ETV Bharat / sitara

ಶುರುವಾಗುವ ಮೊದಲೇ 'ಜುಗಲ್ ಬಂದಿ' ಚಿತ್ರದ ಆಡಿಯೋ ರೈಟ್ಸ್ ಸೋಲ್ಡ್ ಔಟ್ - ಜುಗಲ್ ಬಂದಿ ಸಿನಿಮಾದ ಆಡಿಯೋ ರೈಟ್ಸ್ ಮಾರಾಟ

ದಿವಾಕರ್ ಡಿಂಡಿಮ ಆ್ಯಕ್ಷನ್ ಕಟ್ ಹೇಳಿ ನಿರ್ಮಿಸುತ್ತಿರುವ ಜುಗಲ್ ಬಂದಿ ಸಿನಿಮಾ ಆರಂಭವಾಗುವ ಮೊದಲೇ ಆಡಿಯೋ ರೈಟ್ಸ್​ ಮಾರಾಟವಾಗಿದೆ.

movie Jugalbandi
ಜುಗಲ್ ಬಂದಿ ಸಿನಿಮಾ
author img

By

Published : Nov 22, 2021, 9:47 PM IST

ದಿವಾಕರ್ ಡಿಂಡಿಮ ಆ್ಯಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಲು ಸಜ್ಜಾಗಿರುವ ಜುಗಲ್ ಬಂದಿ ಸಿನಿಮಾಕ್ಕೆ ಸ್ಯಾಂಡಲ್​​​ವುಡ್​​​ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಚಿತ್ರ ಆರಂಭವಾಗುವ ಮೊದಲೇ ಇದರ ಆಡಿಯೋ ರೈಟ್ಸ್ ಉತ್ತಮ ಮೊತ್ತಕ್ಕೆ ಮಾರಾಟ ಆಗಿರೋದು ಚಿತ್ರತಂಡಕ್ಕೆ ಸಂತಸ ತಂದಿದೆ.

ಜುಗಲ್ ಬಂದಿ ಚಿತ್ರತಂಡ

ಆಡಿಯೋ ರೈಟ್ಸ್ ಸೇಲ್ ಆದ ಖುಷಿಯಲ್ಲಿರುವ ಚಿತ್ರತಂಡ ಇಂದು ಶುಭ ಘಳಿಗೆಯಲ್ಲಿ ಅದ್ಧೂರಿಯಾಗಿ‌ ಮುಹೂರ್ತ ನೆರವೇರಿಸಿದೆ. ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ ನಡೆದ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ನಾಯಕ ಯಶ್ ಶೆಟ್ಟಿ, ಸಂತೋಷ್ ಅಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ ಮಾನಸಿ ಸುಧೀರ್, ನಿರ್ದೇಶಕ ದಿವಾಕರ್ ಡಿಂಡಿಮ ಮುಂತಾದವರು ಭಾಗಿಯಾಗಿದ್ದರು.

Kannada movie Jugalbandi team
ಜುಗಲ್ ಬಂದಿ ಚಿತ್ರತಂಡ

ಥ್ರಿಲ್ಲರ್ ವಿಷಯ ಹೊಂದಿರುವ ಜುಗಲ್ ಬಂದಿ ಸಿನಿಮಾಗೆ ಪ್ರದ್ಯೋತನ್ ಸಂಗೀತ, ಎಸ್​.ಕೆ.ರಾವ್ ಛಾಯಾಗ್ರಹಣವಿದೆ. ಸಿನಿಮಾದ ಫಸ್ಟ್​​ಲುಕ್​​ ರಿಲೀಸ್​ ಆಗಿದ್ದು, ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಇಂದಿನಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ.

ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ​​ ಅಭಿನಯದ 'ರೈಡರ್' ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.