ETV Bharat / sitara

ವೃತ್ತಿ ಜೀವನದ ಅನುಭವ ಹಂಚಿಕೊಂಡ ಕೆಜಿಎಫ್ ಸಾಹಸ ನಿರ್ದೇಶಕ ವಿಕ್ರಮ್ ಮೋರ್

66ನೇ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಪಟ್ಟಿಯಲ್ಲಿ ಕೆಜಿಎಫ್​​​​ಗೆ ಅತ್ಯುತ್ತಮ ಗ್ರಾಫಿಕ್ಸ್ ಹಾಗೂ ಅತ್ಯುತ್ತಮ ಆ್ಯಕ್ಷನ್ ಕೊರಿಯೋಗ್ರಫಿಗಾಗಿ ಎರಡು ವಿಭಾಗಗಳಲ್ಲಿ ಪ್ರಶಸ್ತಿ ದೊರೆತಿದೆ. ಚಿತ್ರಕ್ಕೆ ಸ್ಟಂಟ್ ಕೊರಿಯೋಗ್ರಫಿ ಮಾಡಿದ ವಿಕ್ರಮ್ ಮೋರ್​​​​​​​​​​​​​ ಫೈಟ್ ಕಲಿತದ್ದು ಯೂಟ್ಯೂಬ್​​​​ ನೋಡಿಕೊಂಡು ಎಂದು ಅವರೇ ಹೇಳಿಕೊಂಡಿದ್ದಾರೆ.

ವಿಕ್ರಮ್ ಮೋರ್
author img

By

Published : Aug 20, 2019, 12:24 PM IST

ಕನ್ನಡ ಚಿತ್ರರಂಗದ ಸಾಹಸ ಕಲಾವಿದರ ಬಳಗವನ್ನು ಹೆಮ್ಮೆ ಪಡುವಂತೆ ಮಾಡಿದ ಸಾಹಸ ನಿರ್ದೇಶಕ ವಿಕ್ರಮ್ ಮೋರ್ 2003ರಿಂದ ಸ್ವತಂತ್ರ ಸಾಹಸ ನಿರ್ದೇಶಕನಾಗಿ ಕರಿಯರ್ ಆರಂಭಿಸಿದವರು. ‘ಕೆಜಿಎಫ್​’ ಚಿತ್ರದ ಆ್ಯಕ್ಷನ್ ಕೊರಿಯೋಗ್ರಫಿಗಾಗಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದುಕೊಟ್ಟವರು.

ವಿಕ್ರಮ್ ಅವರನ್ನು ಈ ಬಗ್ಗೆ ಕೇಳಿದರೆ 'ನಾನು ಎಲ್ಲವನ್ನೂ ಕಲಿತದ್ದು ಯೂಟ್ಯೂಬ್​​​​​​ ನೋಡಿಕೊಂಡು' ಎಂದು ಹೇಳುತ್ತಾರೆ. ನಾನು ಹೆಚ್ಚು ಓದಿಲ್ಲ, ಎಸ್​​​​​ಎಸ್​​ಎಲ್​​ಸಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದೇನೆ. ನಮ್ಮ ಮೂಲ ನೇಪಾಳ. ಬಹಳ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಈ ಸಾಹಸ ವೃತ್ತಿ ಆರಂಭಿಸಿದೆ. ಸುಮಾರು 500 ಸಿನಿಮಾಗಳಿಗೆ ನಾನು ಫೈಟರ್ ಅಗಿ ಕೆಲಸ ಮಾಡಿದ್ದೇನೆ. ಆದರೆ ಅದು ಸುಲಭದ ಕೆಲಸವಲ್ಲ. ಕೈ-ಕಾಲು ಮುರಿದುಹೋಗುವಂತಹ ರಿಸ್ಕ್​ ಕೆಲಸ. ರಾಷ್ಟ್ರಪ್ರಶಸ್ತಿ ಬಂದ ಮೇಲೆ ನನಗೆ ಹೆಚ್ಚಿನ ಗೌರವ ಹಾಗೂ ವೃತ್ತಿ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ.

ಸ್ವತಂತ್ಯ್ರ ಸಾಹಸ ನಿರ್ದೇಶಕ ಆಗಿ ಸುಮಾರು 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ವಿಕ್ರಮ್ ಬಳಿ ಸುಮಾರು ಸ್ಟಂಟ್ ಮಾಡುವ 35 ಮಂದಿ ಇದ್ದಾರಂತೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ವಿಕ್ರಮ್​​ ಫೈಟ್​ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಎಲ್ಲಾ ಸೂಪರ್​ಸ್ಟಾರ್​​​​ಗಳ ಜೊತೆ ಕೆಲಸ ಮಾಡಿದ ಹೆಮ್ಮೆ ಇದೆ ಎನ್ನುತ್ತಾರೆ ವಿಕ್ರಮ್. ಸಾಹಸ ಕಲಾವಿದರಿಗೆ ಕೂಡಾ ಉತ್ತಮ ಸ್ಥಾನಮಾನ ಸಿಗಬೇಕು ಎಂಬುದು ವಿಕ್ರಮ್ ಅವರ ಅಭಿಲಾಷೆಯಂತೆ.

ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೋರ್ ಕಲಿತದ್ದು ಯು ಟ್ಯೂಬ್ ಇಂದ

ಕನ್ನಡ ಚಿತ್ರ ರಂಗದ ಸಾಹಸ ಕಲಾವಿದರ ಬಳಗವನ್ನು ಹೆಮ್ಮೆ ಪಡುವಂತೆ ಮಾಡಿದ ಸಾಹಸ ನಿರ್ದೇಶಕ ವಿಕ್ರಮ್ ಮೋರ್ 2003 ರಿಂದ ಸ್ವತಂತ್ರ ಸಾಹಸ ನಿರ್ದೇಶಕ ಅದವರು ಕೆ ಜಿ ಎಫ್ ಚಿತ್ರದ ಒಂದು ಪೊಯೆಟಿಕ್ ಫೈಟ್, ಚೆಸ್ ದೃಷ್ಯಕ್ಕೆ 66 ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡು ಕನ್ನಡ ನಾಡಿಗೆ ಕೀರ್ತಿ ತಂದುಕೊಟ್ಟರು.

ಈ ಹೆಮ್ಮೆಯ ಕ್ಷಣದಲ್ಲಿ ವಿಕ್ರಮ್ ಮೋರ್ ಅವರನ್ನು ಮಾತನಾಡಿಸಿದರೆ ಅವರು ಹೇಳುವುದು ತಮ್ಮ ಕಲಿಕೆ ಆಗಿರುವುದು ಯು ಟ್ಯೂಬ್ ನೋಡಿಕೊಂಡು ಎಂದು ಹೇಳಿದ್ದಾರೆ. ನಾನು ಹೆಚ್ಚು ಓದಿಲ್ಲ. ಎಸ್ ಎಸ್ ಎಲ್ ಸಿ ಅಷ್ಟೇ ವಿಧ್ಯಾಬ್ಯಾಸ. ನಮ್ಮ ಮೂಲ ನೇಪಾಳ. ಅಲ್ಲಿಂದ ಬೆಂಗಳೂರಿಗ ಬಹಳ ವರ್ಷಗಳ ಹಿಂದೆ ಬಂದು ಈ ಸಾಹಸ ವೃತ್ತಿಗೆ ಸೇರಿಕೊಂಡೆ. ಸುಮಾರು 500 ಸಿನಿಮಾಗಳಿಗೆ ನಾನು ಫೈಟರ್ ಆಗಿ ಕೆಲಸ ಮಾಡಿದ್ದೇನೆ. ಅದು ಅಂತಿಂತ ಕೆಲಸ ಅಲ್ಲ – ಮೈ ಕೈ ಮುರಿದು ಹೋಗುವಂತ ಕೆಲಸ ಮಾಡಿದ್ದಾರೆ.

ಈಗ ರಾಷ್ಟ್ರ ಪ್ರಶಸ್ತಿ ಬಂದ ಮೇಲೆ ಗೌರವ ನನಗೂ ಹಾಗೂ ನನ್ನ ವೃತ್ತಿಗೆ ಹೆಚ್ಚಾಗಿದೆ. ಪತ್ರಿಕಾ ಗೋಷ್ಟಿಗಳಿಗೆ ನನ್ನನ್ನು ಕರೆಯುವಷ್ಟು ಗೌರವ ಸಿಕ್ಕುತ್ತಿದೆ. ಆದರೆ ನಾನು ಕೆಲಸ ಮಾಡಿದ ಚಿತ್ರ ಕೆ ಜಿ ಎಫ್ ಪತ್ರಿಕಾ ಘೋಷ್ಟಿಗಳಿಗೆ ನಾನು ಹೋಗಲು ಆಗಿರಲಿಲ್ಲ. ಈಗ ಕೆ ಜಿ ಎಫ್ ಚಾಪ್ಟರ್ 2 ಸಿನಿಮಾಕ್ಕೆ ನನಗೆ ಸಾಹಸ ನಿರ್ದೇಶನಕ್ಕೆ ಆಹ್ವಾನ ಬಂದಿಲ್ಲ ಎನ್ನುವ ವಿಕ್ರಮ್ ಮೋರ್ ಸ್ವತಂತ್ರ ಸಾಹಸ ನಿರ್ದೇಶಕ ಆಗಿ ಸುಮಾರು 90 ಕನ್ನಡ ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ.

ವಿಕ್ರಮ್ ಮೋರ್ ಬಳಿಯಲ್ಲಿ ಸುಮಾರು 35 ಸ್ಟಂಟ್ ಮಾಡುವವರು ಜೊತೆ ಇದ್ದಾರೆ. ಸಧ್ಯಕ್ಕೆ ಇವರ ದೊಡ್ಡ ಸಿನಿಮಾ ಅಂದರೆ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀ ಮನ್ ನಾರಾಯಣ’. ಇವರ ಪಟ್ಟಿಯಲ್ಲಿ ಎಲ್ಲ ಸೂಪರ್ ಸ್ಟಾರ್ ಸಿನಿಮಾಗಳಿಗೆ ಕೆಲಸ ಮಾಡಿದ ಹೆಮ್ಮೆ ಇದೆ.

ಸಾಹಸ ಕಲಾವಿದರ ಸ್ಥಿತಿಗತಿ ಬಗ್ಗೆ ಯೋಚನೆ ಮಾಡುವಂತೆ ಆಗಿ ಅವರಿಗೆ ಉತ್ತಮ ಸ್ಥಾನ ಮಾನ ಸಿಗಬೇಕು ಎಂಬುದು ಇವರ ಆಸೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.