ಸ್ಯಾಂಡಲ್ವುಡ್ನಲ್ಲಿ ತನ್ನ ಸ್ನೇಹಿತರಿಗೆ ಹಾಗೂ ಯುವ ನಟರಿಗೆ ಕಿಚ್ಚ ಸುದೀಪ್, ಅವ್ರ ಸಿನಿಮಾಗಳ ಮುಹೂರ್ತ, ಆಡಿಯೋ ರಿಲೀಸ್ಗಳನ್ನ ಮಾಡ್ತಾ ಸಪೋರ್ಟ್ ಮಾಡ್ತಾನೆ ಇರ್ತಾರೆ.
ಈಗ ಜೆ.ಕೆ ಅಭಿನಯಿಸುತ್ತಿರುವ ಐರಾವನ್ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್ ನೀಡುತ್ತಿದ್ದಾರೆ. ಜೆ.ಕೆ ಮತ್ತು ವಿವೇಕ್ ಒಟ್ಟಿಗೆ ನಟಿಸ್ತಾ ಇರೋ ಐರಾವನ್ ಸಿನಿಮಾದ ಕಥೆ ಕೇಳಿ, ಈ ಚಿತ್ರದ ಟೀಸರನ್ನು ಕಿಚ್ಚ ಸುದೀಪ್ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.
ಇಂದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಚಿತ್ರವಾಗಿದ್ದು, ಜೆ ಕೆ ಹಾಗೂ ವಿವೇಕ್ಗೆ ಜೋಡಿಯಾಗಿ ಅದ್ವಿತಿ ಶೆಟ್ಟಿ ನಟಿಸುತ್ತಿದ್ದಾರೆ. ಯುವ ನಿರ್ದೇಶಕ ರಾಮ್ಸ್ ರಂಗ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ.
ಜೆಕೆ, ವಿವೇಕ್, ಅದ್ವಿತಿ ಶೆಟ್ಟಿ ಅಲ್ಲದೇ ಅವಿನಾಶ್, ಕೃಷ್ಣ ಹೆಬ್ಬಾರ್, ವಂದನ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಎಸ್.ಪ್ರದೀಪ್ ವರ್ಮ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ದೇವೇಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕುಂಗ್ಫು ಚಂದ್ರು, ಸಣ್ಣಪ್ಪ ಸಾಹಸ ನಿರ್ದೇಶನವಿದೆ.
ಇದನ್ನೂ ಓದಿ: ಇದೇ ತಿಂಗಳ 20ರಂದು 'ಸರಿಗಮಪ ಸೀಸನ್ 17' ಗ್ರ್ಯಾಂಡ್ ಫಿನಾಲೆ!!
ಬೆಂಗಳೂರು, ಮಂಗಳೂರು ಮುಂತಾದ ಕಡೆ ಸುಮಾರು 45 ದಿನಗಳ ಚಿತ್ರೀಕರಣ ನಡೆದಿದೆ. ನಿರಂತರ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿರುವ ಐರಾವನ್ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಹೀಗಾಗಿ ಜೆ.ಕೆ ಐರಾವನ್ ಚಿತ್ರಕ್ಕೆ ಈಗ ಪೈಲ್ವಾನ್ ಸಾಥ್ ಸಿಕ್ಕಿದೆ.