ETV Bharat / sitara

ಕತ್ರಿನಾ ಕೈಫ್ ಅಭಿನಯದ 'ಮೆರ್ರಿ ಕ್ರಿಸ್‌ಮಸ್‌' ಚಿತ್ರೀಕರಣ ಪ್ರಾರಂಭ - ನಟ ವಿಜಯ್​ ಸೇತುಪತಿ ಹೊಸ ಸಿನಿಮಾ

ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ನಟನೆಯ 'ಟೈಗರ್ 3' ಸಿನಿಮಾ ಏಪ್ರಿಲ್ 21ಕ್ಕೆ ಈದ್ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು, ಈ ಬೆನ್ನಲ್ಲೇ ನಟಿ ಮತ್ತೊಂದು ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವುದಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ..

ಕತ್ರಿನಾ ಕೈಫ್
ಕತ್ರಿನಾ ಕೈಫ್
author img

By

Published : Mar 12, 2022, 11:32 AM IST

ಮದುವೆಯ ನಂತರವೂ ಬಾಲಿವುಡ್ ನಟಿ ಕತ್ರಿನಾ ಕೈಫ್ ಸಿನಿಮಾ ಶೂಟಿಂಗ್​ನಲ್ಲಿ ಫುಲ್​ ಬ್ಯೂಸಿಯಾಗಿದ್ದಾರೆ. ಇಂದು ತಮ್ಮ ಮುಂಬರುವ ಚಿತ್ರ 'ಮೆರ್ರಿ ಕ್ರಿಸ್‌ಮಸ್‌' ಚಿತ್ರೀಕರಣವನ್ನು ಪ್ರಾರಂಭಿಸಿದ್ದು, ಈ ಕುರಿತಾದ ಪೋಸ್ಟ್​ವೊಂದನ್ನ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಡಿಸೆಂಬರ್ 2021ರಲ್ಲಿ ನಿರ್ದೇಶಕ ಶ್ರೀರಾಮ್ ರಾಘವನ್ ಮತ್ತು ನಿರ್ಮಾಪಕ ರಮೇಶ್ ತೌರಾನಿ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವನ್ನು ಶೇರ್​ ಮಾಡುವ ಮೂಲಕ 'ಮೆರ್ರಿ ಕ್ರಿಸ್‌ಮಸ್‌' ಸಿನಿಮಾ ಮಾಡುತ್ತಿರುವ ಬಗ್ಗೆ ಅಧಿಕೃತವಾಗಿ ದೃಢಪಡಿಸಿದ್ದರು. ಇದಾದ ಒಂದು ತಿಂಗಳ ನಂತರ ಕತ್ರಿನಾ ಚಿತ್ರತಂಡದ ಜೊತೆಗಿರುವ ಫೋಟೋವನ್ನು ಹಂಚಿಕೊಂಡು 'ಹೊಸ ಪ್ರಾರಂಭ' ಎಂಬ ಶೀರ್ಷಿಕೆ ನೀಡಿದ್ದರು.

ಇಂದು ಮತ್ತೊಂದು ಪೋಸ್ಟ್​ ಮಾಡಿರುವ ನಟಿ, 'ಮೆರ್ರಿ ಕ್ರಿಸ್‌ಮಸ್‌' ಸಿನಿಮಾದ ಶೂಟಿಂಗ್​ ಇಂದಿನಿಂದ ಪ್ರಾರಂಭಿಸಲಾಗಿದೆ ಎಂಬ ಮಾಹಿತಿ ನೀಡಿ, ನಾನು ಯಾವಾಗಲೂ ಶ್ರೀರಾಮ್ ಸರ್ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ಥ್ರಿಲ್ಲರ್​ ಮತ್ತು ಹಾರರ್​ ದೃಶ್ಯಗಳನ್ನ ಅತ್ಯುತ್ತಮವಾಗಿ ಸೆರೆ ಹಿಡಿಯುತ್ತಾರೆ. ನಟ ವಿಜಯ್​ ಸೇತುಪತಿ ಅವರೊಂದಿಗೆ ಕೆಲಸ ಮಾಡಲು ತುಂಬಾ ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ನಟನೆಯ 'ಟೈಗರ್ 3' ಸಿನಿಮಾ ಏಪ್ರಿಲ್ 21ಕ್ಕೆ ಈದ್ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು, ಈ ಬೆನ್ನಲ್ಲೇ ನಟಿ ಮತ್ತೊಂದು ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವುದಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ.

ಇದನ್ನೂ ಓದಿ: ಪ್ರೇಯಸಿ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್​ ರಾಹುಲ್​ ಚಾಹರ್‌!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.