ETV Bharat / sitara

ಅನ್ಬರಿವ್ ಸಹಯೋಗದೊಂದಿಗೆ ಕೆಜಿಎಫ್​​​​​ ಸೀಕ್ವೆಲ್​​​​​​​​​​​​​​​​​​​​​​​​​​​​​​​​​ ರಾಕಿ-ಅಧೀರ ಕ್ಲೈಮಾಕ್ಸ್ ಫೈಟ್​​​​​​​​​​​​​​​​​​​​​​​​​​ ​​​​​​​ಚಿತ್ರೀಕರಣ - Director Prashant neel tweet

ಸಾಹಸ ನಿರ್ದೇಶಕ ಸಹೋದರರಾದ ಅನ್ಬು ಹಾಗೂ ಅರಿವು ಸಹಯೋಗದಲ್ಲಿ ಕೆಜಿಎಫ್​​​​​ ಸೀಕ್ವೆಲ್ ಕ್ಲೈಮಾಕ್ಸ್ ಫೈಟ್ ಚಿತ್ರೀಕರಣ ನಡೆಯುತ್ತಿರುವುದಾಗಿ ಪ್ರಶಾಂತ್ ನೀಲ್ ತಮ್ಮ ಟ್ವಿಟ್ಟರ್​​ನಲ್ಲಿ ಟ್ವೀಟ್ ಮಾಡಿದ್ದಾರೆ. ಶೀಘ್ರದಲ್ಲೇ ಸಿನಿಮಾವನ್ನು ಅಭಿಮಾನಿಗಳ ಮುಂದೆ ತರುವುದಾಗಿ ಕೂಡಾ ಪ್ರಶಾಂತ್ ನೀಲ್ ಹೇಳಿದ್ದಾರೆ.

KGF 2 fight climax
ಕೆಜಿಎಫ್​​​​​ ಸೀಕ್ವೆಲ್​​​​​​​​​​​​​​​​​​​​​​​​​​​​​​​​​ ಫೈಟ್​​​​​​​​​​​​​​​​​​​​​​​​​​ ​​​​​​​ಚಿತ್ರೀಕರಣ
author img

By

Published : Dec 8, 2020, 8:20 AM IST

Updated : Dec 8, 2020, 8:47 AM IST

ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿರುವ ಸಿನಿಮಾ ಕೆಜಿಎಫ್​​​ ಭಾಗ 2. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಕೆಜಿಎಫ್​​ 1 ಚಿತ್ರವನ್ನು ನೋಡಿದವರು ಸೀಕ್ವೆಲ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಕೆಜಿಎಫ್​​​ ಸೀಕ್ವೆಲ್​​​​ ಕ್ಲೈಮಾಕ್ಸ್ ಚಿತ್ರೀಕರಣ ನಡೆಯುತ್ತಿದ್ದು ಶೀಘ್ರವೇ ಚಿತ್ರವನ್ನು ಅಭಿಮಾನಿಗಳ ಮುಂದೆ ತರುವುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತ ಸಾಹಸ ನಿರ್ದೇಶಕ ಸಹೋದರರಾದ ಅನ್ಬು-ಅರಿವು (ಅನ್ಬರಿವ್​​) ಅವರೊಂದಿಗೆ ಇರುವ ಫೋಟೋವೊಂದನ್ನು ಹಂಚಿಕೊಂಡಿರುವ ಪ್ರಶಾಂತ್ ನೀಲ್, ಅನ್ಬರಿವ್ ಫೈಟ್ ಮಾಸ್ಟರ್ಸ್​​​​​​​​​ ಕೊರಿಯೋಗ್ರಫಿಯೊಂದಿಗೆ ರಾಕಿ ಹಾಗೂ ಅಧೀರ ನಡುವೆ ಕ್ಲೈಮಾಕ್ಸ್ ಫೈಟ್ ಚಿತ್ರೀಕರಣ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ಯಶ್ ಎದುರು ಸಂಜಯ್ ದತ್ ಅಧೀರನ ಪಾತ್ರದಲ್ಲಿ ನಟಿಸಿದ್ದಾರೆ. ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್​​​​ಗಾಗಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದರಿಂದ ಕೆಜಿಎಫ್ ಸೀಕ್ವೆಲ್​​​​​ ಸಂಜಯ್ ದತ್ ಭಾಗದ ಚಿತ್ರೀಕರಣ ತಡವಾಗಿದೆ. ಈ ಕ್ಲೈಮಾಕ್ಸ್ ಚಿತ್ರೀಕರಣ ಹೈದರಾಬಾದ್​​ನಲ್ಲಿ ಸುಮಾರು 10 ದಿನಗಳ ಕಾಲ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ.

KGF 2 fight climax shooting
ಶೂಟಿಂಗ್ ಸೆಟ್​​ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್

ಶರವೇಗದಲ್ಲಿ ಕೆಜಿಎಫ್​​​-2 ಚಿತ್ರೀಕರಣ ಜರುಗುತ್ತಿದ್ದು ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಸೀನಿಯರ್ ನಟಿ ರವೀನಾ ಟಂಡನ್​, ರಾವ್ ರಮೇಶ್ ಹಾಗೂ ಇನ್ನಿತರ ಸ್ಟಾರ್ ನಟ-ನಟಿಯರು ನಟಿಸುತ್ತಿರುವ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ವಿಜಯ್ ಕಿರಗಂದೂರ್​ ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ನಂತರ ಪ್ರಶಾಂತ್ ನೀಲ್ ಮತ್ತೆ ಹೊಂಬಾಳೆ ಫಿಲ್ಮ್​ ಬ್ಯಾನರ್ ಅಡಿಯಲ್ಲಿ ಪ್ರಭಾಸ್ ನಿರ್ದೇಶನದ 'ಸಲಾರ್' ಚಿತ್ರೀಕರಣ ಆರಂಭಿಸಲಿದ್ದಾರೆ.

Last Updated : Dec 8, 2020, 8:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.