ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕುಟುಂಬದಿಂದ ಮತ್ತೊಂದು ಪ್ರತಿಭೆ ಅಭಿನಯಕ್ಕೆ ಕಾಲಿಡುತ್ತಿದೆ. ಕಿಚ್ಚನ ಸಹೋದರಿಯ ಮಗ ಸಂಚೀತ್ ಸ್ಯಾಂಡಲ್ವುಡ್ಗೆ ಪದಾಪರ್ಣೆ ಮಾಡಲು ಸಜ್ಜಾಗುತ್ತಿದ್ದಾನೆ.
'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ವರ್ಕ್ ಮಾಡಿರುವ ಸಂಚೀತ್, ನಾಯಕ ನಟನಾಗಿ ಕನ್ನಡಿಗರ ಮುಂದೆ ಹಾಜರಾಗಲು ರೆಡಿಯಾಗಿದ್ದಾನೆ. ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿರುವ ಈ ಯಂಗ್ ಬಾಯ್, ಮಾರ್ಷಲ್ ಆರ್ಟ್ಸ್ ಸೇರಿದಂತೆ ನಟನಾ ತರಬೇತಿ ಪಡೆಯುತ್ತಿದ್ದಾರೆ.
ಸಂಚೀತ್ ಅವರನ್ನು ನಾಯಕನಾಗಿ ಪರಿಚಯಿಸುವ ಜವಾಬ್ದಾರಿ ನಿರ್ದೇಶಕ ಜಯತೀರ್ಥ ಅವರ ಮೇಲಿದೆಯಂತೆ. ಆದರೆ, ಇವರ ಸ್ಕ್ರಿಪ್ಟ್ ಸ್ವಲ್ಪ ತಡವಾಗುತ್ತಿರುವ ಹಿನ್ನೆಲೆ ಬೇರೆ ಕಥೆ ಹುಡುಕಾಟದಲ್ಲಿದ್ದಾರಂತೆ. ಇದರೊಂದಿಗೆ ತಾವೇ ಒಂದು ಕಥೆ ಬರೆದು ಆ್ಯಕ್ಟ್ ಮಾಡೋ ಚಿಂತನೆ ಕೂಡ ಈ ನಟನಲ್ಲಿದೆ. ಶೀಘ್ರದಲ್ಲೇ ಒಂದು ನಿರ್ಧಾರಕ್ಕೆ ಬರೋದಾಗಿ ಸಂಚೀತ್ ಹೇಳಿಕೊಂಡಿದ್ದಾರೆ.