ETV Bharat / sitara

'ಕೆಜಿಎಫ್ ಚಾಪ್ಟರ್-2' ಅಭಿಮಾನಿಗಳಿಗೆ ಸಿಹಿ ಸುದ್ದಿ.. ಚಿತ್ರದ ಬಿಡುಗಡೆ ದಿನಾಂಕ ಘೋಷಣೆ..

author img

By

Published : Aug 22, 2021, 4:05 PM IST

Updated : Aug 22, 2021, 4:16 PM IST

ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಎಲ್ಲಾ ಭಾಷೆಯ ಆಡಿಯೋ ರೈಟ್ಸ್ 7 ಕೋಟಿ ರೂ.ಗೆ ಸೇಲ್ ಆಗಿದೆ. ಚಿತ್ರದ ಡಿಜಿಟಲ್ ರೈಟ್ಸ್ ಅನ್ನು ಅಮೆಜಾನ್ ಪ್ರೈಮ್​ 50 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ ಎಂದು ಹೇಳಲಾಗುತ್ತಿದೆ..

KGF Chapter 2 will be out in theaters on april 14th 2022.
'ಕೆಜಿಎಫ್ ಚಾಪ್ಟರ್-2'

ಕೇವಲ ಟೀಸರ್‌ನಿಂದಲೇ ವಿಶ್ವದಾಖಲೆ ನಿರ್ಮಿಸಿರುವ 'ಕೆಜಿಎಫ್ ಚಾಪ್ಟರ್-2' ಚಿತ್ರ ತಂಡದ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಹೊರ ಬಿದ್ದಿದೆ. ಈ ಬಗ್ಗೆ ಹೊಸ ಅಪ್​ಡೇಟ್​ ನೀಡಿದ್ದು, ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದೆ.

ಟೀಸರ್​ನಿಂದ ಚಿತ್ರರಂಗದ ಹಲವು ದಾಖಲೆ ಧೂಳೀಪಟ ಮಾಡಿರುವ ಈ ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಬಗ್ಗೆ ಟ್ವೀಟ್​ ಮಾಡಿರುವ ಚಿತ್ರ ತಂಡ, 2022ರ ಏಪ್ರಿಲ್​ 14ರಂದು ಕೆಜಿಎಫ್-2 ರಿಲೀಸ್​ ಆಗಲಿದೆ ಎಂದು ತಿಳಿಸಿದೆ.

ಚಿತ್ರದ ನಾಯಕ ರಾಕಿಂಗ್​ ಸ್ಟಾರ್​ ಯಶ್ ಹಾಗೂ ಹೊಂಬಾಳೆ ಫಿಲಂಸ್‌ ಕಡೆಯಿಂದ ಟ್ವೀಟ್​ ಮಾಡಿ ಅಧಿಕೃತವಾಗಿ ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಲಾಗಿದೆ. ಇತ್ತೀಚೆಗೆ ಕೆಜಿಎಫ್-2 ಚಿತ್ರದ ಸ್ಯಾಟಲೈಟ್​ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಜೀ ವಾಹಿನಿ ಯಶಸ್ವಿಯಾಗಿತ್ತು. ಚಿತ್ರದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸ್ಯಾಟ್​ಲೈಟ್ ಹಕ್ಕುಗಳನ್ನು ವಾಹಿನಿ ಪಡೆದಿದೆ.

ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಎಲ್ಲಾ ಭಾಷೆಯ ಆಡಿಯೋ ರೈಟ್ಸ್ 7 ಕೋಟಿ ರೂ.ಗೆ ಸೇಲ್ ಆಗಿದೆ. ಚಿತ್ರದ ಡಿಜಿಟಲ್ ರೈಟ್ಸ್ ಅನ್ನು ಅಮೆಜಾನ್ ಪ್ರೈಮ್​ 50 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: KGF Chapter2: ಜೀ ವಾಹಿನಿಗೆ ಸ್ಯಾಟಲೈಟ್ ಹಕ್ಕು ಮಾರಾಟ, ಹೊಸ ದಾಖಲೆ?

Last Updated : Aug 22, 2021, 4:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.