ದಕ್ಷಿಣ ಭಾರತದ ಬಹುನಿರೀಕ್ಷಿತ ಸೈರಾ ನರಸಿಂಹ ರೆಡ್ಡಿ ಚಿತ್ರದ ಟೀಸರ್ ಏಕಕಾಲದಲ್ಲಿ ಪಂಚಭಾಷೆಗಳಲ್ಲಿ ರಿಲೀಸ್ ಆಗಿದೆ.
ಮೆಗಾ ಸ್ಟಾರ್ ಚಿರಂಜೀವಿ ಮುಖ್ಯಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಬಾಲಿವುಡ್ ಮೇರು ನಟ ಅಮಿತಾಭ್ ಬಚ್ಚನ್, ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್, ತಮಿಳು ನಟ ವಿಜಯ್ ಸೇತುಪತಿ ಸೇರಿದಂತೆ ದೈತ್ಯ ನಟರ ತಾರಾಬಳಗವಿದೆ. ಈಗಾಗಲೇ ಮೇಕಿಂಗ್ನಿಂದಲೇ ಸೌತ್ ಸಿನಿರಸಿಕರ ಗಮನ ಸೆಳೆದಿರುವ ಈ ಚಿತ್ರದ ಟೀಸರ್ ಭರ್ಜರಿಯಾಗಿ ಮೂಡಿ ಬಂದಿದೆ.
ಕನ್ನಡಕ್ಕೆ ಡಬ್ ಆಗಿರುವ ಟೀಸರ್ ಕೂಡ ಅದ್ಭುತವಾಗಿದ್ದು, ಡಬ್ಬಿಂಗ್ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಒಂದು ನಿಮಿಷ 47 ಸೆಕೆಂಡುಗಳ ಈ ಟೀಸರ್ನಲ್ಲಿ ಬ್ರಿಟಿಷರ ವಿರುದ್ಧ ಯುದ್ಧದ ದೃಶ್ಯಗಳು ಮೈನವಿರೇಳಿಸುವಂತೆ ಮೂಡಿ ಬಂದಿದೆ.
- " class="align-text-top noRightClick twitterSection" data="">
ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಪಂಚ ಭಾಷೆಯಲ್ಲಿ ಇದೇ ಅಕ್ಟೋಬರ್ 2 ರಂದು ಏಕಕಾಲದಲ್ಲಿ ತೆರೆ ಕಾಣಲಿದೆ. ರಾಮ್ ಚರಣ್ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ಐತಿಹಾಸಿಕ ಚಿತ್ರಕ್ಕೆ ಸುರೇಂದ್ರ ರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ.