ಚೆನ್ನೈ(ತಮಿಳುನಾಡು): ವಿವಿಧ ಭಾಷೆಯ ಸಿನಿಮಾ ನಟರು, ನಟಿಯರು ಸೇರಿದಂತೆ ಚಿತ್ರ ನಿರ್ಮಾಪಕರಿಗೂ ಕೊರೊನಾ ಸೋಂಕು ತಗಲುತ್ತಿದ್ದು, ಆ ಸಾಲಿಗೆ ಇದೀಗ ತಮಿಳು ನಟಿ, ನಿರೂಪಕಿ ಲಕ್ಷ್ಮಿ ಮಂಚು ಸೇರ್ಪಡೆಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇನ್ಸ್ಟಾಗ್ರಾಂನಲ್ಲಿ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳ ಕಾಲ ಕೋವಿಡ್ನಿಂದ ರಕ್ಷಣೆಗೊಳಪಟ್ಟಿದ ನಾನು ಕೊನೆಗೂ ಸೋಂಕಿಗೊಳಗಾಗಿದ್ದಾನೆ ಎಂದು ಬರೆದುಕೊಂಡಿದ್ದು, ಪ್ರತಿಯೊಬ್ಬರ ಮೇಲೆ ಇದು ಪರಿಣಾಮ ಬೀರಲಿದ್ದು, ಸಾಮಾನ್ಯ ಶೀತದಂತೆ ಇರಲಿದೆ ಎಂದಿದ್ದಾರೆ.
ಕೋವಿಡ್ ವಿರುದ್ಧ ಹೋರಾಡಲು ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅಗತ್ಯ ಎಂದಿರುವ ನಟಿ, ವೈರಸ್ ವಿರುದ್ಧ ಹೋರಾಡಲು ಸಾಕಷ್ಟು ಶಕ್ತಿ ನಮ್ಮ ದೇಹದಲ್ಲಿದೆ ಎಂದಿದ್ದಾರೆ. ಜೊತೆಗೆ ಕೋವಿಡ್ ಲಸಿಕೆ ಪಡೆದುಕೊಳ್ಳುವುದನ್ನ ಮರೆಯಬೇಡಿ ಎಂದಿದ್ದಾರೆ.
ನಟ ಮೋಹನ್ ಬಾಬು ಮತ್ತು ವಿದ್ಯಾ ದೇವಿ ಏಕೈಕ ಪುತ್ರಿ ಲಕ್ಷ್ಮಿ ಮಂಚು, ಕಳೆದ ಕೆಲ ತಿಂಗಳ ಹಿಂದೆ ಸರೋಗೆಸಿ ಮೂಲಕ ಮಗು ಪಡೆದುಕೊಂಡು ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದರು.
ವಿಶೇಷವೆಂದರೆ ರಿಯಾಲಿಟಿ ಶೋ ಮೂಲಕ ಬರುವ ಹಣವನ್ನು ಅನೇಕ ಸಮಾಜಮುಖಿ ಕಾರ್ಯಗಳಿಗೆ ದಾನ ಮಾಡುವ ನಟಿಯರ ಪೈಕಿ ಲಕ್ಷ್ಮಿ ಕೂಡ ಒಬ್ಬರು.