ETV Bharat / sitara

Yash Birthday: ರಾಕಿಂಗ್​ ಸ್ಟಾರ್​ ಬರ್ತ್​​ಡೆ ಸ್ಪೆಷಲ್​.. ಕೆಜಿಎಫ್​-2 ಹೊಸ ಪೋಸ್ಟರ್​ ಬಿಡುಗಡೆ

author img

By

Published : Jan 8, 2022, 9:28 AM IST

Rocking Star Yash Birthday: ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಹಿನ್ನೆಲೆಯಲ್ಲಿ ಕೆಜಿಎಫ್​-2 ಚಿತ್ರ ತಂಡದಿಂದ ಮತ್ತೊಂದು ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

KGF 2 poster released on rocking star yash birthday
ಕೆಜಿಎಫ್​-2 ಹೊಸ ಪೋಸ್ಟರ್​ ಬಿಡುಗಡೆ

ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಹಿನ್ನೆಲೆಯಲ್ಲಿ ಕೆಜಿಎಫ್​-2 ಚಿತ್ರ ತಂಡದಿಂದ ಅಭಿಮಾನಿಗಳಿಗೆ ವಿಶೇಷ್​ ಗಿಫ್ಟ್​ ಲಭಿಸಿದೆ. ಹೊಂಬಾಳೆ ಸಂಸ್ಥೆಯು ಬಹುನಿರೀಕ್ಷಿತ ಚಿತ್ರದ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಿದೆ.

ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳ ಹೊಂಬಾಳೆ ಸಂಸ್ಥೆ ಅಧಿಕೃತ ಖಾತೆಗಳಲ್ಲಿ ಪೋಸ್ಟ್​ ಮಾಡಿ ಯಶ್​ಗೆ ಶುಭಾಶಯ ಕೋರಲಾಗಿದೆ. 'ಎಚ್ಚರಿಕೆ, ಮುಂದೆ ಅಪಾಯವಿದೆ ! ನಮ್ಮ ರಾಕಿ ಭಾಯ್​​ಗೆ ಜನ್ಮದಿನದ ಶುಭಾಶಯಗಳು' ಎಂದು ಹೊಂಬಾಳೆ ಟ್ವೀಟ್​ ಮಾಡಿದೆ. ಪೋಸ್ಟರ್​ ಶೇರ್​​​​​ ಆಗುತ್ತಿದ್ದಂತೆ ಅಭಿಮಾನಿಗಳು ಲೈಕ್​, ಪ್ರತಿಕ್ರಿಯೆಗಳ ಮೂಲಕ ನೆಚ್ಚಿನ ನಟನಿಗೆ ಶುಭ ಕೋರುತ್ತಿದ್ದಾರೆ.

ಈ ಬಗ್ಗೆ ನಿನ್ನೆ ಘೋಷಣೆ ಮಾಡಿದ್ದ ಹೊಂಬಾಳೆ 'ಬೆಳಗ್ಗೆ 9 ಗಂಟೆಗೆ ಉಗ್ರ ರಾಕ್ಷಸ ನಿಮ್ಮನ್ನು ಭೇಟಿಯಾಗಲಿದ್ದಾನೆ, ಮಿಂಚಿನದಾಳಿ ಆರಂಭವಾಗಲಿ! ಎಂದು ಟ್ವೀಟ್​ ಮಾಡಿತ್ತು. ಇದೀಗ ಪೋಸ್ಟರ್​ ರಿಲೀಸ್ ಆಗಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿಕ್ವೆಲ್​ಗೆ ಭಾರಿ ಬೇಡಿಕೆ ಇದ್ದು, ಏಪ್ರಿಲ್ 14ರಂದು ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಯಶ್​ಗೆ ನಿರ್ದೇಶಕ ಪವನ್​ ಒಡೆಯರ್​, ಖ್ಯಾತ ಗಾಯಕ ರಾಜೇಶ್​ ಕೃಷ್ಣನ್​ ಸೇರಿದಂತೆ ಹಲವರು ಜನ್ಮದಿನಕ್ಕೆ ಶುಭ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.