ETV Bharat / sitara

ಕೃಷ್ಣೋಜಿರಾವ್ ವೃತ್ತಿ ಜೀವನದಲ್ಲಿ ಅದೃಷ್ಟ ತಂದ ಆ ಪ್ಯಾನ್ ಇಂಡಿಯಾ ಸಿನಿಮಾ - Director Prashant neel

ವಿಜಯ್ ಕಿರಂಗದೂರು ನಿರ್ಮಾಣದಲ್ಲಿ ಪ್ರಶಾಂತ್ ನೀಲ್ ನಿರ್ದೇಶಿಸಿದ 'ಕೆಜಿಎಫ್' ಚಿತ್ರ ಯಶ್ ಸೇರಿದಂತೆ ಆ ಚಿತ್ರದಲ್ಲಿ ನಟಿಸಿದ ಹಲವರಿಗೆ ಗುರುತಿಸಿಕೊಳ್ಳಲು ಅವಕಾಶ ನೀಡಿದೆ. ಅದರಲ್ಲಿ ಕೃಷ್ಣೋಜಿ ರಾವ್ ಕೂಡಾ ಒಬ್ಬರು. ​​​​​​​​​​​

Krishnoji rao
ಕೃಷ್ಣೋಜಿ ರಾವ್
author img

By

Published : Sep 4, 2020, 3:54 PM IST

'ಕೆಜಿಎಫ್' ಚಿತ್ರ ಯಶ್ ಅವರಿಗೆ ದೊಡ್ಡ ಬ್ರೇಕ್ ನೀಡ್ತು. ಈ ಚಿತ್ರದ ನಂತರ ಯಶ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರಾದರು. ಈ ಚಿತ್ರದಲ್ಲಿ ಕೆಲಸ ಮಾಡಿದ ನಟ,ನಟಿಯರು, ತಂತ್ರಜ್ಞರಿಗೆ ಕೂಡಾ ಚಿತ್ರದ ನಂತರ ಅನೇಕ ಆಫರ್​​​ ಬಂತು. ಅವರಲ್ಲಿ ಕೃಷ್ಣೋಜಿ ರಾವ್ ಕೂಡಾ ಒಬ್ಬರು.

Krishnoji rao
ಕೃಷ್ಣೋಜಿರಾವ್ ವೃತ್ತಿ ಜೀವನಕ್ಕೆ ಟ್ವಿಸ್ಟ್ ಕೊಟ್ಟ ಕೆಜಿಎಫ್

ಮೂಲತ: ಪಾವಗಡದವರಾದ ಕೃಷ್ಣೋಜಿ ರಾವ್, ಕೆಜಿಎಫ್​​​ನಲ್ಲಿ ನಟಿಸಿದ ನಂತರ ಅವರನ್ನು ಎಲ್ಲರೂ ಗುರುತಿಸುತ್ತಿದ್ದಾರಂತೆ. 'ವಿಲನ್ ತಂಡ ಕೆಲವರನ್ನು ಗುಹೆಯೊಳಗೆ ಕರೆದೊಯ್ದಾಗ ನಾಯಕ ಯಶ್ ಬಂದು ಇವರನ್ನೆಲ್ಲಾ ಕಾಪಾಡುತ್ತಾನೆ'. ಆ ದೃಶ್ಯದಲ್ಲಿ ನಟಿಸಿರುವವರಲ್ಲಿ ಕೃಷ್ಣೋಜಿ ರಾವ್ ಕೂಡಾ ಒಬ್ಬರು. ಇದರಲ್ಲಿ ಅವರದ್ದು ಬಹಳ ಚಿಕ್ಕ ಪಾತ್ರವಾದರೂ ವೃತ್ತಿ ಜೀವನದಲ್ಲಿ ಅವರಿಗೆ ಹೆಸರು ಸಿಕ್ಕಿದಂತೂ ಸತ್ಯ.

ಕೃಷ್ಣೋಜಿ ರಾವ್ 1979ರಲ್ಲಿ ಚಿತ್ರರಂಗಕ್ಕೆ ಬಂದವರು. ಅನಂತ್ ನಾಗ್ ಹಾಗೂ ಶಂಕರ್​ನಾಗ್ ನಟಿಸಿರುವ 'ಮಿಂಚಿನ ಓಟ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಇವರು ಕೆಲಸ ಮಾಡಿದ್ದಾರೆ. ಅಲ್ಲಿಂದ ಹಲವಾರು ನಿರ್ದೇಶಕರೊಂದಿಗೆ ಕೃಷ್ಣೋಜಿ ರಾವ್ ಕೆಲಸ ಮಾಡಿ ನಿರ್ದೇಶನದಲ್ಲಿ ಪಳಗಿದ್ದಾರೆ. ಜೊತೆಗೆ ಡಾ. ವಿಷ್ಣುವರ್ಧನ್​​​​​​​, ರೆಬಲ್ ಸ್ಟಾರ್​​ ಅಂಬರೀಶ್​​, ಅನಂತ್ ನಾಗ್ ಸೇರಿ ಅನೇಕ ನಾಯಕರೊಂದಿಗೆ ಸುಮಾರು 40 ಚಿತ್ರಗಳಲ್ಲಿ ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ.

Krishnoji rao
ಕೆಜಿಎಫ್

'ಕಾಲೇಜ್ ಸ್ಟೋರಿ' ಚಿತ್ರಕ್ಕೆ ಕೂಡಾ ಕೃಷ್ಣೋಜಿ ರಾವ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಆದರೆ ಈ ಚಿತ್ರ ದೂರದರ್ಶನದಲ್ಲಿ ಬಿಡುಗಡೆ ಆಗಿ ಪ್ರಸಾರವಾಯ್ತೇ ಹೊರತು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ನಟನೆ, ನಿರ್ದೇಶನ ಮಾತ್ರವಲ್ಲದೆ, ಕೃಷ್ಣೋಜಿ ರಾವ್ ಸುಮಾರು 500 ಚಿತ್ರಗಳಿಗೆ ಸೆನ್ಸಾರ್ ಸ್ಕ್ರಿಪ್ಟ್​ ಬರೆದಿದ್ದಾರೆ. ನಂತರ 'ಕೆಜಿಎಫ್'​ ಚಿತ್ರದಲ್ಲಿ ನಟಿಸುವ ಅವಕಾಶ ಇವರಿಗೆ ದೊರೆತಿದೆ.

'ಕೆಜಿಎಫ್' ನಂತರ ಸುಮಾರು 10 ಚಿತ್ರಗಳಿಗೆ ಕೃಷ್ಣೋಜಿ ರಾವ್ ಅವರಿಗೆ ಅವಕಾಶ ದೊರೆತಿದೆ ಎನ್ನಲಾಗಿದೆ. ಈ ಚಿತ್ರಗಳಲ್ಲಿ 'ಮುದುಕನ ಲವ್ ಸ್ಟೋರಿ' ಎಂಬ ಚಿತ್ರದಲ್ಲಿ ಕೃಷ್ಣೋಜಿ ರಾವ್​​​​​​​ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಸದ್ಯದಲ್ಲೇ ಸೆಟ್ಟೇರಲಿದೆ. 'ಕೆಜಿಎಫ್ ಚಾಪ್ಟರ್ 2' ರಲ್ಲೂ ಕೃಷ್ಣೋಜಿ ರಾವ್​​​​ ನಟಿಸುತ್ತಿದ್ದು ಮಾಸ್ ಸಂಭಾಷಣೆ ಕೂಡಾ ಇದೆಯಂತೆ. 'ನಮ್ಮ ಪ್ರೀತಿಯ ಶಾಲೆ' ಚಿತ್ರದಲ್ಲಿ ಕೂಡಾ ಕೃಷ್ಣೋಜಿ ರಾವ್ ನಟಿಸುತ್ತಿದ್ದಾರೆ.

Krishnoji rao
ಯಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.