ಶಿಮ್ಲಾ: ಖ್ಯಾತ ಮಲಯಾಳಂ ನಟಿ ಮಂಜು ವಾರಿಯರ್ ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ.
ಶೂಟಿಂಗ್ ನಿಮಿತ್ತ ಹಿಮಾಚಲ ಪ್ರದೇಶಕ್ಕೆ ತೆರಳಿರುವ ಮಂಜು ವಾರಿಯರ್ ಹಾಗೂ ಚಿತ್ರತಂಡದ 30 ಜನರು ಹಿಮಾಚಲ ಪ್ರದೇಶದ ಚತ್ರು ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ನಿನ್ನೆ ರಾತ್ರಿ ಸ್ಯಾಟ್ಲೈಟ್ ಫೋನ್ ಮೂಲಕ ತಮ್ಮ ಸಹೋದರನಿಗೆ ಕರೆ ಮಾಡಿದ್ದ ನಟಿ ತಮ್ಮ ಗಂಡಾಂತರ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರಂತೆ. ತಮ್ಮ ತಂಡದ 30 ಜನ ಸೇರಿ ಸುಮಾರು 200ಕ್ಕೂ ಹೆಚ್ಚು ಮಂತ್ರಿ ಪ್ರವಾಹದಲ್ಲಿ ಸಿಲುಕಿದ್ದು, ಸಂಪೂರ್ಣ ಜನಸಂಪರ್ಕದಿಂದ ಕಡಿತಗೊಂಡಿದ್ದಾರಂತೆ. ಕೇವಲ ಒಂದು ದಿನಕ್ಕೆ ಆಗುವಷ್ಟು ಆಹಾರ ತಮ್ಮ ಬಳಿಯಿದ್ದು, ಬೇಗನೆ ನೆರವಿಗೆ ಧಾವಿಸುವಂತೆ ಕೇಳಿಕೊಂಡಿದ್ದಾರೆ ಎಂದು ನಟಿಯ ಸಹೋದರ ತಿಳಿಸಿದ್ದಾರೆ.
ಈ ಬಗ್ಗೆ ಕೇರಳ ಸಚಿವ ವಿ.ಮುರಳೀಧರ ಗಮನಕ್ಕೆ ತರಲಾಗಿದ್ದು, ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳ ಜತೆ ಮಾತಾಡಿದ್ದಾರೆ ಎಂದು ನಟಿ ಮಂಜು ವಾರಿಯರ್ ಸಹೋದರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನೆಟವರ್ಕ್ ಸರಿಯಾಗಿ ಸಿಗದ ಹಿನ್ನೆಲೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಇದೇ ವೇಳೆ ಅವರು ಹೇಳಿದ್ದಾರೆ.