ತಮಿಳುನಾಡು: ನಟರಾದ ಸೂರ್ಯ ಮತ್ತು ಕಾರ್ತಿ ತಮಿಳು ಚಲನಚಿತ್ರೋದ್ಯಮದಲ್ಲಿ ಪ್ರಮುಖ ತಾರೆಯರಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ತಮಿಳು ನಟ ಶಿವಕುಮಾರ್ ಅವರ ಮಕ್ಕಳಾಗಿರುವ ಇಬ್ಬರೂ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಸೂರ್ಯ ನಟನೆಯ ಹೊರತಾಗಿ ತನ್ನ ಅಗರಂ ಫೌಂಡೇಶನ್ ಮೂಲಕ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲ ನೀಡುತ್ತಿದ್ದಾರೆ. ಕಾರ್ತಿ ತನ್ನ ಉಜಾವನ್ (ರೈತ) ಪ್ರತಿಷ್ಠಾನದೊಂದಿಗೆ ರೈತರಿಗೆ ಸಹಾಯ ಮಾಡುತ್ತಿದ್ದಾರೆ.
ಇದೀಗ ಈ ಸ್ಟಾರ್ ಸಹೋದರರು ಸಾಮಾಜಿಕ ಮಾಧ್ಯಮದ ಮೂಲಕ ಇಐಎ ಡ್ರಾಫ್ಟ್ 2020 ವಿರುದ್ಧ ಧ್ವನಿ ಎತ್ತಿದ್ದಾರೆ.
ನಾವು ಮಾತನಾಡುವ ಪದಗಳಿಗಿಂತ ಮೌನ ಹೆಚ್ಚು ಅಪಾಯಕಾರಿ. ಮೌನವನ್ನು ಮುರಿಯೋಣ. ಪರಿಸರ ರಕ್ಷಣೆ ಅತ್ಯಗತ್ಯ ಎಂದು ಸಹೋದರರಿಬ್ಬರೂ ಟ್ವೀಟ್ ಮಾಡುವ ಮೂಲಕ ಇಐಎ ಕರಡು ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಾರ್ತಿ ಟ್ವೀಟ್ ಮಾಡಿದ್ದು, ಇದನ್ನು ಸೂರ್ಯ ರಿಟ್ವೀಟ್ ಮಾಡಿದ್ದಾರೆ.