ಈ ವಾರ ನಾಲ್ಕು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅವುಗಳ ಪೈಕಿ ಒಂದು ಮಕ್ಕಳ ಸಿನಿಮಾ ಸೇರಿದೆ. ಈ ಸಿನಿಮಾಗಳ ಶೀರ್ಷಿಕೆ ಜೋಡಿಸಿದರೆ 'ಕವಲು ದಾರಿ'ಯಲ್ಲಿ ನೈಟ್ ಔಟ್ ಹೋಗಿ 'ಜೈ ಕೇಸರಿ ನಂದನ' ಅನ್ನುತ್ತ 'ವಿರೂಪಾಕ್ಷಣ' ದರ್ಶನ' ಪಡೆಯಬಹುದು.
ಹೌದು, ಕವಲು ದಾರಿ, ನೈಟ್ ಔಟ್, ಜೈ ಕೇಸರಿ ನಂದನ್ ಹಾಗೂ ಮಕ್ಕಳ ಸಿನಿಮಾ ವಿರೂಪಾಕ್ಷಣ ಈ ವಾರ ತೆರೆಗೆ ಬರುತ್ತಿವೆ. ಈ ನಾಲ್ಕು ಸಿನಿಮಾಗಳಲ್ಲಿ ಮೂರು ಚಿತ್ರಗಳಿಂದ ಐದು ನಾಯಕಿಯರು ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಮೊದಲಿಗೆ ಗುಜರಾತಿ ಬೆಡಗಿ ಶ್ರುತಿ ಗೊರಡಿಯ ಕನ್ನಡದ ‘ಸಂಕಷ್ಟ ಕರ ಗಣಪತಿ’ ಸಿನಿಮಾ ಚಿತ್ರದಿಂದ ಚಂದನವನಕ್ಕೆ ಪಾದ ಬೆಳಸಿದರು. ಈಗ ‘ನೈಟ್ ಔಟ್’ ಚಿತ್ರದಲ್ಲಿ ಪ್ರಮುಖ ಪಾತ್ರದಾರಿ. ಇವರಿಗೆ ಜೊತೆಯಾಗಿ ಭರತ್ ನಾಯಕ ಆಗಿ ಅಭಿನಯಿಸಿದ್ದಾರೆ. ಚಿತ್ರದ ಮತ್ತೊಂದು ಪಾತ್ರದಲ್ಲಿ ಅಕ್ಷಯ್ ಆಟೋ ಡ್ರೈವರ್ ಆಗಿ ಅಭಿನಯಿಸಿದ್ದಾರೆ. ಇದು ನಟ ರಾಕೇಶ್ ಅಡಿಗ ಅವರ ಚೊಚ್ಚಲ ನಿರ್ದೇಶನದ ಚಿತ್ರ.
ರೋಷಣಿ ಪ್ರಕಾಶ್ ‘ಕವಲು ದಾರಿ’ ಚಿತ್ರದಿಂದ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಈ ಮೈಸೂರು ಹುಡುಗಿಗೆ ಈ ಮೊದಲು 'ಟೈಗರ್ ಗಲ್ಲಿ' ಚಿತ್ರದಿಂದ ಆಹ್ವಾನ ಬಂದಿತ್ತು. ಆದರೆ, ಇದಕ್ಕೆ ನೋ ಎಂದಿದ್ದರು ಈ ಭರತನಾಟ್ಯ ಕಲಾವಿದೆ. ಇದೀಗ 'ಕಾವಲು ದಾರಿ' ಸಿನಿಮಾದಲ್ಲಿ ಪ್ರಿಯಾ ಪಾತ್ರದಲ್ಲಿ ಅಚ್ಯುತ್ ಕುಮಾರ್ ಮಗಳಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ‘ಊರು ಸುಟ್ರೂ ಹನುಮಪ್ಪ ಹೊರಗೆ’ ಕಾದಂಬರಿ ಪ್ರೇರಿತ ಸಿನಿಮಾ‘ಜೈ ಕೇಸರಿ ನಂದನ್’ ಮುಖಾಂತರ ಅಮೃತಾ ಹಾಗೂ ಅಮೃತಾ ಕಾಳೆ ಹೆಸರಿನ ಎರಡು ಪ್ರತಿಭೆಗಳು ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅಮೃತಾ ಉತ್ತರ ಕರ್ನಾಟಕದ ಹುಡುಗಿ ಆಗಿ ತುಂಗಾ ಪಾತ್ರ, ಹಾಗೂ ಅಮೃತಾ ಕಾಳೆ 'ಚಿನ್ನು'ಆಗಿ ಪೆದ್ದು ಪೆದ್ದಾದ ಪಾತ್ರ ಮಾಡಿದ್ದಾರೆ. ಇವರಿಬ್ಬರ ಜೊತೆಗೆ ತೃತೀಯ ನಾಯಕಿ ಅಶ್ವಿನಿ ಪೂಜಾರಿ ಅವರು ಚಿತ್ರದಲ್ಲಿ ಒಳ್ಳೆಯ ಅವಕಾಶ ಇದೆ.