ಬೆಂಗಳೂರು: ಕನ್ನಡದ ಜನಪ್ರಿಯ ಕಾಮಿಡಿ ಶೋ ಮಜಾ ಟಾಕೀಸ್ ಸೀಸನ್- 3 ಸದ್ಯದಲ್ಲೇ ಪ್ರಸಾರವಾಗಲಿದೆ ಎಂಬ ಮಾತು ಕಿರುತೆರೆ ವೀಕ್ಷಕರಿಗೆಲ್ಲಾ ತಿಳಿದಿರುವ ವಿಚಾರ. ಆದರೆ ಯಾವಾಗ ಪ್ರಾರಂಭವಾಗುತ್ತೆ ಎಂಬ ಕುತೂಹಲ ವೀಕ್ಷಕರಿಗೆ, ಅದರಲ್ಲೂ ಮಜಾ ಟಾಕೀಸ್ ಪ್ರಿಯರಿಗಿತ್ತು. ಇದೀಗ ವೀಕ್ಷಕರ ಕುತೂಹಲಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಮಜಾ ಟಾಕೀಸ್ ರೂವಾರಿ ಸೃಜನ್ ಲೋಕೇಶ್.
![maja talkies season three date announce](https://etvbharatimages.akamaized.net/etvbharat/prod-images/kn-bng-06-majatalkies-photo-ka10018_21082020192928_2108f_1598018368_430.jpg)
ಮುಂದಿನ ವಾರಾಂತ್ಯ ಅಂದರೆ ಆಗಸ್ಟ್ 29ರಂದು ಮಾಜಾ ಟಾಕೀಸ್ ಸೀಸನ್ 3 ರ ಮೊದಲ ಸಂಚಿಕೆ ಪ್ರಸಾರ ಕಾಣಲಿದೆ. ತದ ನಂತರ ಪ್ರತಿ ವಾರಾಂತ್ಯ ರಾತ್ರಿ 8 ಗಂಟೆಗೆ ಮಜಾ ಟೀಮ್ ನಿಮ್ಮ ಮನೆ ಮನದಲ್ಲಿ ನಗುವಿನ ಅಲೆ ಹರಿಸಲಿದೆ.
- View this post on Instagram
MAJA MATTE SHURU #majatalkies #srujanlokesh #colorskannada #lokeshproductions
">
ಹಿಂದಿಯ ಕಾಮಿಡಿ ಟಾಕ್ ಶೋ ಕಾಫಿ ವಿತ್ ಕರಣ್ ನ ರಿಮೇಕ್ ಆದ ಮಜಾ ಟಾಕೀಸ್ ತನ್ನ ವಿಭಿನ್ನವಾದ ಹಾಸ್ಯದೊಂದಿಗೆ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರತಿ ಸಂಚಿಕೆಯಲ್ಲೂ ನವಿರಾದ ಹಾಸ್ಯ, ಸೆಲೆಬ್ರಿಟಿ ಅತಿಥಿಗಳ ಮಾತುಕತೆ ನಡೆಸುವ ಮಜಾ ಟಾಕೀಸ್ ಹಿಂದೆ 500 ಸಂಚಿಕೆಗಳನ್ನು ಪೂರೈಸಿತ್ತು.
ಹೀಗಾಗಿ ಈ ಶೋ ಮರಳಿ ಹೊಸ ಸೀಸನ್ ನೊಂದಿಗೆ ಬರುತ್ತಿರುವುದು ಕಿರುತೆರೆ ವೀಕ್ಷಕರ ಸಂತಸ ಹೆಚ್ಚಿಸಿದೆ. ಮಜಾ ಟಾಕೀಸ್ ನ ಹೊಸ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಷ್ಟು ದಿನ ತೆರೆಯ ಮೇಲೆ ಮಾತಿನ ಮಲ್ಲ, ಟಾಕಿಂಗ್ ಸ್ಟಾರ್ ಸೃಜನ್ ಅವರನ್ನು ಮಿಸ್ ಮಾಡುತ್ತಿದ್ದ ಜನರಿಗೆ ಮುಂದಿನ ವಾರಾಂತ್ಯದಿಂದ ಅವರನ್ನು ಕಾಣುವ ಅವಕಾಶ ಸಿಗಲಿದೆ.