ಧಾರವಾಡ: ಲೈಟಾಗಿ ಲವ್ವಾಗಿದೆ ಚಿತ್ರ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಧಾರವಾಡದ ಶ್ರೀನಿವಾಸ್ ಚಿತ್ರಮಂದಿರದ ಎದುರು ದೀಪ ಹಚ್ಚಿ ಚಿತ್ರತಂಡದ ಸದಸ್ಯರು ಹಾಗೂ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಚಾಲನೆ ನೀಡಿದರು.
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೊದಲ ಚಿತ್ರ ಇದಾಗಿದ್ದು, ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇನ್ನೂ ಲೈಟಾಗಿ ಲವ್ವಾಗಿದೆ ಸಿನಿಮಾ ತಂಡ ಶ್ರೀನಿವಾಸ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ನಾಯಕಿ ಶ್ವೇತಾ ಧಾರವಾಡ ಮಾತನಾಡಿ, ಚಿತ್ರದಲ್ಲಿ ಉತ್ತರ ಕರ್ನಾಟಕದವರೇ ಹೆಚ್ಚಾಗಿರೋದು ವಿಶೇಷ. ಅದರಲ್ಲೂ ಈ ಚಿತ್ರಕ್ಕೆ ಉತ್ತರ ಕರ್ನಾಟಕ ಮತ್ತು ಗೋಕಾಕ್ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ನಾಯಕಿಯರಾಗಿ ದಿವ್ಯಾ ಹಾಗೂ ಶ್ವೇತಾ ನಟಿಸಿದ್ದಾರೆ. ನಿರ್ದೇಶಕರಾದ ಗುರುನಾಥ ಗದಾಡಿ ಕಥೆ-ಚಿತ್ರಕಥೆ ಬರೆದು ಅವರೇ ನಿರ್ಮಾಣ ಮಾಡಿದ್ದಾರೆ ಎಂದರು.
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗಟೆ ಮಾತನಾಡಿ, ಉತ್ತರ ಕರ್ನಾಟಕದ ಪ್ರತಿಭೆಗಳು ಹಾಗೂ ಕಲಾವಿದರು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನಮ್ಮ ಉತ್ತರ ಕರ್ನಾಟಕದ ಜನತೆ ಬೆಂಬಲಿಸಿ ಪ್ರೋತ್ಸಾಹ ನೀಡುವ ಮೂಲಕ ಚಿತ್ರಕ್ಕೆ ಯಶಸ್ಸು ನೀಡಬೇಕೆಂದು ಮನವಿ ಮಾಡಿದರು.ನಾಯಕ ನಟ ಚನ್ನಪ್ಪ ಹುದ್ದಾರ, ನಾಯಕಿಯಾಗಿ ನಟಿ ದಿವ್ಯ ಹಾಗೂ ನಟಿ ಶ್ವೇತಾ ಧಾರವಾಡ ಅಭಿನಯದ ಚಿತ್ರ ಇದಾಗಿದ್ದು ಇಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.