'ಅಧ್ಯಕ್ಷ' ಸಿನಿಮಾ ಖ್ಯಾತಿಯ ನಟ ಶರಣ್ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಬೇಡಿಕೆ ಹೊಂದಿದ್ದಾರೆ. ಇದೀಗ ಅವರು 'ಅವತಾರ ಪುರುಷ'ನಾಗಿ ಪ್ರೇಕ್ಷಕರಿಗೆ ಮನರಂಜಿಸಲಿದ್ದಾರೆ. ಈ ಮೂಲಕ ಪುಷ್ಕರ್ ಫಿಲ್ಮ್ಸ್ ಮತ್ತೊಮ್ಮೆ ವಿಭಿನ್ನ ಸಿನಿಮಾ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದೆ.
ಶರಣ್ ನಟನೆಯ ಸಿನಿಮಾ ಅಂದ್ರೆ ಕಾಮಿಡಿಗೇನು ಕೊರತೆಯಿರುವುದಿಲ್ಲ, ಜೊತೆಗೆ ಡಿಫರೆಂಟ್ ಸ್ಟೋರಿ ಬಯಸೋರಿಗೂ ಕೂಡ ನಿರಾಸೆಯಾಗೋಲ್ಲ ಎಂಬ ಮಾತಿದೆ.
2 ಭಾಗಗಳಲ್ಲಿ 'ಅವತಾರ ಪುರುಷ':
ಈ ಸಿನಿಮಾ ಕೂಡ ಕೆಜಿಎಫ್ ಮಾದರಿಯಲ್ಲೇ 2 ಭಾಗಗಳಲ್ಲಿ ಬರಲಿದೆ. ಕೆಜಿಎಫ್ (KGF) ಈಗಾಗಲೇ ಮೊದಲೇ ಭಾಗದಿಂದಲೇ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದ್ದು, 2ನೇ ಭಾಗದ ರಿಲೀಸ್ಗೂ ಸಿನಿ ಅಭಿಮಾನಿಗಳು ಕಾತರರಾಗಿದ್ದಾರೆ. 'ಬಾಹುಬಲಿ' ಕೂಡ 2 ಭಾಗಗಳಲ್ಲಿ ಬಂದು ಇಡೀ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಸ್ಯಾಂಡಲ್ವುಡ್ನ ಮತ್ತೊಂದು ಸಿನಿಮಾ, ಅದ್ರಲ್ಲೂ ಶರಣ್ ಅಭಿನಯದ ಸಿನಿಮಾ ಅವತಾರ ಪುರುಷ 2 ಭಾಗಗಳಲ್ಲಿ ತೆರೆಮೇಲೆ ಮೂಡಿ ಬರಲಿದೆ.
ಮೇಕಿಂಗ್ ವಿಡಿಯೋ ರಿಲೀಸ್:
ಶರಣ್ ರಾಜ್ ಅವರ ವೃತ್ತಿ ಜೀವನದಲ್ಲಿಯೇ ಇದು ಅತಿ ಹೆಚ್ಚು ಬಜೆಟ್ನ ಸಿನಿಮಾ ಆಗಿದೆ. ಸಿನಿಮಾವನ್ನು ಭರ್ಜರಿಯಾಗಿ ರಿಲೀಸ್ ಮಾಡಲು ತಯಾರಿ ನಡೆಯುತ್ತಿದೆ. ನವೆಂಬರ್ ಅಂತ್ಯದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲೇ ಅಂದ್ರೆ ದೀಪಾವಳಿಗೂ ಮುನ್ನ ಸಿನಿಮಾ ತಂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡಲು ಹೊರಟಿದೆ. ಹೌದು ಮೇಕಿಂಗ್ ವಿಡಿಯೋ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದೆ.
ಆಶಿಕಾ ರಂಗನಾಥ್ ಹಾಗೂ ಶರಣ್ ಜೋಡಿಯಾಗಿರುವ ಈ ಸಿನಿಮಾದ ಪೋಸ್ಟರ್ಗಳು, ಟೀಸರ್ಗಳು ಸಖತ್ ಕ್ಯೂರಿಯಾಸಿಟಿ ಹುಟ್ಟು ಹಾಕಿ, ಅಭಿಮಾನಿಗಳ ಕಾತರತೆಯನ್ನೂ ಹೆಚ್ಚಿಸಿವೆ. ಈ ಸಿನಿಮಾ ಹಾರರ್ ಕಾಮಿಡಿ ಎಲಿಮೆಂಟ್ ಹೊಂದಿದ್ದು, ಥ್ರಿಲ್ಲಿಂಗ್, ಸಸ್ಪೆನ್ಸ್, ಟ್ವಿಸ್ಟ್ಗಳು ಇರಲಿವೆ.
ಇದನ್ನೂ ಓದಿ: Bhajarangi2 : ಸೆಂಚುರಿ ಸ್ಟಾರ್ ಎದುರು ಅಬ್ಬರಿಸಲಿರೋ ಯುವ ಖಳನಟ ಚೆಲುವರಾಜ್
ಡಿಫರೆಂಟ್ ಕಥೆ, ಸ್ಕ್ರೀನ್ ಪ್ಲೇ ಗಳ ಮೂಲಕವೇ ಜನರ ಮನ ಸೆಳೆಯುವ ನಿರ್ದೇಶಕ ಸಿಂಪಲ್ ಸುನಿ ಅವತಾರ ಪುರುಷನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಸಾಯಿಕುಮಾರ್, ಸುಧಾರಾಣಿ, ಅಯ್ಯಪ್ಪ, ಭವ್ಯ, ಕಾಮಿಡಿ ಕಿಂಗ್ ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ಇನ್ನೂ ದೊಡ್ಡ ತಾರಾಬಳಗವೇ ಇದೆ. ಸದ್ಯದಲ್ಲೇ ಅವತಾರ ಪುರುಷ ಸಿನಿಮಾಪ್ರಿಯರಿಗೆ ದರ್ಶನ ನೀಡಲಿದೆ.