ಹಬ್ಬದ ದಿನ ಎಂದಾಗ ಸಿನಿವಲಯದಲ್ಲಿ ಹುರುಪು ತುಸು ಹೆಚ್ಚೇ ಇರುತ್ತದೆ. ಹೊಸ ಸಿನಿಮಾ ಘೋಷಣೆ, ಫಸ್ಟ್ಲುಕ್ ರಿಲೀಸ್, ಟ್ರೇಲರ್ ಹೀಗೆ ಚಿತ್ರೋದ್ಯಮದ ಚಟುವಟಿಕೆ ಬಿರುಸಿನಿಂದ ಕೂಡಿರುತ್ತದೆ. ಆದರೆ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ತೆಲುಗು ಸೂಪರ್ಸ್ಟಾರ್ ಮಹೇಶ್ ಬಾಬು ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ.
ಮಹೇಶ್ ಬಾಬು ಹಾಗೂ ಸುಕುಮಾರ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಬರುತ್ತೆ ಅಂತ ಕಾದಿದ್ದವರಿಗೆ ಶಿವರಾತ್ರಿ ದಿನ ಸೂಪರ್ಸ್ಟಾರ್ ಬೇಸರ ಸುದ್ದಿ ನೀಡಿದ್ದು, ನಮ್ಮಿಬ್ಬರಲ್ಲಿ ಸೃಜನಾತ್ಮಕ ಹೊಂದಾಣಿಕೆಯ ಸಮಸ್ಯೆ ಎನ್ನುವ ಕಾರಣ ನೀಡಿ ಚಿತ್ರದಿಂದ ಹೊರನಡೆದಿದ್ದಾರೆ.
Due to creative differences, my film with Sukumar is not happening. I wish him all the best on the announcement of his new project. Respect always for a film maker par exellence. 1 Nenokkadine will remain as a cult classic. Enjoyed every moment working on that film.
— Mahesh Babu (@urstrulyMahesh) March 4, 2019 " class="align-text-top noRightClick twitterSection" data="
">Due to creative differences, my film with Sukumar is not happening. I wish him all the best on the announcement of his new project. Respect always for a film maker par exellence. 1 Nenokkadine will remain as a cult classic. Enjoyed every moment working on that film.
— Mahesh Babu (@urstrulyMahesh) March 4, 2019Due to creative differences, my film with Sukumar is not happening. I wish him all the best on the announcement of his new project. Respect always for a film maker par exellence. 1 Nenokkadine will remain as a cult classic. Enjoyed every moment working on that film.
— Mahesh Babu (@urstrulyMahesh) March 4, 2019
ಒಂದು ಮೂಲಗಳ ಪ್ರಕಾರ ಸುಕುಮಾರ್ ಮಹೇಶ್ ಬಾಬುಗಾಗಿ ಐತಿಹಾಸಿಕ ಚಿತ್ರವನ್ನು ನಿರ್ದೇಶನ ಮಾಡುವ ಆಸೆ ಹೊಂದಿದ್ದರಂತೆ. ಅದ್ದೂರಿ ವೆಚ್ಚದಲ್ಲಿ ಈ ಚಿತ್ರ ಮೂಡಿಬರಲಿದೆ ಎನ್ನಲಾಗಿತ್ತು. ಆದರೆ ಇದು ಪ್ರಿನ್ಸ್ಗೆ ಇಷ್ಟವಾಗಲಿಲ್ಲ ಎನ್ನುತ್ತವೆ ಟಾಲಿವುಡ್ ಮೂಲಗಳು.
ಸದ್ಯ ಸುಕುಮಾರ್ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಮಹೇಶ್ ಬಾಬು ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿ ಎಲ್ಲ ಊಹಾಪೋಹಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಸುಕುಮಾರ್ ಜೊತೆಗೆ ಸಿನಿಮಾ ಮಾಡುವ ಆಶಯವನ್ನು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.