ETV Bharat / sitara

ನಿರ್ದೇಶಕ ಪ್ರೇಮ್ ಪುತ್ರನಿಗೆ ಕಾಲಿವುಡ್ ಸ್ಟಂಟ್ ಮಾಸ್ಟರ್ ಆ್ಯಕ್ಷನ್ ಪಾಠ - undefined

ರಕ್ಷಿತಾ ಸಹೋದರ ರಾಣಾ ಅಭಿನಯದ ಮೊದಲ ಸಿನಿಮಾ 'ಏಕ್​ ಲವ್ ಯಾ' ಶೂಟಿಂಗ್ ಭರದಿಂದ ಸಾಗುತ್ತಿದೆ. ಶೂಟಿಂಗ್ ಸ್ಪಾಟ್​ನಲ್ಲಿ ಪ್ರೇಮ್​​​-ರಕ್ಷಿತಾ ಪುತ್ರ ಸೂರ್ಯ ಕಾಲಿವುಡ್​ ಸ್ಟಂಟ್ ಮಾಸ್ಟರ್​​ನಿಂದ ಆ್ಯಕ್ಷನ್ ಕಲಿಯುವುದರಲ್ಲಿ ಬ್ಯುಸಿಯಾಗಿದ್ದಾರೆ.

ನಿರ್ದೇಶಕ ಪ್ರೇಮ್ ಪುತ್ರ
author img

By

Published : May 22, 2019, 6:07 PM IST

ನಿರ್ದೇಶಕ ಪ್ರೇಮ್ ತಮ್ಮ ಭಾವಮೈದುನ ರಾಣಾಗಾಗಿ 'ಏಕ್ ಲವ್ ಯಾ' ಸಿನಿಮಾ ಮಾಡುತ್ತಿರುವುದು ತಿಳಿದ ವಿಚಾರ. ಕಳೆದ ತಿಂಗಳು ರಕ್ಷಿತಾ ಬರ್ತಡೇಯಂದು ಚಿತ್ರದ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಿ ಫಸ್ಟ್​ ಲುಕ್​ ಕೂಡಾ ಬಿಡುಗಡೆ ಮಾಡಲಾಗಿತ್ತು.

ಆ್ಯಕ್ಷನ್ ಕಲಿಯುತ್ತಿರುವ ಸೂರ್ಯ

ಕೆಲ‌ವು ದಿನಗಳ ಹಿಂದೆ ಮಹದೇಶ್ವರ ಬೆಟ್ಟದಲ್ಲಿ ಸಿಂಪಲ್ ಆಗಿ ಮುಹೂರ್ತ ಮುಗಿಸಿದ ನಿರ್ದೇಶಕ ಪ್ರೇಮ್ ಈಗ ಶೂಟಿಂಗ್​​​​​​ನಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಸ್ಪಾಟ್​​​​ಗೆ ರಕ್ಷಿತಾ ಹಾಗೂ ಪುತ್ರ ಸೂರ್ಯ ಭೇಟಿ ನೀಡಿದ್ದಾರೆ. ಒಂದು ಕಡೆ ಅಪ್ಪ ಆ್ಯಕ್ಷನ್ ಕಟ್​​ ಹೇಳುವಲ್ಲಿ ಬ್ಯುಸಿಯಾಗಿದ್ದರೆ,ಮತ್ತೊಂದೆಡೆ ಮಗ ಆ್ಯಕ್ಷನ್ ಪಾಠ ಕಲಿಯುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸ್ಟಂಟ್ ಮಾಸ್ಟರ್​ ಸೆಲ್ವ ಪ್ರೇಮ್ ಮಗನಿಗೆ ಆ್ಯಕ್ಷನ್ ಬಗ್ಗೆ ಪಾಠ ಮಾಡಿದ್ದಾರೆ.

Ek love ya
'ಏಕ್​ ಲವ್ ಯಾ' ಮುಹೂರ್ತ

ಸೂಪರ್ ಸ್ಟಾರ್ ರಜನೀಕಾಂತ್, ಪ್ರಭಾಸ್, ತಮಿಳು ನಟ ವಿಜಯ್ ಸೇರಿ ಬಹುತೇಕ ಎಲ್ಲಾ ನಟರ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿರುವ ಸೆಲ್ವ ಬಹಳ ವರ್ಷಗಳ ನಂತರ ಕನ್ನಡಕ್ಕೆ ಬಂದಿದ್ದಾರೆ. ಈ ಹಿಂದೆ ಪುನೀತ್ ಅಭಿನಯದ 'ಚಕ್ರವ್ಯೂಹ' ಸಿನಿಮಾಗೆ ಸೆಲ್ವ ಸ್ಟಂಟ್ ಕಂಪೋಸ್ ಮಾಡಿದ್ದರು. 'ಏಕ್​​ ಲವ್​ ಯಾ' ಚಿತ್ರದ ಶೂಟಿಂಗ್ ಸಮಯದಲ್ಲಿ ಪ್ರೇಮ್ ಹಾಗು ರಕ್ಷಿತಾ ಪುತ್ರ ಸೂರ್ಯನಿಗೆ ಬಾಟಲನ್ನು ಕಿಕ್ ಮಾಡುವ ಸ್ಟಂಟ್ ಹೇಳಿಕೊಟ್ಟಿದ್ದಾರೆ ಸೆಲ್ವ. ಸೂರ್ಯ ಕೂಡಾ ಆಸಕ್ತಿಯಿಂದ ಬಾಟಲ್ ಕಿಕ್ ಮಾಡಲು ಪ್ರಯತ್ನಿಸಿದ್ದಾನೆ. ಪ್ರೇಮ್​ ಪುತ್ರನ ಈ ಆಸಕ್ತಿ ನೋಡಿದರೆ ಆತ ಕೂಡಾ ಆದಷ್ಟು ಬೇಗ ಆ್ಯಕ್ಟಿಂಗ್​​​ಗೆ ಬರೋದು ಪಕ್ಕಾ ಎನಿಸುತ್ತಿದೆ.

Intro:ಜೋಗಿ ಪ್ರೇಮ್ ಮಗನಿಗೆ ಕಾಲಿವುಡ್ ಸ್ಟಂಟ್ ಮಾಸ್ಟರ್ ಆಕ್ಷನ್ ನ್ ಪಾಠ!!

ನಿರ್ದೇಶಕ ಪ್ರೇಮ್ ತಮ್ಮ ಭಾವಮೈದುನ ರಾಣಾಗಾಗಿ ಏಕ್ ಲವ್ ಯ ಸಿನಿಮಾ ಮಾಡ್ತಿರೋ ಗೊತ್ತಿರುವ ವಿಚಾರ..ಕೆಲ‌ ದಿನಗಳ ಹಿಂದೆ ಮಹದೇಶ್ವರ ಬೆಟ್ಟದಲ್ಲಿ ಸಿಂಪಲ್ ಆಗಿ ಪೂಜೆ ಮುಗಿಸಿದ ನಿರ್ದೇಶಕ ಪ್ರೇಮ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ..ಸದ್ಯ ಶೂಟಿಂಗ್ ಸ್ಪಾಟ್ ನಲ್ಲಿ ರಕ್ಷಿತಾ ತಮ್ಮ ಶೂಟಿಂಗ್ ಗಿಂತ ಮಗ ಸೂರ್ಯನ ಸ್ಟಂಟ್ ಮಾಡೋದು ಜೋರಾಗಿದೆ..ಹೌದು ಬೆಂಗಳೂರಿನಲ್ಲಿ ಏಕ್ ಲವ್ ಯ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.. ಈ ಶೂಟಿಂಗ್ ಸ್ಪಾಟ್ ಗೆ ಪ್ರೇಮ್ ಹಾಗು ರಕ್ಷಿತಾ ಅವ್ರ ಮುದ್ದಿನ ಮಗ ಸೂರ್ಯ ಕೂಡ ಬಂದಿದ್ದಾನೆ..ಈ ಶೂಟಿಂಗ್ ಸ್ಪಾಟ್ ನಲ್ಲಿ ಸೌತ್ ಸಿನಿಮಾ ಇಂಡಸ್ಟ್ರಿಯ ಫೇಮಸ್ ಸ್ಟಂಟ್ ಮಾಸ್ಟರ್ ಸೆಲ್ವಾ ಪ್ರೇಮ್ ಮಗನಿಗೆ ಆ್ಯಕ್ಷನ್ ಬಗ್ಗೆ ಪಾಠ ಮಾಡುತ್ತಿದ್ದಾರೆ..ರಜನಿಕಾಂತ್, ಪ್ರಭಾಸ್, ತಮಿಳು ನಟ ವಿಜಯ್ ಅಂತಹ ಸ್ಟಾರ್ ನಟರುಗಳ ಸಿನಿಮಾಗಳಿಗೆ ಸ್ಟಂಟ್ ಕಂಪೋಸ್ ಮಾಡಿರುವ, ಸೆಲ್ವಾ ಬಹಳ ವರ್ಷಗಳ ನಂತ್ರ ಕನ್ನಡಕ್ಕೆ ಬಂದಿದ್ದಾರೆ.. ಈ ಹಿಂದೆ ಪುನೀತ್ ರಾಜ್‍ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರಕ್ಕೆ ಫೈಟ್ ಕಂಪೋಸ್ ಮಾಡಿದ್ರು..Body:ಇದೀಗ ಪ್ರೇಮ್ ನಿರ್ದೇಶನದ‌ ಏಕ್ ಲವ್ ಯ ಸಿನಿಮಾದಲ್ಲಿ ಸೆಲ್ವಾ ಆಕ್ಷನ್ ಸಿಕ್ವೇನ್ಸ್ ಕಂಪೋಸ್ ಮಾಡಲಿದ್ದಾರೆ. ‌ಈ ಚಿತ್ರದ ಶೂಟಿಂಗ್ ಟೈಮಲ್ಲಿ ಪ್ರೇಮ್ ಹಾಗು ರಕ್ಷಿತಾ ಮಗ ಸೂರ್ಯನಿಗೆ ಬಾಟಲಿ ಹೊಡೆಯುವ ಸ್ಟಂಟ್ ಹೇಳಿಕೊಟ್ರು..ಕೊನೆಯಲ್ಲಿ ಸೆಲ್ವಾ ಬಾಟಲಿ ಹೊಡೆದಿದ್ದನ್ನ ಕಂಡು ಪ್ರೇಮ್ ಮಗ ಸೂರ್ಯ ಶಾಕ್ ಆದ..ಸದ್ಯಕ್ಕೆ ಪ್ರೇಮ್ ಮಗನ ಈ ಆ್ಯಕ್ಷನ್ ಇಂಟ್ರೆಸ್ಟ್ ನೋಡ್ತಾ ಇದ್ರೆ ಕನ್ನಡ ಚಿತ್ರರಂಗಕ್ಕೆ ಬರೋದು ಪಕ್ಕಾ ಅನಿಸುತ್ತಿದೆ.‌Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.