ETV Bharat / sitara

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಹೋದರ ವಿಧಿವಶ, ಇಂದು ಅಂತ್ಯಕ್ರಿಯೆ - ನಟ ರಮೇಶ್ ಬಾಬು ಅಂತ್ಯಕ್ರಿಯೆ

ತೆಲುಗು ಚಿತ್ರರಂಗದ ಸೂಪರ್​ಸ್ಟಾರ್ ಕೃಷ್ಣ ಅವರ ಪುತ್ರ ಹಾಗೂ ಪ್ರಿನ್ಸ್ ಮಹೇಶ್ ಬಾಬು ಅವರ ಹಿರಿಯ ಸಹೋದರ ನಟ ರಮೇಶ್ ಬಾಬು ವಿಧಿವಶರಾಗಿದ್ದು, ಇಂದು ಮಧ್ಯಾಹ್ನ ಅಂತ್ಯಕ್ರಿಯೆ ಜರುಗಲಿದೆ.

MAHESHBABU BROTHER RAMESH BABU CREMATION
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಹೋದರ ಅನಾರೋಗ್ಯದಿಂದ ವಿಧಿವಶ, ಇಂದು ಅಂತ್ಯಕ್ರಿಯೆ
author img

By

Published : Jan 9, 2022, 10:36 AM IST

ಹೈದರಾಬಾದ್: ಟಾಲಿವುಡ್ ಪ್ರಿನ್ಸ್​ ಮಹೇಶ್ ಬಾಬು ಸಹೋದರರಾದ ನಟ ಹಾಗೂ ನಿರ್ಮಾಪಕ ರಮೇಶ್ ಬಾಬು (56) ಅನಾರೋಗ್ಯ ಕಾರಣದಿಂದಾಗಿ ನಿನ್ನೆ ನಿಧನರಾಗಿದ್ದು, ಹೈದರಾಬಾದ್​ನ ಜ್ಯೂಬಿಲಿಹಿಲ್ಸ್​ನಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ಜರುಗಲಿದೆ.

ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣ ಅವರ ಹಿರಿಯ ಮಗ ರಮೇಶ್ ಬಾಬು ಯಕೃತ್ತು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ ಸಂಜೆ ಅವರು ತೀವ್ರ ಅಸ್ವಸ್ಥರಾದ ಕಾರಣದಿಂದ ಗಚ್ಚಿಬೌಲಿ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

MAHESHBABU BROTHER RAMESH BABU CREMATION
ಸಹೋದರ ಮಹೇಶ್ ಬಾಬು ಜೊತೆಯಲ್ಲಿ ರಮೇಶ್ ಬಾಬು

ರಮೇಶ್‌ ಬಾಬು ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಪದ್ಮಾಲಯ ಸ್ಟುಡಿಯೋಗೆ ರವಾನಿಸಲಾಗುತ್ತಿದ್ದು, ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯ ವೇಳೆ ಅಭಿಮಾನಿಗಳು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವಂತೆ ಮನವಿ ಮಾಡಲಾಗಿದೆ.

ತಂದೆ ಮತ್ತು ಸಹೋದರನೊಂದಿಗೆ ರಮೇಶ್ ಬಾಬು

ರಮೇಶ್ ಬಾಬು ಅವರು ಅಲ್ಲೂರಿ ಸೀತಾರಾಮರಾಜು (1974) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ತಮ್ಮ ತಂದೆ ಹಾಗು ಮಹೇಶ್ ಬಾಬು ಅವರೊಂದಿಗೆ ರಮೇಶ್ ಬಾಬು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 15 ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು 1997ರಿಂದ ನಟನೆಯಿಂದ ದೂರವೇ ಉಳಿದರು. 2004ರಲ್ಲಿ ನಿರ್ಮಾಪಕರಾಗಿ ಅರ್ಜುನ್ ಮತ್ತು ಅತಿಥಿ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: Yash Birthday : ಲೋಡೆಡ್​ ಗನ್​ ಹಿಡಿದು ನಿಂತ ಸ್ಪೆಷಲ್​ ಕೇಕ್​ ಕಟ್​ ಮಾಡಿದ ರಾಕಿ ಭಾಯ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.