ಉಣ್ಣಿ.ಕೆ.ಆರ್. ನಿರ್ದೇಶನದ 'X11-C' ಚಿತ್ರದಲ್ಲಿ ಶಿಕ್ಷಕಿ ಪಾತ್ರ ಮಾಡುತ್ತಿದ್ದಾರೆ. ಈ ಮಲಯಾಳಂ ಸಿನಿಮಾ ಕಾಲೇಜಿನ ಬ್ಯಾಕ್ ಡ್ರಾಪ್ಲ್ಲಿ ನಡೆಯುವ ಕಥೆ. ಜೊತೆಗೆ ಮರ್ಡರ್ ಮಿಸ್ಟ್ರಿ ಸಹ ಅಡಗಿದೆ.
ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಕಾವ್ಯಾ ಶೆಟ್ಟಿ, 2013ರಲ್ಲಿ 'ನಮ್ ದುನಿಯಾ ನಮ್ ಸ್ಟೈಲ್' ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಶಿವಾನಿ, ನಟಡು (ತೆಲುಗು), ಇದು ಎನ್ನ ಮಾಯಮ್ (ತಮಿಳು) ಇಷ್ಟಕಾಮ್ಯ, ಜೂಮ್, ಸ್ಮೈಲ್ ಪ್ಲೀಸ್, ಸಿಲಿಕಾನ್ ಸಿಟಿ, 3 ಗಂಟೆ 30 ನಿಮಿಷ 30 ಸೆಕಂಡ್, ಸಂಹಾರ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಲೂಸ್ ಮಾದ ಯೋಗಿ ಜೊತೆ ‘ಲಂಕೆ’ ಹಾಗೂ ಮತ್ತೊಂದು ಸಿನಿಮಾ ‘ಸೋಲ್ಡ್’ ಡ್ಯಾನಿಷ್ ಸೆಟ್ ಜೊತೆ ಅಭಿನಯಿಸಿದ್ದಾರೆ.