ಲೂಸ್ ಮಾದ ಯೋಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಚಾರ್ಮ್ ಹೊಂದಿರುವ ನಟ. ಸದ್ಯ ನಾಲ್ಕೈದು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಲೂಸ್ ಮಾದ ಯೋಗಿ 'ಲಂಕೆ' ಎಂಬ ಸಿನಿಮಾದಲ್ಲಿ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಯೋಗಿ, ಸಂಚಾರಿ ವಿಜಯ್, ಕಾವ್ಯಾ ಶೆಟ್ಟಿ ಮತ್ತು ಕ್ರಿಷಿ ತಾಪಂಡ ಹಾಗೂ ಈಸ್ಟರ್ ನರೋನಾ ಮತ್ತು ನಿರ್ದೇಶಕ ರಾಮ್ ಪ್ರಸಾದ್, ಪಾಟೀಲ್ ಶ್ರೀನಿವಾಸ್ ಸಮ್ಮುಖದಲ್ಲಿ ಲಂಕೆ ಚಿತ್ರದ ಟೈಟಲ್ ಅನಾವರಣ ಮಾಡಲಾಯಿತು. ರಾಮಾಯಣ ಆಧಾರಿತ ಲಂಕೆ ಚಿತ್ರದಲ್ಲಿ, ಲೂಸ್ ಮಾದ ಯೋಗಿ ರಾಮನಾಗಿ ಕಾಣಿಸಿಕೊಂಡ್ರೆ, ರಾವಣನಾಗಿ ಕಾವ್ಯ ಶೆಟ್ಟಿ ಅಭಿನಯಿಸಿದ್ದಾರೆ. ಇದ್ರ ಜೊತೆಗೆ ಕೃಷಿ ತಾಪಂಡ ವಿಶೇಷ ಪಾತ್ರದಲ್ಲಿ ಕಾಣಿಸಿದ್ದು, ಸಂಚಾರಿ ವಿಜಯ್ ಹಾಗೂ ಈಸ್ಟರ್ ನರೋನಾ ಫ್ಲ್ಯಾಷ್‌ಬ್ಯಾಕ್ ಎಪಿಸೋಡ್‌ನಲ್ಲಿ ಬರುತ್ತಿದ್ದಾರೆ.
ಓದಿ:ಡಬ್ಬಿಂಗ್ ಸಿನಿಮಾಗಳು ಹೆಚ್ಚಾದರೆ ಕನ್ನಡ ಚಿತ್ರರಂಗಕ್ಕೆ ನಷ್ಟ:ನಟ ಯೋಗಿ
ಈ ಹಿಂದೆ ಬಣ್ಣ ಬಣ್ಣದ ಲೋಕ ಸಿನಿಮಾ ನಿರ್ದೇಶಿಸಿದ್ದ ರಾಮ್ ಪ್ರಸಾದ್, ಮಾಡರ್ನ್ ರಾಮಾಯಣ ರೀತಿ ಲಂಕೆ ಸಿನಿಮಾವನ್ನ ಹೇಳೋದಿಕ್ಕೆ ಹೊರಟ್ಟಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣವಿದ್ದು, ಕಾರ್ತೀಕ್ ಶರ್ಮಾ ಸಂಗೀತ ನೀಡಿದ್ದಾರೆ.
ಪಟೇಲ್ ಶ್ರೀನಿವಾಸ್ ಹಾಗೂ ಸುರೇಖಾ ರಾಮ್ ಪ್ರಸಾದ್ ಎಂಬುವರು ಲಂಕೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಲಂಕೆ ಸಿನಿಮಾವನ್ನ ಸದ್ಯದ್ರಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಈ ಲಂಕೆ ಸಿನಿಮಾ ಮೂಲಕ ಲೂಸ್ ಮಾದ ಯೋಗಿಗೆ ಮತ್ತೊಂದು ಯಶಸ್ಸು ಸಿಗುತ್ತಾ ನೋಡ್ಬೇಕು.