ನರೇಂದ್ರ ಮೋದಿ ಡಿಸ್ಕವರಿ ಚಾನೆಲ್ ನಿರೂಪಕ ಬೇರ್ ಗ್ರಿಲ್ಸ್ ಜೊತೆ ಕಾಡಿನಲ್ಲಿ ಸುತ್ತಾಡಿದ್ದನ್ನು ಎಲ್ಲರೂ ನೋಡಿದ್ದಾರೆ. ಇದೀಗ ಡಿಸ್ಕವರಿ ಚಾನೆಲ್ನ ಮತ್ತೊಂದು ಕಾರ್ಯಕ್ರಮ 'ಇಂಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ಅನ್ನು ಮಾಡುತ್ತಿದ್ದು, ಅದರ ಶೂಟಿಂಗ್ ಅನ್ನು ಕರ್ನಾಟಕದ ಬಂಡೀಪುರ ಅರಣ್ಯದಲ್ಲಿ ಶೂಟ್ ಮಾಡಲಾಗುತ್ತಿದೆ.
ಈ ಕಾರ್ಯಕ್ರಮದ ಕೆಲವು ಎಪಿಸೋಡ್ಗಳನ್ನು ಈಗಾಗಲೇ ಶೂಟ್ ಮಾಡಿದ್ದು, ರಜನಿಕಾಂತ್, ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಭಾಗಿಯಾಗಿ ಬೇರ್ ಗ್ರಿಲ್ ಜೊತೆ ಕಾಡು ಸುತ್ತಾಡಿದ್ದಾರೆ.
![kohli attending into the wild with ber grils](https://etvbharatimages.akamaized.net/etvbharat/prod-images/5908919_thumb5.jpg)
![kohli attending into the wild with ber grils](https://etvbharatimages.akamaized.net/etvbharat/prod-images/5908919_thumb2.jpg)
ಈಗ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಂತ್ರ ಗ್ರಿಲ್ಸ್ ಜೊತೆ ಕಾಡು ಸುತ್ತಾಡುವ ಸೆಲೆಬ್ರಿಟಿ ಯಾರೆಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಆದ್ರೆ ಈ ಕುತೂಹಲಕ್ಕೆ ತೆರೆ ಬೀಳುವಂತಹ ಸುದ್ದಿಯೊಂದು ಹರಿದಾಡುತ್ತಿದೆ. ಅದೇನಂದ್ರೆ ಇಂಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ನ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.
![kohli attending into the wild with ber grils](https://etvbharatimages.akamaized.net/etvbharat/prod-images/5908919_thumb3.jpg)
ಕಳೆದ ಸೋಮವಾರದಿಂದ ಬೇರ್ ಗ್ರಿಲ್ಸ್ ಕಾರ್ಯಕ್ರಮದ ಶೂಟಿಂಗ್ ಪ್ರಾರಂಭಿಸಿದ್ದಾರೆ. ಚಿತ್ರೀಕರಣದಲ್ಲಿ ತಲೈವಾ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಪಾಲ್ಗೊಂಡಿದ್ದಾರೆ.