ETV Bharat / sitara

ಕ್ವಾಟ್ಲೆ ಸತೀಶ ಈಗ 'ಬ್ರಹ್ಮಚಾರಿ'..ಆದರೂ ಅದಿತಿ ಪ್ರಭುದೇವ ಜತೆಗಿರ್ತಾರೆ.. - undefined

ನೀನಾಸಂ ಸತೀಶ್ ಅಭಿನಯದ 'ಬ್ರಹ್ಮಚಾರಿ' ಸಿನಿಮಾಗೆ ಇಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮುಹೂರ್ತ ನೆರವೇರಿತು. ಆ್ಯಕ್ಷನ್ ಪ್ರಿನ್ಸ್ ಧ್ರುವಾಸರ್ಜಾ ಮುಹೂರ್ತ ಸಮಾರಂಭಕ್ಕೆ ಬಂದು ಚಿತ್ರತಂಡಕ್ಕೆ ಶುಭ ಕೋರಿದರು.

ನೀನಾಸಂ ಸತೀಶ್​
author img

By

Published : Apr 14, 2019, 7:55 PM IST

ಲೂಸಿಯಾ, ಡ್ರಾಮಾ, ಬ್ಯೂಟಿಫುಲ್​​​​​ ಮನಸುಗಳು, ಕ್ವಾಟ್ಲೆ ಸತೀಶ, ಅಯೋಗ್ಯ ಹೀಗೆ ಸಾಲು ಸಾಲು ಸಿನಿಮಾಗಳ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದ ನೀನಾಸಂ ಸತೀಶ್ ಈಗ ಬ್ರಹ್ಮಚಾರಿ ಆಗಲು ಹೊರಟಿದ್ದಾರೆ.

movie team
'ಬ್ರಹ್ಮಚಾರಿ' ಚಿತ್ರತಂಡ

ಅರೇ, ಮದುವೆಯಾಗಿರುವ ಸತೀಶ್​​​​ ಈಗ ಬ್ರಹ್ಮಚಾರಿಯಾಗಲು ಹೇಗೆ ಸಾಧ್ಯ ಎಂದು ಯೋಚಿಸಬೇಡಿ. ವಿಷಯ ತಿಳಿಯಲು ಮುಂದೆ ಓದಿ. ಕಳೆದ ತಿಂಗಳು ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆ ಕಂಡಿದ್ದ 'ಚಂಬಲ್​​' ಸಿನಿಮಾ ವಿಮರ್ಶಕರಿಂದ ಒಳ್ಳೇ ಪ್ರಶಂಸೆ ಗಳಿಸಿದ್ದರೂ ಬಾಕ್ಸ್‌ ಆಫೀಸಿನಲ್ಲಿ ಹೇಳಿಕೊಳ್ಳುವಷ್ಟು ಸದ್ದು ಮಾಡಿರಲಿಲ್ಲ. ಈ ಚಿತ್ರದ ಬಳಿಕ ಸತೀಶ್ ಯಾವ ಚಿತ್ರ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದಕ್ಕೆ ಉತ್ತರ 'ಬ್ರಹ್ಮಚಾರಿ' ಸಿನಿಮಾ.

ಬ್ರಹ್ಮಚಾರಿ ಚಿತ್ರಕ್ಕೆ ಮುಹೂರ್ತ

ಇಂದು ಬೆಂಗಳೂರಿನ ಬಸವೇಶ್ವರ ನಗರದ ಗಣಪತಿ ದೇವಸ್ಥಾನದಲ್ಲಿ 'ಬ್ರಹ್ಮಚಾರಿ' ಸಿನಿಮಾ ಮುಹೂರ್ತ ನೆರವೇರಿದ್ದು, ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಕ್ಯಾಮರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇದೊಂದು ಕಾಮಿಡಿ ಸಿನಿಮಾವಾಗಿದ್ದು ಚಿತ್ರದ ಟೈಟಲ್‌ಗೆ '100 ಪರ್ಸೆಂಟ್‌ ವರ್ಜಿನ್‌’ ಎನ್ನುವ ಸಬ್​​​​​​ಟೈಟಲ್‌ ನೀಡಲಾಗಿದೆ.

satish
ಅದಿತಿ ಪ್ರಭುದೇವ, ನೀನಾಸಂ ಸತೀಶ್​​

ಈ ಹಿಂದೆ 'ಲವ್‌ ಇನ್‌ ಮಂಡ್ಯ’ ಚಿತ್ರದಲ್ಲಿ ಒಂದಾಗಿದ್ದ ಸತೀಶ್‌ ಮತ್ತು ನಿರ್ಮಾಪಕ ಉದಯ್‌ ಮೆಹ್ತಾ ಜೋಡಿ ಈ ಚಿತ್ರದಲ್ಲಿ ಮತ್ತೆ ಜೊತೆಯಾಗಿದ್ದಾರೆ. ಇನ್ನು 'ಬಾಂಬೆ ಮಿಠಾಯಿ’ ಮತ್ತು 'ಡಬಲ್‌ ಇಂಜಿನ್‌’ ನಂತಹ ನಕ್ಕುನಗಿಸಿದ ಕಾಮಿಡಿ ಚಿತ್ರಗಳನ್ನು ನಿರ್ದೇಶಿಸಿದ್ದ ಚಂದ್ರಮೋಹನ್‌ ಈ 'ಬ್ರಹ್ಮಚಾರಿ' ಸಿನಿಮಾವನ್ನು ಡೈರೆಕ್ಟ್‌ ಮಾಡ್ತಿದ್ದಾರೆ. ಸತೀಶ್​​ಗೆ ಅದಿತಿ ಪ್ರಭುದೇವ ಜೊತೆಯಾಗಿದ್ದಾರೆ.

"ಬ್ರಹ್ಮಚಾರಿ" ಅವತಾರವೆತ್ತಿದ ಕ್ವಾಟ್ಲೆ ಸತೀಶ ....!!!!!

ಲೂಸಿಯಾ ಡ್ರಾಮ,,ಬ್ಯೂಟಿಫುಲ್, ಮನಸುಗಳು,ಕ್ವಾಟ್ಲೆ ಸತೀಶ ಅಯೋಗ್ಯ ಹೀಗೇ ಸಾಲು-ಸಾಲು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದ ನೀನಾಸಂ ಸತೀಶ್ ಈಗ ಬ್ರಹ್ಮಚಾರಿ ಯಾಗ್ತಿದ್ದಾರೆ.ಅರೆ ಸಡನ್ ಆಗಿ ಇವರ್ಗೇನ್ ಆಯ್ತು ಅಂತ ಕನ್ ಪ್ಯೂಸ್ ಆಗ್ಬೇಡಿ ಅದೇನು ಅಂತ ತಿಳ್ಕೋ ಬೇಕಾದ್ರೆ ಈ ಸ್ಟೋರಿ ಒದಿ.ಕಳೆದ ತಿಂಗಳ ಹಿಂದಷ್ಟೇ ನೀನಾಸಂ ಸತೀಶ್‌ ಅಭಿನಯದ ‘ಚಂಬಲ್‌’ ಚಿತ್ರ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು,ತೆರೆಗೆಬಂದಿದ್ದುನಿಮಗೆನೆನಪಿರಬಹುದು.ಚಂಬಲ್ ವಿಮರ್ಶಕರಿಂದ ಒಳ್ಳೆ ಪ್ರಶಂಸೆ ಗಳಿಸಿದ್ದ ಈ ಚಿತ್ರ ಮಾತ್ರ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ.“ಚಂಬಲ್‌’ ಚಿತ್ರದ ಬಳಿಕ ನಟ ಸತೀಶ್‌ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ, ಸತೀಶ್‌ ನಟನೆಯಿಂದ ಡೈರೆಕ್ಷನ್ ಕ್ಯಾಪ್ ತೊಟ್ಟು, ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ ಎಂಬ ಉತ್ತರ ಕೇಳಿ ಬಂದಿತ್ತು. ಆದ್ರೆ ಇವೆಲ್ಲದರ ನಡುವೆ ಈಗ ಸತೀಶ್‌“ಬ್ರಹ್ಮಾಚಾರಿ’
ಯಾಗುತ್ತಿದ್ದಾರೆ. ಅಂದ್ರೆ ಸತೀಶ್ ಬ್ರಹ್ಮಚಾರಿ ಎಂಬ ಹೆಸರಿನ ಚಿತ್ರದಲ್ಲಿ ನಾಯಕನಾಗಿ ನಟಿಸ್ತಿದ್ದು ಇಂದು " ಬ್ರಹ್ಮಚಾರಿ " ಚಿತ್ರ ಸೆಟ್ಟೇರಿದೆ. ಎಸ್ ಇಂದು ಬಸವೇಶ್ವರ ನಗರದಗಣಪತಿದೇವಸ್ಥಾನದಲ್ಲಿ“ಬ್ರಹ್ಮಾಚಾರಿ’
ಸಿನಿಮಾದ ಮುಹೂರ್ತಾ ನೇರವೇರಿದ್ದು ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಕ್ಯಾಮರ ಚಾಲನೆ ಮಾಡುವ ಮೂಲಕ. " ಬ್ರಹ್ಮಚಾರಿಗೆ " ವಿಶ್ ಮಾಡಿದ್ರು.
ಇನ್ನೂ .ಚಿತ್ರದ ಟೈಟಲ್ಲೇ ಹೇಳುವಂತೆ ಇದೊಂದು ಕಾಮಿಡಿ ಸಿನಿಮಾವಾಗಿದ್ದು, ಚಿತ್ರದ ಟೈಟಲ್‌ಗೆ “100 ಪರ್ಸೆಂಟ್‌ ವರ್ಜಿನ್‌’ ಎನ್ನುವ ಸಬ್‌ ಟೈಟಲ್‌ ನೊಂದಿಗೆ ಕ್ವಾಟ್ಲೆ ಸತೀಶ ಮತ್ತೆ ಕ್ವಾಟ್ಲೆ ಕೊಡೊಕೆ ರೆಡಿಯಾಗಿದ್ದಾರೆ. ಈ ಹಿಂದೆ “ಲವ್‌ ಇನ್‌ ಮಂಡ್ಯ’ ಚಿತ್ರದಲ್ಲಿ ಒಂದಾಗಿದ್ದ ಸತೀಶ್‌ ಮತ್ತು ನಿರ್ಮಾಪಕ ಉದಯ್‌ ಮೆಹ್ತಾ ಜೋಡಿ ಈ ಚಿತ್ರದಲ್ಲಿ ಮತ್ತೆ ಒಂದಾಗಿದ್ದು . ಈ ಹಿಂದೆ “ಬಾಂಬೆ ಮಿಠಾಯಿ’ ಮತ್ತು “ಡಬಲ್‌ ಇಂಜಿನ್‌’ ಗಳಂತಹ ಹ್ಯೂಮರಸ್ ಕಾಮಿಡಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಚಂದ್ರ ಮೋಹನ್‌ ಈ ಚಿತ್ರವನ್ನು ನಿರ್ದೇನ ಮಾಡ್ತಿದ್ದಾರೆ. ಸಿಂಗ ಚಿತ್ರದ ನಂತರ ಮತ್ತೆ ಉದಯ್ ಕೆ ಮಹ್ತಾ ಅವರ ಬ್ಯಾನರ್ ನ ಸಿನಿಮಾ 'ಬ್ರಹ್ಮಾಚಾರಿ' ಚಿತ್ರದಲ್ಲಿ ನೀನಾಸಂ ಸತೀಶ್ ಗೆ ಅದಿತಿ ಪ್ರಭುದೇವಾ ಜೋಡಿಯಾಗಿದ್ದಾರೆ. ಇನ್ನೂ ಬ್ರಹ್ಮಚಾರಿ ಚಿ್ತ್ರದಲ್ಲಿ ಸಂಪೂರ್ಣ ಕಾಮಿಡಿ ಜೊತೆಗೆ ಸೊಸೈಟಿಗೆ ಒಂದು ಮೇಸೆಜ್ವಕೂಡ ಇದೆ.ಇನ್ನೂ ನನ್ನ ಹಿಂದಿನ‌ಚಿತ್ರಗಳಿಗಿಂತ ಈ ಚಿತ್ರದಲ್ಲಿ ತುಭಾ ಡಿಫರೆಂಟ್ ಆಗಿ ಕಾಣಿಸಲಿದ್ದು ಚಿತ್ರದ ಕಥೆ‌ ತುಂಭಾ ಹ್ಯೂಮರಸ್ ಆಗಿದೆ ಎಂದು ಸತೀಶ್ ಹೇಳಿದ್ರು.ಅಲ್ಲದೆ‌ ಬ್ರಹ್ಮಚಾರಿ ಚಿತ್ರದಲ್ಲಿ ಇಲ್ಲಿಯವರೆಗೆ ಕಾಣಿಸಿಕೊಂಡಿರದ ಪಾತ್ರದಲ್ಲಿ ನಾನು ಕಾಣಿಸಿದ್ದು ಮಿಡಲ್ ಕ್ಲಾಸ್ ಹುಡುಗಿ ಪಾತ್ರದಲ್ಲಿಕಾಣಿಸ್ತಿರುವುದಾಗಿ ಅದಿತಿತಿಳಿಸಿದ್ರು.ಇನ್ನೂ ಈ ಚಿ್ರತ್ರದಲ್ಲಿ ಶಿವರಜ್ ಕೆ. ಆರ್ ಪೇಟೆ ಹಾಗೂ ಇನ್ನಿತರರು ಕಾಣಿಸಿಕೊಳ್ಳುತ್ತಿದ್ದು, ನಾಳೆಯಿಂದಲೇ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ನಿರ್ದೇಶಕ ಚಂದ್ರ ಮೋಹನ್ ತಿಳಿಸಿದ್ರು.

ಸತೀಶ ಎಂಬಿ

(ವಿಸ್್ಯುವಲ್ಸ ಮೊಜೊದಲ್ಲಿ ಕೊಡಲಾಗಿದೆ)

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.