ETV Bharat / sitara

ಆ ಸಂಗೀತ ನಿರ್ದೇಶಕನನ್ನು ಮದುವೆಯಾಗಲಿದ್ದಾರಾ ಕೀರ್ತಿ ಸುರೇಶ್​​...? - Keerthy Suresh marriage

ಉದ್ಯಮಿಯೊಬ್ಬರನ್ನು ಕೀರ್ತಿ ಸುರೇಶ್ ಮದುವೆಯಾಗುತ್ತಿದ್ದಾರೆ ಎಂಬ ಮಾತು ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಇದೀಗ ಅವರ ಹೆಸರು ಕಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್ ಜೊತೆ ಕೇಳಿಬಂದಿದೆ.

Keerthy suresh
ಕೀರ್ತಿ ಸುರೇಶ್
author img

By

Published : Feb 13, 2021, 8:08 AM IST

'ಮಹಾನಟಿ' ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ನಟಿ ಕೀರ್ತಿ ಸುರೇಶ್ ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಅಣ್ಣಾತೆ, ಸರ್ಕಾರುವಾರಿ ಪಾಟ, ಐನಾ ಇಷ್ಟಮ್ ನುವ್ವು ಸೇರಿ ಕೀರ್ತಿ 5-6 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಕೀರ್ತಿ ಮದುವೆ ಪ್ರಸ್ತಾಪ ಬಂದಿದ್ದು ಖ್ಯಾತ ಸಂಗೀತ ನಿರ್ದೇಕನನ್ನು ಮದುವೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ.

Anirudh Ravichander
ಅನಿರುದ್ಧ್​ ರವಿಚಂದರ್

ಇದನ್ನೂ ಓದಿ: ’’ಕಾನೂನು ಹೋರಾಟದಲ್ಲಿ ಗೆದ್ದೇ ಗೆಲ್ಲುವೆ ಎಂಬ ಭರವಸೆ ನನಗಿದೆ‘‘: ನಟಿ ಪದ್ಮಜಾ ರಾವ್

ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ಕೀರ್ತಿ ಮದುವೆಯಾಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಕೀರ್ತಿ ಹಾಗೂ ಅನಿರುದ್ಧ್ ಇಬ್ಬರೂ ಜೊತೆಯಾಗಿರುವ ಫೋಟೋಗಳು ವೈರಲ್ ಆಗುತ್ತಿರುವುದೇ ಸಾಕ್ಷಿ. ಬ್ಯುಸಿ ಕೆಲಸಗಳ ನಡುವೆಯೂ ಅನಿರುದ್ಧ್ ಹುಟ್ಟುಹಬ್ಬಕ್ಕೆ ಕೀರ್ತಿ ಸುರೇಶ್ ಹಾಜರಿದ್ದರು. ಆಗಲೇ ಇವರಿಬ್ಬರ ನಡುವೆ ಏನೋ ಇದೆ ಎಂಬ ಮಾತುಗಳು ಕೇಳಿಬಂದಿತ್ತು. ಈ ವರ್ಷದ ಅಂತ್ಯದಲ್ಲಿ ಈ ಜೋಡಿ ಮದುವೆಯಾಗಲಿದೆ ಎಂಬ ಮಾತು ಕಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಕೀರ್ತಿ ಆಗಲೀ, ಅನಿರುದ್ಧ್ ಆಗಲೀ ತುಟಿ ಬಿಚ್ಚಿಲ್ಲ. ಇದಕ್ಕೂ ಮುನ್ನ ಕೀರ್ತಿ ಹೆಸರು ಉದ್ಯಮಿಯೊಬ್ಬರೊಂದಿಗೆ ಕೇಳಿಬಂದಿತ್ತು. ಈ ಸಮಯದಲ್ಲಿ ಕೀರ್ತಿ ಕೂಡಾ ಗರಂ ಆಗಿದ್ದರು. ಇದೀಗ ಅನಿರುದ್ಧ್ ಜೊತೆ ಅವರ ಹೆಸರು ಕೇಳಿ ಬಂದಿದ್ದರೂ ಕೀರ್ತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ ಅನಿರುದ್ಧ್ ಹೆಸರು ಗಾಯಕಿ ಜೊನಿತಾ ಗಾಂಧಿ ಜೊತೆ ಕೇಳಿಬಂದಿತ್ತು. ಯಾವುದು ಸುಳ್ಳು, ಯಾವುದು ನಿಜ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.