ETV Bharat / sitara

'ಒಲವೇ ಮಂದಾರ 2' ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ ಲವ್ಲಿಸ್ಟಾರ್ ಪ್ರೇಮ್

author img

By

Published : Jan 17, 2020, 4:55 PM IST

ಬರೋಬ್ಬರಿ 9 ವರ್ಷಗಳ ನಂತರ ನಿರ್ದೇಶಕ ಎ.ಆರ್​​​. ಪಾಟೀಲ್ ಮತ್ತೆ 'ಒಲವೇ ಮಂದಾರ 2' ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದು ಈ ಸಿನಿಮಾದ ಟೈಟಲ್ ಪೋಸ್ಟರನ್ನು ಲವ್ಲಿ ಸ್ಟಾರ್ ಪ್ರೇಮ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

Prem
ಲವ್ಲಿಸ್ಟಾರ್ ಪ್ರೇಮ್

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್​ವುಡ್​ನಲ್ಲಿ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ಶುರುವಾಗಿದ್ದು, ಹಿಟ್ ಚಿತ್ರಗಳ ಟೈಟಲ್​​​​​ಗಳನ್ನು ಬಳಸಿಕೊಂಡು ಸಿನಿಮಾ ಮಾಡುವವರ ಸಂಖ್ಯೆ ಕೂಡಾ ಜಾಸ್ತಿಯಾಗಿದೆ. ಈಗ ಅವುಗಳ ಸಾಲಿಗೆ 'ಒಲವೇ ಮಂದಾರ -2' ಸಿನಿಮಾ ಸೇರಿದೆ.

'ಒಲವೇ ಮಂದಾರ 2' ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ ಲವ್ಲಿಸ್ಟಾರ್ ಪ್ರೇಮ್

ನಿರ್ದೇಶಕ ಜಯತೀರ್ಥ 2011 ರಲ್ಲಿ 'ಒಲವೇ ಮಂದಾರ' ಎಂಬ ಹಿಟ್ ಚಿತ್ರ ನೀಡಿದ್ದರು. ಅಲ್ಲದೆ ಈ ಚಿತ್ರದ ಮೂಲಕ ಶ್ರೀಕಿಯನ್ನು ಗಾಂಧಿನಗರಕ್ಕೆ ಪರಿಚಯಿಸಿದ್ದರು. ಈಗ ಬರೋಬ್ಬರಿ 9 ವರ್ಷಗಳ ನಂತರ ನಿರ್ದೇಶಕ ಎ.ಆರ್​​​. ಪಾಟೀಲ್ ಮತ್ತೆ 'ಒಲವೇ ಮಂದಾರ 2' ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದು ಈ ಸಿನಿಮಾದ ಟೈಟಲ್ ಪೋಸ್ಟರನ್ನು ಲವ್ಲಿ ಸ್ಟಾರ್ ಪ್ರೇಮ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಬಸವ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ರಮೇಶ್ ಮರಗೋಳ, ಚೇತನ್ ರಾಜ್ ಮತ್ತು ಟಿ.ಎಮ್​​​. ಸುರೇಶ್ ಬಂಡವಾಳ ಹೂಡಿರುವ ಈ 'ಒಲವೇ ಮಂದಾರ 2' ಸಿನಿಮಾ ಶೂಟಿಂಗ್ ಹಂತದಲ್ಲಿದ್ದು. 'ಇದಂ ಪ್ರೇಮಂ ಜೀವನಂ', 'ಕಮರೊಟ್ಟು ಚೆಕ್​​​​​​ಪೋಸ್ಟ್' ಖ್ಯಾತಿಯ ನಟ ಸನತ್ ನಾಯಕನಾಗಿ ನಟಿಸುತ್ತಿದ್ದಾರೆ. ಮಲೆನಾಡು ಹುಡುಗಿ ಪ್ರಜ್ಞಾ ಭಟ್ ಸನತ್​​ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದಕ್ಕೂ ಮುನ್ನ ಎಸ್​​​.ಆರ್​. ಪಾಟೀಲ್​​ 'ಇದೀಗ ಬಂದ ಸುದ್ದಿ' ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿಯನ್ನು ಹೇಳಲು ಪ್ರಯತ್ನಿಸಲಾಗಿದೆ. ಈಗಾಗಲೇ ಸುಮಾರು 50 % ಚಿತ್ರೀಕರಣ ಮುಗಿದಿದೆ. ಸದ್ಯ ಚಿತ್ರತಂಡ ಕಲಬುರಗಿಯಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಚಿತ್ರದ ಹಾಡುಗಳಿಗೆ 'ಐಲವ್​​​ಯು' ಖ್ಯಾತಿಯ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು ಸಂಗೀತ ನೀಡಿದ್ದಾರೆ. ಸಿನಿಮಾ ಖಂಡಿತ ಎಲ್ಲರಿಗೂ ಇಷ್ಟವಾಗಲಿದೆ ಎಂದು ಚಿತ್ರತಂಡ ಭರವಸೆ ವ್ಯಕ್ತಪಡಿಸಿದೆ.

Intro:ಒಲವೇ ಮಂದಾರ 2 " ಟೈಟಲ್ ಪೋಸ್ಟರ್ ಲಾಂಚ್ ಮಾಡಿದ ಲವ್ಲೀ ಸ್ಟಾರ್ ಪ್ರೇಮ್..

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ಶುರುವಾಗಿದ್ದು, ಹಿಟ್ ಚಿತ್ರಗಳ ಟೈಟಲ್ ಗಳನ್ನು ಬಳಸಿಕೊಂಡು ಸಿನಿಮಾ ಮಾಡುವ ಸಂಖ್ಯೆ ಕೂಡ ಜಾಸ್ತಿಯಾಗಿದ್ದು, ಈಗ ಅವುಗಳ ಸಾಲಿಗೆ
" ಒಲವೇ ಮಂದಾರ 2 " ಚಿತ್ರ ಸೇರಿದೆ‌. ನಿರ್ದೇಶಕ ಜಯತೀರ್ಥ 2011 ರಲ್ಲಿ "ಒಲವೇ ಮಂದಾರ "ಎಂಬ ಹಿಟ್ ಚಿತ್ರ ಕೊಟ್ಟಿದ್ರು.ಅಲ್ಲದೆ ಈ ಚಿತ್ರದ ಮೂಲಕ ಶ್ರೀಕಿಯನ್ನು ನಾಯಕನಾಗಿ ಗಾಂಧಿನಗರಕ್ಕೆ ಕರ್ಕೊಂಡ್ ಬಂದಿದ್ರು.ಈಗ ಬರೋಬರಿ 9 ವರ್ಷಗಳ ನಂತ್ರ ನಿರ್ದೇಶಕ ಎರ್ ಅರ್ ಪಾಟೀಲ್ ಮತ್ತೆ " ಒಲವೇ ಮಂದಾರ 2 " ಟೈಟಲ್ ನಲ್ಲಿ ಸಿನಿಮಾ ಮಾಡ್ತಿದ್ದು.ಈ
ಸಿನಿಮಾದ ಟೈಟಲ್ ಪೋಸ್ಟರನ್ನು ಲವ್ಲಿ ಸ್ಟಾರ್ ಪ್ರೇಮ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ.
ಹಾರೈಸಿದ್ದಾರೆ. ಬಸವ ಕಂಬೈನ್ಸ್ ಅಡಿಯಲ್ಲಿ ರಮೇಶ್ ಮರಗೋಳ, ಚೇತನ್ ರಾಜ್ ಮತ್ತು ಟಿ ಎಮ್ ಸುರೇಶ್ ಬಂಡವಾಳ ಹೂಡಿರೋ ಈ ಒಲವೇ ಮಂದಾರ 2. ಸಿನಿಮಾ ಈಗಾಗಲೇ ಶೂಟಿಂಗ್ ಹಂತದಲ್ಲಿದ್ದು. ಇದಂ ಪ್ರೇಮಂ ಜೀವನಂ, ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ನಟ ಸನತ್ ನಾಯಕನಾಗಿ ನಟಿಸ್ತಿದ್ದು,ಮಲೆನಾಡುಹುಡಗಿ ಪ್ರಜ್ಞಾ ಭಟ್ ಫೀಮೇಲ್ ಲೀಡ್ ರೋಲ್ ಪ್ಲೇ ಮಾಡ್ತಿದ್ದಾರೆ.Body:ಈ ಚಿತ್ರವನ್ನು ಇದೀಗ ಬಂದ ಸುದ್ದಿ ಚಿತ್ರ ನಿರ್ದೇಶನ ಮಾಡಿದ್ದ
ಎಸ್ ಆರ್ ಪಾಟೀಲ್ ಈ ಚಿತ್ರಕ್ಕೂ ನಿರ್ದೇಶನ ಮಾಡ್ತಿದ್ದು.ಈ ಚಿತ್ರದಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಹೇಳಲು ನಿರ್ದೇಶಕರು ಹೊರಟಿದ್ದಾರೆ‌.ಈಗಾಗಲೇ ಚಿತ್ರದ ಶೂಟಿಂಗ್ 50% ಕಂಪ್ಲೀಟ್ ಆಗಿದ್ದು, ಸದ್ಯ ಚಿತ್ರತಂಡ ಗುಲ್ಬರ್ಗದಲ್ಲಿ ಶೂಟಿಂಗ್ ಕಂಪ್ಲೀಟ್ ಆದ್ರೆ ಟಾಕಿ ಪೋರ್ಸನ್ ಕಂಪ್ಲೀಟ್ ಆಗಲಿದೆ ಎಂದು ನಿರ್ದೇಶಕ ಎಸ್ ಅರ್ ಪಾಟೀಲ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಐಲವ್ ಯೂ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶನ ಕಿರಣ್ ತೋಟಂಬೈಲು ಸಂಗೀತವಿದ್ದು.
ಚಿತ್ರದ ಮೇಲಿನ ಭರವಸೆ ಮತ್ತಷ್ಟು ಹೆಚ್ಚಾಗಿದೆ.

ಸತೀಶ ಎಂಬಿConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.