ETV Bharat / sitara

ಥ್ರಿಲ್ಲರ್ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ನಟ ಕಿಶೋರ್

ನಟ ಕಿಶೋರ್ ಹೊಸ ಚಿತ್ರವನ್ನು ನಿರ್ಮಾಣ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ. ಈ ಸಿನಿಮಾಕ್ಕೆ 'ಅಹಾನಿ' ಎಂಬ ಹೆಸರಿಟ್ಟಿದ್ದು, ಕನ್ನಡವಲ್ಲದೆ ಏಕಕಾಲಕ್ಕೆ ತಮಿಳಿನಲ್ಲೂ ಮೂಡಿಬರಲಿದೆ.

Actor Kishore
ನಟ ಕಿಶೋರ್
author img

By

Published : Jun 9, 2021, 9:39 AM IST

ಕನ್ನಡ ಚಿತ್ರರಂಗದ ಅದ್ಭುತ ನಟರ ಪೈಕಿ ಕಿಶೋರ್ ಸಹ ಒಬ್ಬರು. ಶ್ರೀಮುರಳಿ ಅಭಿನಯದ 'ಕಂಠಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು, ಆ ನಂತರ ಹಲವು ಚಿತ್ರಗಳಿಗೆ ತಮ್ಮ ನಟನೆಯ ಮೂಲಕ ಜೀವ ತುಂಬಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟನೆಗಿಂತ ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕಿಶೋರ್, ಇದೀಗ ಬರೀ ನಟನಾಗಿಯಷ್ಟೇ ಅಲ್ಲ, ನಿರ್ದೇಶಕರಾಗುವತ್ತ ಒಲವು ತೋರಿಸಿದ್ದಾರೆ.

ಕಿಶೋರ್ ಅವರು 'ವಿಸ್ತಾರ' ಎಂಬ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದು, ಅದರಡಿ 'ಬ್ಲ್ಯಾಕ್​ ಅಂಡ್​​​​​​​ ವೈಟ್'​ ಎಂಬ ಸಿನಿಮಾ ಮಾಡುತ್ತಿದ್ದರು. ಈ ಚಿತ್ರ ಮುಗಿಯುವ ಹಂತದಲ್ಲಿದ್ದು, ಸದ್ಯದಲ್ಲೇ ಹೊಸ ಚಿತ್ರವನ್ನು ನಿರ್ಮಾಣ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ. ಈಗಾಗಲೇ ಕಥೆಯೊಂದನ್ನ ಬರೆದಿಟ್ಟುಕೊಂಡಿರುವ ಕಿಶೋರ್, ಅದನ್ನು ಸದ್ಯದಲ್ಲೇ ಡೈರೆಕ್ಟ್ ಮಾಡುವ ಉತ್ಸಾಹದಲ್ಲಿದ್ದಾರೆ. ಇದಕ್ಕೂ ಮುನ್ನ ಬ್ಲ್ಯಾಕ್​ ಅಂಡ್​​​​​​​ ವೈಟ್​ನಿರ್ದೇಶನದಲ್ಲಿ ಸ್ವಲ್ಪ ಮಟ್ಟಿಗೆ ತೊಡಗಿಸಿಕೊಂಡಿದ್ದರಂತೆ. ಈಗ ಈ ಹೊಸ ಚಿತ್ರದ ಮೂಲಕ ಅವರು, ಪೂರ್ಣ ಪ್ರಮಾಣದ ನಿರ್ದೇಶಕರಾಗಲು ಹೊರಟಿದ್ದಾರೆ.

ಅಂದಹಾಗೆ, ಈ ಚಿತ್ರಕ್ಕೆ ಅವರು ಇಟ್ಟಿರುವ ಹೆಸರು 'ಅಹಾನಿ'. ಪಕ್ಕಾ ಥ್ರಿಲ್ಲರ್ ಜಾನರ್​​ ಸಿನಿಮಾ ಇದಾಗಿದ್ದು, ಕನ್ನಡವಲ್ಲದೆ ಏಕಕಾಲಕ್ಕೆ ತಮಿಳಿನಲ್ಲೂ ಮೂಡಿಬರಲಿದೆ. ಈ ಚಿತ್ರದಲ್ಲಿ ಸಾಕಷ್ಟು ಹೊಸಬರು ನಟಿಸಲಿದ್ದು, ಕಿಶೋರ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ. ಸದ್ಯ, ಈ ಚಿತ್ರದ ಕೆಲಸಗಳು ನಡೆಯುತ್ತಿದ್ದು, ಮುಂದಿನ ತಿಂಗಳು ಚಿತ್ರದ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಹೊಂಬಾಳೆ ಫಿಲಂಸ್‌ಗೆ ಕೃತಜ್ಞತೆ ತಿಳಿಸಿದ ಚಿತ್ರೋದ್ಯಮ ಕಾರ್ಮಿಕರ ಸಂಘ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.