ETV Bharat / sitara

ಸಹೋದರ ಹೃದಯ​​ನಾಥ್ ಮಂಗೇಶ್ಕರ್ ನಿರ್ದೇಶನದಲ್ಲಿ ಗಾನ ಕೋಗಿಲೆಯ ದನಿ - ಸಂಗೀತ ನಿರ್ದೇಶಕ ಹೃದಯ​​ನಾಥ್ ಮಂಗೇಶ್ಕರ್

ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಲತಾ ಮಂಗೇಶ್ಕರ್ ಅವರು ತಮ್ಮ ಸಹೋದರ ಸಂಗೀತ ನಿರ್ದೇಶಕ ಹೃದಯ​​ನಾಥ್ ಮಂಗೇಶ್ಕರ್ ನಿರ್ದೇಶನದಲ್ಲಿ ಮರೆಯಲಾಗದ ಕೆಲವು ಹಾಡುಗಳನ್ನು ಹಾಡಿದ್ದಾರೆ.

Lata Mangeshkar and Hridaynath Mangeshkar
ಲತಾ ಮಂಗೇಶ್ಕರ್ ಮತ್ತು ಹೃದಯ​​ನಾಥ್ ಮಂಗೇಶ್ಕರ್
author img

By

Published : Feb 6, 2022, 12:59 PM IST

ವಿಶಿಷ್ಟ ಮತ್ತು ಗೌರವಪೂರ್ಣ ವ್ಯಕ್ತಿತ್ವದ ಲತಾ ಮಂಗೇಶ್ಕರ್ ತಮ್ಮ ಜೀವಿತ ಕಾಲದಲ್ಲೇ ದಂತಕತೆಯಾದವರು. ಕಿರಿಯ ವಯಸ್ಸಿನಿಂದಲೇ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಲತಾ ಮಂಗೇಶ್ಕರ್ ಅವರು ತಮ್ಮ ಸಹೋದರ ಸಂಗೀತ ನಿರ್ದೇಶಕ ಹೃದಯ​​ನಾಥ್ ಮಂಗೇಶ್ಕರ್ ನಿರ್ದೇಶನದಲ್ಲಿ ಮರೆಯಲಾಗದ ಕೆಲವು ಹಾಡುಗಳನ್ನು ಹಾಡಿದ್ದಾರೆ. ಅಂತಹ ಕೆಲವು ಅದ್ಭುತ ಹಾಡುಗಳೆಂದರೆ,

ಯಾರಾ ಸಿಲ್ಲಿ ಸಿಲ್ಲಿ: ಈ ಹಾಡನ್ನು ಕೇಳದ ಸಂಗೀತಪ್ರಿಯರೇ ಇಲ್ಲ. ರಿಯಾಲಿಟಿ ಶೋನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸ್ಪರ್ಧಿಗಳು ಇನ್ನೂ ಈ ಹಾಡನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಗುಲ್ಜಾರ್ ಹಾಡಿನ ಸಾಹಿತ್ಯ ರಚಿಸಿದ್ದು, ಹೃದಯನಾಥ್ ಅವರ ಸಂಗೀತ ನಿರ್ದೇಶನದಿಂದ ಹಾಡು ಅಮರವಾಗಿದೆ.

ಮುಜೆ ತುಮ್​ ಯಾದ್​ ಕರ್ನ: 'ಮಶಾಲ್' ಚಿತ್ರದ ಈ ಹಾಡು ಇಂದಿಗೂ ಎಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಜಾವೇದ್ ಅಖ್ತರ್ ಈ ಹಾಡನ್ನು ಬರೆದಿದ್ದಾರೆ. ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್​ ಈ ಹಾಡನ್ನು ಹಾಡಿದ್ದಾರೆ.

ಎಕ್​ ಹಸೀನ್​​ ನಿಘಾ ಕಾ: ಹಲವು ಹಾಡುಗಳನ್ನು ಹೃದಯ​​ನಾಥ್ ಮಂಗೇಶ್ಕರ್ ವಿಭಿನ್ನ ರಾಗಗಳಲ್ಲಿ ನಿರ್ದೇಶಿಸಿದ್ದಾರೆ. 'ಎಕ್​ ಹಸೀನ್​​ ನಿಘಾ ಕಾ' ಹಾಡು ಕೂಡ ಹೃದಯ​​ನಾಥ್ ಅವರ ಪರಿಶ್ರಮ ಮತ್ತು ಸಾಧನೆಯನ್ನು ಸೂಚಿಸುತ್ತದೆ. 1933ರಲ್ಲಿ ಬಂದ ಮಾಯಾ ಮೆಮ್​​ಸಾಬ್​ ಚಿತ್ರದ ಹಾಡು ಇದಾಗಿದೆ. ಕುತಸಾಮ್ರಾಟ್ ಗುಲ್ಜಾರ್ ಅವರ ಸಾಹಿತ್ಯವಿದ್ದು, ಈ ಹಾಡು ಇನ್ನೂ ಪ್ರಚಲಿತವಾಗಿದೆ.

ದೂರೆ ಆಕಾಶ್ ಶಮಿಯಾನಯೆ: ಬೆಂಗಾಲಿ ಸಂಗೀತ ಕ್ಷೇತ್ರದ ಬಗ್ಗೆ ಹೇಳುವುದಾದರೆ, ಶಾಸ್ತ್ರೀಯ ಮಧುರ ಸ್ಪರ್ಶವನ್ನು ಹೊಂದಿದ್ದ 'ದೂರೆ ಆಕಾಶ್ ಶಮಿಯಾನಯೆ' ಅನ್ನು ನಾವು ಮರೆಯಲು ಸಾಧ್ಯವಿಲ್ಲ. ಗೌರಿ ಪ್ರಸನ್ನ ಮಜುಂದಾರ್ ಅವರು ಹಾಡಿನ ಸಾಹಿತ್ಯವನ್ನು ಬರೆದಿದ್ದಾರೆ.

ಮೈ ಏಕ್ ಸಾದಿ ಸೇ: ಲೇಕಿನ್ ಚಿತ್ರದ 'ಮೈ ಏಕ್ ಸಾದಿ ಸೇ' ಹಾಡನ್ನು ನಾವಿಲ್ಲಿ ಮರೆಯುವಂತಿಲ್ಲ. ಈ ಹಾಡು ಹೆಣ್ಣಿನ ನೋವಿನ ಬದುಕನ್ನು ತೆರೆದಿಟ್ಟಿದೆ. ಲತಾ ಮಂಗೇಶ್ಕರ್​​ ಧ್ವನಿ ಇಲ್ಲದೆ ಈ ಹಾಡು ಪರಿಪೂರ್ಣವಾಗುತ್ತಿರಲಿಲ್ಲ. ಅವರ ಧ್ವನಿ ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ ಎಂಬುದನ್ನು ಖಂಡಿತವಾಗಿ ಮೆಚ್ಚಲೇಬೇಕು.

ಇದನ್ನೂ ಓದಿ: ಭಾರತದ ಅಭಿವೃದ್ಧಿಯ ಬಗ್ಗೆ ಲತಾ ಮಂಗೇಶ್ಕರ್ ಉತ್ಸುಕರಾಗಿದ್ದರು: ಪ್ರಧಾನಿ ಮೋದಿ ಸಂತಾಪ

ಇವು ಹೃದಯ​​ನಾಥ್ - ಲತಾ ಅವರ ಕೆಲವು ಹಾಡುಗಳಷ್ಟೇ. ಸಂಗೀತ ನಿರ್ದೇಶಕ ಹೃದಯ​​ನಾಥ್ ಮಂಗೇಶ್ಕರ್ ನಿರ್ದೇಶನದಲ್ಲಿ ಗಾನ ಕೋಗಿಲೆ ಹಾಡಿರುವ ಹಾಡುಗಳು ಎಂದಿಗೂ ಅಮರ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.