ಲೂಸಿಯಾ ನಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿದ ಪವನ್‌ಕುಮಾರ್ ಅವರ ಥ್ರಿಲ್ಲರ್ ಸಿನಿಮಾ ಯುಟರ್ನ್ ಈಗ ಹೊಸ ದಾಖಲೆ ಬರೆದಿದೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ಹವಾ ಸೃಷ್ಟಿಸಿದೆ.
ದಕ್ಷಿಣ ಭಾರತದ ಭಾಷೆಗಳಾದ ತಮಿಳು, ತೆಲುಗು ಮತ್ತು ಮಲಯಾಳಂ, ಸಿಂಹಳಿ, ಫಿಲಿಪಿನೋ, ಹಿಂದಿ ಮತ್ತು ಬಂಗಾಳಿ ಸೇರಿ 8 ಭಾಷೆಗಳಿಗೆ ಯು ಟರ್ನ್ ರಿಮೇಕ್ ಆಗಿರೋದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.
ಈ ಸಿನಿಮಾ ಮೂಲಕ ಶ್ರದ್ಧಾ ಶ್ರೀನಾಥ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಸಿನಿಮಾ ತೆರೆ ಕಂಡಾಗ ಬೇರೆ ಭಾಷೆಗೆ ರಿಮೇಕ್ ಆಗುತ್ತೆ ಅಂತಾ ಸ್ವತಃ ನಿರ್ದೇಶಕ ಪವನ್ ಕುಮಾರ್ಗೂ ಗೊತ್ತಿರಲಿಲ್ಲ.
ಇದನ್ನೂ ಓದಿ.. ಕನ್ನಡದ ‘ಯು ಟರ್ನ್’ ಫಿಲಿಫೈನ್ಸ್ ಭಾಷೆಗೆ ರಿಮೇಕ್