ETV Bharat / sitara

'ಪತಿಯೇ ಎಲ್ಲಾ..ಡ್ರಗ್ಸ್ ಅಗತ್ಯತೆ ನನಗಿಲ್ಲ'....ಪ್ರಿನ್ಸ್​ಗೆ ಪತ್ನಿಯ 'ಪ್ರೇಮ ಸಂದೇಶ'

ನಟ ಮಹೇಶ್ ಬಾಬು ಅಭಿಮಾನಿಗಳು 'ಡಿಯರ್​ ಡ್ರಗ್ಸ್​​..ನಿನ್ನ ಅಗತ್ಯತೆ ನನಗಿಲ್ಲ. ಈಗಾಗಲೇ ನಾನು ಮಹೇಶ್​ ಬಾಬು ವ್ಯಸನಿ ಆಗಿಬಿಟ್ಟಿದ್ದೇನೆ. ಎನ್ನುವ ಅಭಿಯಾನ ಪ್ರಾರಂಭಿಸಿದ್ದಾರೆ. ಮಹೇಶ್ ಪತ್ನಿ ಹಾಗೂ ನಟಿ ನಮ್ರತಾ ಕೂಡ ಜೈ ಎಂದಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Apr 17, 2019, 7:56 PM IST

'ಡಿಯರ್​ ಡ್ರಗ್ಸ್​​..ನಿನ್ನ ಅಗತ್ಯತೆ ನನಗಿಲ್ಲ. ಈಗಾಗಲೇ ನಾನು ಮಹೇಶ್​ ಬಾಬು ವ್ಯಸನಿ ಆಗಿಬಿಟ್ಟಿದ್ದೇನೆ'. ಹೀಗೊಂದು ವಿಶೇಷವಾದ ಸಂದೇಶವೊಂದು ಸೌತ್​ ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ಬಂದಿದೆ.

ಈ ಮೇಲಿನ ಸಾಲು ಟಾಲಿವುಡ್ ಪ್ರಿನ್ಸ್​ ಮೇಲಿರುವ ಪ್ರೀತಿಯನ್ನು ಸಾರುತ್ತಿದೆ. ಹೀಗೆ ಈ ಹ್ಯಾಂಡ್​ಸಮ್​ ಹಂಕ್​ಗೆ ಸಾಗರದಷ್ಟು ಪ್ರೀತಿಯ ಧಾರೆಯೆರೆದಿರುವುದು ಅವರ ಪತ್ನಿ ನಮ್ರತಾ ಶಿರೋಡ್ಕರ್​.

ಹೌದು, ಟಾಲಿವುಡ್​ನ ಕ್ಯೂಟ್ ಕಪಲ್​ಗಳಲ್ಲಿ ಮಹೇಶ್​-ನಮ್ರತಾ ಜೋಡಿಯು ಒಂದು. ಈ ಸ್ವೀಟ್ ಕಪಲ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟು 14 ವರ್ಷಗಳು ತುಂಬಿವೆ. ಇಂದಿಗೂ ಕೂಡ ಎಂದೂ ಬತ್ತದ ಪ್ರೀತಿಯ ಚಿಲುಮೆಯಂತಿದೆ ಈ ದಂಪತಿ.

ಪತಿ ಪ್ರಿನ್ಸ್​ ಅವರನ್ನು ಎಲ್ಲಿಲ್ಲದಂತೆ ಪ್ರೀತಿಸುವ ನಮ್ರತಾ, ನಿನ್ನೆ 'ಡಿಯರ್​ ಡ್ರಗ್ಸ್​​..ನಿನ್ನ ಅಗತ್ಯತೆ ನನಗಿಲ್ಲ. ಈಗಾಗಲೇ ನಾನು ಮಹೇಶ್​ ಬಾಬು ವ್ಯಸನಿ ಆಗಿಬಿಟ್ಟಿದ್ದೇನೆ' ಎನ್ನುವ ಫೋಸ್ಟ್ ಮಾಡಿ ಪತಿ ಮೇಲಿನ ಪ್ರೀತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ತೋರ್ಪಡಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಮಹೇಶ್ ಬಾಬು ಅಭಿಮಾನಿಗಳು 'ಡಿಯರ್​ ಡ್ರಗ್ಸ್​​..ನಿನ್ನ ಅಗತ್ಯತೆ ನನಗಿಲ್ಲ. ಈಗಾಗಲೇ ನಾನು ಮಹೇಶ್​ ಬಾಬು ವ್ಯಸನಿ ಆಗಿಬಿಟ್ಟಿದ್ದೇನೆ, ಎನ್ನುವ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಮೂಲಕ ನಾವು ಪಕ್ಕಾ ಪ್ರಿನ್ಸ್ ಫ್ಯಾನ್ಸ್​. ನಮಗೆ ಅವರೇ ಎಲ್ಲಾ, ಮತ್ತಿನ್ನೇನೂ ಬೇಕಿಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಅಭಿಮಾನಿಗಳು ಈ ಅಭಿನಾಯಕ್ಕೆ ಪ್ರಿನ್ಸ್ ಪತ್ನಿ ಕೂಡ ಸಾಥ್ ಕೊಟ್ಟಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.