ಸಾರಥಿಯ ಅಭಿಮಾನಿ ಹರೀಶ್ ದುರ್ಯೋಧನನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಮ್ಮ ಬೆನ್ನಮೇಲೆ ಕುರುಕ್ಷೇತ್ರದಲ್ಲಿ ದರ್ಶನ್ ನಿಭಾಯಿಸಿರುವ ಸುಯೋಧನ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ದರ್ಶನ್ ನಟನೆಯ 50ನೇ ಚಿತ್ರ ಕುರುಕ್ಷೇತ್ರ ಸಿನಿಮಾ ಕ್ರೇಜ್ ಹೆಚ್ಚಿದೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ದಾಸನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಹರೀಶ್ ಕುರುಕ್ಷೇತ್ರದ ಲುಕ್ ಬರೆಯಿಸಿಕೊಂಡು ಸಿನಿಮಾ ನೋಡಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
'ಡಿ ಬಾಸ್' ನಮ್ಮ ದೇವರು ಎನ್ನುವ ಈ ಅಭಿಮಾನಿ 28-30 ಇಂಚು ವಿಸ್ತೀರ್ಣದ ಟ್ಯಾಟೂ ಬಿಡಿಸಿಕೊಂಡಿದ್ದಾರೆ. ಬನಶಂಕರಿ ಫಸ್ಟ್ ಸ್ಟೇಜ್ ನರಾಯಲ್ ಟ್ಯಾಟೂ ಶಾಪ್ನ ಕಲಾವಿದ ಶಿವರಾಜ್ 24 ಗಂಟೆಗಳಲ್ಲಿ ಈ ಸುಂದರ ಚಿತ್ರವನ್ನು ಬಿಡಿಸಿದ್ದಾರೆ.