ಕಳೆದ ಎರಡು ವಾರಗಳ ಹಿಂದೆ ಬಿಡುಗಡೆಯಾಗಿದ್ದ ಕನ್ನಡದ ವೀಕ್ ಎಂಡ್ ಸಿನಿಮಾ ಒಳ್ಳೆಯ ವಿಮರ್ಶೆ ಪಡೆದುಕೊಂಡಿತು. ಈ ಚಿತ್ರ ವೀಕ್ಷಿಸಿದ ದಾವಣಗೆರೆ ಮೂಲದ ವ್ಯಕ್ತಿಯೊಬ್ಬರು ಇದನ್ನು ತಮಿಳಿನಲ್ಲಿ ರಿಮೇಕ್ ಮಾಡಲು ಮುಂದಾಗಿದ್ದಾರೆ.
ಕನ್ನಡದಲ್ಲಿ ಈ ಚಿತ್ರವನ್ನು ನಿರ್ದೇಶಿಸಿರುವ ಶೃಂಗೇರಿ ಸುರೇಶ್ ಅವರೇ ತಮಿಳಿನಲ್ಲೂ ನಿರ್ದೇಶನ ಮಾಡಲಿದ್ದಾರೆ. ನಿರ್ದೇಶಕರನ್ನು ಹೊರತು ಪಡಿಸಿ ಕಲಾವಿದರು ಹಾಗೂ ತಂತ್ರಜ್ಞರು ತಮಿಳಿನವರೇ ಆಗಿರುತ್ತಾರಂತೆ.
ಅಲ್ಲಿನ ನೆಟಿವಿಟಿಗೆ ತಕ್ಕ ಹಾಗೆ ಕಥೆಯನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದಾಗಿ ತಿಳಿಸಿರುವ ನಿರ್ದೇಶಕ ಶೃಂಗೇರಿ ಸುರೇಶ್, ಸದ್ಯದಲ್ಲೇ ಇದಕ್ಕೆ ಸಂಬಂಧಿಸಿದ ಕಾರ್ಯಗಳು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ. ಅವರು ನಿರ್ಮಿಸಿದ್ದ ಈ ಚಿತ್ರದಲ್ಲಿ ಹಿರಿಯ ನಟ ಅನಂತ್ನಾಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.