ETV Bharat / sitara

ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್​​​​... ಪೈಲ್ವಾನ್​​​​​ ಮನೆಗೆ ಬಂದ ಗಣೇಶ! - ದಬಾಂಗ್​​​​​ 3

ಸ್ಯಾಂಡಲ್​ವುಡ್ ಪೈಲ್ವಾನ್ ಸುದೀಪ್​​ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ರಾತ್ರಿಯಿಂದಲೇ ಸಂಭ್ರಮಾಚರಣೆ ಜೋರಾಗಿದ್ದು, ಅಭಿಮಾನಿಗಳು ದೂರದೂರುಗಳಿಂದ ಸುದೀಪ್ ಅವರನ್ನು ನೋಡಲು ಆಗಮಿಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಇನ್ನಿತರರು ರಾತ್ರಿ ಸುದೀಪ್ ಮನೆಗೆ ಭೇಟಿ ನೀಡಿ ಶುಭ ಕೋರಿದ್ದಾರೆ.

ಕಿಚ್ಚ ಸುದೀಪ್
author img

By

Published : Sep 2, 2019, 10:48 AM IST

ಇಂದು ರಾಜ್ಯದ ಜನತೆ ಗೌರಿ-ಗಣೇಶ ಹಬ್ಬವನ್ನು ಆಚರಿಸುತ್ತಿದ್ದಾರೆ. ಇದರ ಜೊತೆ ಜೊತೆಗೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕೂಡಾ ಮತ್ತೊಂದು ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು ಮಾಣಿಕ್ಯ 46ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಸುದೀಪ್ ಹುಟ್ಟುಹಬ್ಬ ಆಚರಣೆ

ಬಹಳ ದಿನಗಳಿಂದಲೇ ಅಭಿಮಾನಿಗಳು ಕಿಚ್ಚನ ಬರ್ತಡೇ ಆಚರಣೆಗೆ ತಯಾರಿ ಮಾಡಿಕೊಂಡಿದ್ದರು. 3 ದಿನಗಳ ಹಿಂದೆ ಕಾಮನ್ ಡಿಪಿ ತಯಾರಿಸಿ ಹುಟ್ಟುಹಬ್ಬದಂದು ಕಿಚ್ಚನ ಅಭಿಮಾನಿಗಳೆಲ್ಲ ಕಾಮನ್ ಡಿಪಿ ಹಾಕಿಕೊಳ್ಳುವಂತೆ ಸಂದೇಶ ನೀಡಿದ್ದರು. ತಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಸೇರಿ ಪೈಲ್ವಾನ್​​ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೋಟಿಗೊಬ್ಬ-3 ಹಾಗೂ ದಬಾಂಗ್​​​​​ 3 ಚಿತ್ರದ ಶೂಟಿಂಗ್​​ನಲ್ಲಿ ಬ್ಯುಸಿ ಇರುವ ಸುದೀಪ್, ಅಭಿಮಾನಿಗಳು, ಸ್ನೇಹಿತರಿಗಾಗಿ ಇಂದು ಬಿಡುವು ಮಾಡಿಕೊಂಡು ನಿನ್ನೆಯೇ ಹೈದರಾಬಾದ್​​ನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

ನಿನ್ನೆ ರಾತ್ರಿ ಸುದೀಪ್ ತಮ್ಮ ಪುಟ್ಟೇನಹಳ್ಳಿ ನಿವಾಸದಲ್ಲಿ ಪತ್ನಿ ಪ್ರಿಯಾ, ಗೋಲ್ಡನ್ ಸ್ಟಾರ್ ಗಣೇಶ್, ರವಿಶಂಕರ್ ಗೌಡ ಹಾಗೂ ಚಿತ್ರರಂಗದ ಇತರ ಸ್ನೇಹಿತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿದರು. ಈ ವೇಳೆ ಗಣೇಶ್ ಹಾಗೂ ರವಿಶಂಕರ್ ಕಿಚ್ಚನಿಗಾಗಿ ಜನುಮ ದಿನದ ಹಾಡನ್ನು ಹೇಳಿ ವಿಶ್ ಮಾಡಿದರು. ನಿನ್ನೆ ರಾತ್ರಿಯಿಂದಲೇ ಕಿಚ್ಚನ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದು, ಸುದೀಪ್ ಕೂಡಾ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.

Intro:ಕಿಚ್ಚ ಸುದೀಪ್ ಬರ್ತ್ ಡೇ ಸೆಲೆಬ್ರೇಷನ್.....ಮಾಣಿಕ್ಯನ ಮನೆಯಲ್ಲಿ " ಗಣಪ" ಪ್ರತ್ಯಕ್ಷ!!!!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.೪೬ ನೇ ವಸಂತಕ್ಕೆ ಕಾಲಿಟ್ಟ. ಪೈಲ್ವಾನ ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿ ಕೊಂಡಿದ್ದಾರೆ.ಕೋಟಿಗೊಬ್ಬ೩ ಹಗೂ ದಬಾಂಗ್ ೩ ಚಿತ್ರದ ಶೂಟಿಂಗ್ ಬ್ಯುಸಿಯಲ್ಲಿ ಇರುವ ಕಿಚ್ಚ ಅಭಿಮಾನಿಗಳಿಗಾಗಿ ನಿನ್ನೆಯೆ ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.Body:ಆಗಮಿಸಿದ್ದಾರೆ.ಅಲ್ಲದೆ ಮಧ್ಯರಾತ್ರಿ ೧೨ ಗಂಟೆಗೆ ಪುಟ್ಟೇನಹಳ್ಳಿ ನಿವಾಸದಲ್ಲಿ ಪತ್ನಿ ಪ್ರಿಯಾ ,ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಟ ರವಿಶಂಕರ್ ಗೌಡ ಹಾಡು ಹಾಡುವ ಕಿಚ್ಚನ ಹುಟ್ಟು ಹಬ್ಬವನ್ಜು ಆಚರಿಸಿದ್ದಾರೆ.ಅಲ್ಲದೆ‌ ಫೈಲ್ವಾನ್ ಅಭಿಮಾನಿ ಬಳಗ ನೆಚ್ಚಿನ ನಟನ ಬರ್ತ್ ಡೆ ಅನ್ನು ಕಿಚ್ಚೋತ್ಸವ ವನ್ನಾಗಿ ವಿಶೇಷವಾಗಿ ಆಚರಿಸುತ್ತಿದ್ದಾರೆ.
ಅಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಅಭಿಮನಿಗಳಿಗೆ ಸುದೀಪ್ ಮಧ್ಯರಾತ್ರಿಯೇ ದರ್ಶನ ಕೊಟ್ಟಿದ್ದಾರೆ..

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.