ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ಅಗ್ನಿಸಾಕ್ಷಿಯೂ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯು ಬರೋಬ್ಬರಿ ಎಂಟು ವರ್ಷಗಳ ಕಾಲ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸಿತ್ತು. ಅಗ್ನಿಸಾಕ್ಷಿ ಧಾರಾವಾಹಿಯು ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು, ವೀಕ್ಷಕರು ತುಂಬಾ ಬೇಸರಗೊಂಡಿದ್ದರು.
ಇದೀಗ ಅಗ್ನಿಸಾಕ್ಷಿ ಧಾರಾವಾಹಿಯ ಕಲಾವಿದರು ಜೊತೆಯಾಗಿರುವ ಫೋಟೋವೊಂದು ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, ಅಗ್ನಿಸಾಕ್ಷಿ ಭಾಗ 2 ಬರಲಿದೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿತ್ತು. ಅಂದ ಹಾಗೇ ಪ್ರೇಕ್ಷಕರಲ್ಲಿ ಮೂಡಿದ ಕುತೂಹಲ ಸುಳ್ಳು. ಯಾಕೆಂದರೆ ಅಗ್ನಿಸಾಕ್ಷಿ ಭಾಗ 2 ಬರುತ್ತಿಲ್ಲ. ಬದಲಿಗೆ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಅಗ್ನಿಸಾಕ್ಷಿ ತಂಡ ಭಾಗಿಯಾಗಲಿದೆ.
ದಸರಾ ಹಬ್ಬ ಆರಂಭವಾಗಿದೆ. ನವರಾತ್ರಿಯ ಹಬ್ಬ ಬಂತೆಂದರೆ ಸಾಕು, ಕಿರುತೆರೆ ವೀಕ್ಷಕರಿಗಂತೂ ಹಬ್ಬದ ವಾತಾವರಣ. ಅದಕ್ಕೆ ಕಾರಣವೂ ಇದೆ. ದಸರಾ ಸಮಯದಲ್ಲಿ ಧಾರಾವಾಹಿಯಲ್ಲಿ ಏನಾದರೂ ಹೊಸತು ಇರುತ್ತದೆ. ಅದೇ ರೀತಿ ನನ್ನರಸಿ ಧಾರಾವಾಹಿಯಲ್ಲಿಯೂ ಅಷ್ಟೇ. ನನ್ನರಸಿ ರಾಧೆ ಧಾರಾವಾಹಿ ತಂಡದ ಜೊತೆ ಅಗ್ನಿಸಾಕ್ಷಿ ಕಲಾವಿದರು ಸೇರಿ ಮಹಾಮಿಲನವಾಗಲಿದೆ. ಇದೇ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.
ವಾರದ ಹಿಂದೆ ಹಂಚಿಕೊಂಡಿದ್ದ ರಾಜೇಶ್ ಧ್ರುವ
ಅಬ್ಬಾ ಇಷ್ಟೊಂದು ಪ್ರೀತಿ "ಅಗ್ನಿಸಾಕ್ಷಿ" ಮೇಲೆ! ಏನೇ ಆದರೂ ಸೀರಿಯಲ್ ಇರೋ ತನಕ ಮಾತ್ರ, ಮುಗಿದಮೇಲೆ ಯಾರೂ ಕೂಡ ನೆನಪಿಟ್ಕೊಳ್ಳಲ್ಲ ಅನ್ನೋ ಕೆಲವರ "ಹಿತನುಡಿ" ನಾ ನೀವು ಸುಳ್ಳು ಮಾಡಿದ್ದೀರಿ, ಚಿರಋಣಿ ನಿಮ್ಮ ಪ್ರೀತಿಗೆ, ಧನ್ಯೋಸ್ಮಿ' ಎಂದು ಅಗ್ನಿಸಾಕ್ಷಿಯಲ್ಲಿ ಅಖಿಲ್ ಪಾತ್ರಕ್ಕೆ ಜೀವ ತುಂಬುತ್ತಿದ್ದ ರಾಜೇಶ್ ಧ್ರುವ ವಾರದ ಹಿಂದೆಯೇ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಮಾತ್ರವಲ್ಲ ತನು ಪಾತ್ರಧಾರಿ ಜೊತೆಗಿನ ಫೋಟೋವನ್ನು ಕೂಡಾ ರಾಜೇಶ್ ಶೇರ್ ಮಾಡಿಕೊಂಡಿದ್ದು 'ಮಿಸ್ ಮಾಡ್ಕೊಂಡರೆ ನಮ್ ಜೋಡಿ ನಾ???? ಬೇಗ ಬರ್ತಿದೀವಿ, ಇದು ದಸರಾ ಸ್ಪೆಷಲ್' ಎಂದು ಹೇಳಿದ್ದಾರೆ.