ETV Bharat / sitara

ಕನ್ನಡದ ಮೇಲೆ 'ಪ್ಯಾರಿ' ಆಗಿದೆ ಎಂದ ಕೊರಿಯನ್​ ಕುವರಿ! - Korean girl likes Yuvarathna movie song Neenande naa

ಕೊರಿಯನ್ ಮೂಲದ ಪ್ಯಾರಿ ಜಿವೋನ್ ಎಂಬ ಯುವತಿಗೆ ಪವರ್​ಸ್ಟಾರ್​ ಅಭಿನಯದ ಯುವರತ್ನ ಸಿನಿಮಾದ ಮೆಲೊಡಿ ಹಾಡು "ನೀನಾದೆ ನಾ ನೀನಾದೆ ನಾ" ತುಂಬಾ ಇಷ್ಟವಾಗಿದೆಯಂತೆ. ಇದೀಗ ಈ ಹಾಡನ್ನು ಹಾಡಿ ಯೂಟ್ಯೂಬ್​ನಲ್ಲಿ ಹಂಚಿಕೊಂಡಿದ್ದಾರೆ.

ನೀನಾದೆ ನಾ ನೀನಾದೆ ನಾ
ನೀನಾದೆ ನಾ ನೀನಾದೆ ನಾ
author img

By

Published : Jun 28, 2021, 8:51 PM IST

ನಮ್ಮ ಕನ್ನಡ ನಾಡು, ಕನ್ನಡ ಭಾಷೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ದೇಶದ ಎಲ್ಲ ಮೂಲೆಗಳಲ್ಲಿ ಕನ್ನಡದ ಕಲರವ ಕೇಳಿ ಬರುತ್ತದೆ. ಈಗ 5,000 ಕಿ.ಮೀ ದೂರವಿರುವ ದಕ್ಷಿಣ ಕೊರಿಯಾ ದೇಶದ ಓರ್ವ ಯುವತಿಗೂ ನಮ್ಮ ಕನ್ನಡ ನೆಲದ ಬಗ್ಗೆ ಅಭಿಮಾನ ಮೂಡಿದೆ.

ಕೊರಿಯನ್ ಮೂಲದ ಓರ್ವ ಹುಡುಗಿಗೆ ಪವರ್​ಸ್ಟಾರ್​ ಅಭಿನಯದ ಯುವರತ್ನ ಸಿನಿಮಾದ ಮೆಲೊಡಿ ಹಾಡು "ನೀನಾದೆ ನಾ ನೀನಾದೆ ನಾ" ತುಂಬಾ ಇಷ್ಟವಾಗಿದೆಯಂತೆ. ಈ ಕೊರಿಯನ್​ ಯುವತಿಯ ಹೆಸರು ಪ್ಯಾರಿ ಜಿವೋನ್. ಈಕೆ ಕೊರಿಯಾ ದೇಶದವಳಾಗಿದ್ದರೂ ಸಹ, ಈಕೆಯ ಮನಸು ನಮ್ಮ ಭಾರತ ದೇಶದ್ದು. ಕಾರಣ ಪ್ಯಾರಿ ಜಿವೋನ್​​​ಗೆ ಭಾರತೀಯ ಸಂಸ್ಕೃತಿ ಪರಂಪರೆಯ ಮೇಲೆ ಅಪಾರ ಅಭಿಮಾನ.

ನಮ್ಮ ದೇಶದ ಆಚಾರ ವಿಚಾರದ ಜೊತೆಗೆ ಆಹಾರ ಹಾಗೂ ಇಂಡಿಯನ್ ಸಿನಿಮಾಗಳು ಎಂದರೆ ಬಲು ಪ್ರೀತಿಯಂತೆ. ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಇಂಡಿಯನ್ ಡ್ರೆಸ್​ಗಳನ್ನ ಹಾಕಿಕೊಂಡು ಪ್ಯಾರಿ ಕ್ಯಾಮೆರಾಗೆ ಪೋಸ್ ಕೊಡುತ್ತಾರೆ.

ಇನ್ನು ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಹಾಡಿಗೆ ಫಿದಾ ಆದ ಸೌತ್​ ಕೊರಿಯಾದ ಪ್ಯಾರಿ, ನೀನಾದೆ ನಾ ಹಾಡನ್ನು ಹಾಡಿ, ಯೂಟ್ಯೂಬ್ ಲೋಕದಲ್ಲಿ ತೇಲಿಬಿಟ್ಟಿದ್ದಾರೆ. ಈ ಮುಂಚೆ ಮುಂಗಾರು ಮಳೆ 2 ಚಿತ್ರದ "ಸರಿಯಾಗಿ ನೆನಪಿದೆ ನನಗೆ" ಹಾಡನ್ನ ಸಹ ಹಾಡಿ ಫೇಮಸ್ ಆಗಿದ್ದರು. ಈಗ ಅಪ್ಪುಅಭಿನಯದ ಯುವರನ್ನ ಚಿತ್ರದ ಹಾಡನ್ನ ಸಹ ಹಾಡುವುದರ ಮೂಲಕ ಕನ್ನಡಿಗರಿಗೆ ಹತ್ತಿರವಾಗುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.