ಕನ್ನಡ ಚಿತ್ರರಂಗದಲ್ಲಿ ಫೋಟೋ ಶೂಟ್‌ನಿಂದಲೇ ಸಖತ್ ಸದ್ದು ಮಾಡ್ತಿರುವ ಸಿನಿಮಾ 'ಲವ್ ಯು ರಚ್ಚು'. ಅಜಯ್ ರಾವ್ ಹಾಗೂ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ರೊಮ್ಯಾಂಟಿಕ್ ಹಾಡಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡಿತ್ತು. ಹಾಡನ್ನ ಮಿಲಿಯನ್‌ಗಟ್ಟಲೇ ಜನ ವೀಕ್ಷಿಸಿದ್ದರು.

ಇದೀಗ ಬಹುತೇಕ ಚಿತ್ರೀಕರಣ ಮುಗಿಸಿರುವ 'ಲವ್ ಯು ರಚ್ಚು ಸಿನಿಮಾ ಈ ವರ್ಷದ ಅಂತ್ಯದೊಳಗೆ ಬಿಡುಗಡೆಯಾಗಲು ಸಜ್ಜಾಗಿದೆ. ಹೊಸದಾಗಿ ಮದುವೆಯಾದ ಜೋಡಿಯ ಪ್ರೀತಿ, ಪ್ರೇಮದ ಕಥೆಯನ್ನ ಲವ್ ಯು ರಚ್ಚು ಸಿನಿಮಾ ಒಳಗೊಂಡಿದೆ. ಅಜಯ್ ರಾವ್ ಜತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿದ್ದು, ಇವರಿಬ್ಬರ ಕೆಮಿಸ್ಟ್ರಿ ಆನ್ ಸ್ಕ್ರೀನ್ ಮೇಲೆ ವರ್ಕ್ ಔಟ್ ಆಗಿದೆ.

ರಚಿತಾ ರಾಮ್ ಲವ್ ಯು ರಚ್ಚು ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿದ್ದಾರೆ. ಸದ್ಯ ಅಜಯ್ ರಾವ್ ಮತ್ತು ರಚಿತಾ ರಾಮ್ ಈ ಹಾಟ್ ಫೋಟೋಗಳು ಸಖತ್ ವೈರಲ್ ಆಗಿವೆ. ಕ್ರಿಯೇಟ್ ಹೆಡ್, ನಿರ್ದೇಶಕ ಗುರುದೇಶ್ ಪಾಂಡೆ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸದ್ಯ ನಿರ್ಮಾಪಕ ಗುರುದೇಶ್ ಪಾಂಡೆ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳಲ್ಲಿ ಲವ್ ಯು ರಚ್ಚು ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿ, ಡಿಸೆಂಬರ್ ತಿಂಗಳಲ್ಲಿ ಲವ್ ಯು ರಚ್ಚು ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 'ಲವ್ ಯು ರಚ್ಚು' ಸಿನಿಮಾದಲ್ಲಿ ಬ್ಯಾಕ್‌ಲೆಸ್ ಆದ ಡಿಂಪಲ್ ಕ್ವೀನ್