ಪ್ರಸಿದ್ದ ನಟನೋರ್ವ, ಇನ್ನೋರ್ವ ಸ್ಟಾರ್​ ನಟನನ್ನು ಅಣ್ಣಾ ಎಂದು ಕರೆಯುತ್ತಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ :ಬ್ರೇಕ್​ ಇಲ್ಲದ ಗಾಡಿಯಂತೆ ನುಗ್ಗುತ್ತಿದೆ ಕೆಜಿಎಫ್​ 2 ಟೀಸರ್​... 7 ಗಂಟೆಯಲ್ಲಿ ಒಂದೂವರೆ ಕೋಟಿ ಜನ ವೀಕ್ಷಣೆ!

ಮಮುಟ್ಟಿಯನ್ನು ಸಾಮಾನ್ಯವಾಗಿ ಎಲ್ಲರೂ 'ಮಮ್ಮುಕ್ಕ' ಎಂದು ಕರೆಯುದುಂಟು, ಆದರೆ, ಮೋಹನ್​ಲಾಲ್​ ಮಾತ್ರ ಅವರನ್ನು 'ಇಚ್ಚಕ್ಕಾ' ಎಂದು ಪ್ರೀತಿಯಿಂದ ಕರೆಯತ್ತಾರೆ. ​ಫೋಟೋದಲ್ಲಿ ಮುಮ್ಮುಟ್ಟಿಯವರು, ಅರ್ಧ ತೋಳಿನ ತಿಳಿ ಗುಲಾಬಿ ಬಣ್ಣದ ಶರ್ಟ್ ಧರಿಸಿ, ಗಡ್ಡ ಕೂದಲು ಬಿಟ್ಟು ಯುವಕನಂತೆ ಮಿಂಚುತ್ತಿದ್ದರೆ, ಮೋಹನ್ ಲಾಲ್ ಕಪ್ಪು ಬಣ್ಣದ ಫುಲ್ ಸ್ಲೀವ್ ಶರ್ಟ್ ಧರಿಸಿ, ಇಚ್ಚಕ್ಕಾನ ಕಿವಿಯಲ್ಲಿ ಏನೋ ಹೇಳುತ್ತಿದ್ದಾರೆ.

ಸದ್ಯ, ಮೋಹನ್​ಲಾಲ್ ಹಂಚಿಕೊಂಡಿರುವ ಈ ಫೋಟೋ ವೈರಲ್​ ಆಗಿದ್ದು, ಅಭಿಮಾನಿಗಳು ಕಮೆಂಟ್, ಲೈಕ್​ಗಳ ಮೂಲಕ ಇಬ್ಬರು ನಟರ ಭಾಂದವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದಾದರೂ ಹೊಸ ಸಿನಿಮಾ ಮಾಡುವ ಯೋಚನೆ ಇದ್ಯಾ..? ಇಬ್ಬರು ಸ್ಕ್ರೀನ್ ಮೇಲೆ ಒಟ್ಟಾಗಿ ಕಾಣಿಸಿಕೊಳ್ತಿದ್ದೀರಾ.? ಎಂದು ಪ್ರಶ್ನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.