ಕನ್ನಡ ಚಿತ್ರ ರಂಗದ ‘ಬೆಳದಿಂಗಳ ಬಾಲೆ’ ಹಾಗೂ ‘ಹೂಮಳೆ’ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದ ಸುಮನ್ ನಗರ್ಕರ್ ಹಲವು ವರ್ಷಗಳ ಸಿನಿಮಾ ನಿರ್ಮಾಣದ ಕನಸು ನನಸಾಗಿದೆ. ಅವರ ನಿರ್ಮಾಣದ ಬಬ್ರೂ ಸಿನಿಮಾ ಅಮೆರಿಕದಲ್ಲಿಯೇ ಸಂಪೂರ್ಣ ನಿರ್ಮಾಣ ಮಾಡಿದ್ದು, ಇದೇ ನವೆಂಬರ್ 1ಕ್ಕೆ ತೆರೆಗೆ ತರುವ ಪ್ಲಾನ್ ನಡೆದಿದೆ.
ಅಮೆರಿಕದಲ್ಲಿ ಕನ್ನಡದ ಮೊಟ್ಟ ಮೊದಲ ಹಾಲಿವುಡ್ ಸಿನಿಮಾ ‘ಬಬ್ರೂ’ ಪ್ರದರ್ಶನ ಆಗುತ್ತಿದೆ. ಇದು ಸುಮನ್ ನಗರ್ಕರ್ ಪ್ರೊಡಕ್ಷನ್ ಸಿನಿಮಾ. ಬಬ್ರೂ ಶೀರ್ಷಿಕೆ ಸಹ ಕನ್ನಡದ ‘ಬಬ್ರುವಾಹನ’ ಸಿನಿಮಾದಿಂದ ಸ್ಪೂರ್ತಿ ಪಡೆದು ಆಯ್ಕೆ ಮಾಡಿಕೊಳ್ಳಲಾಗಿದೆ.
‘ಬಬ್ರೂ’ ಸಿನಿಮಾ ಹಾಲಿವುಡ್ನಲ್ಲಿ ತಯಾರಾದ ಕನ್ನಡ ಸಿನಿಮಾ. ಒಂದು ಪ್ರಯಾಣದಲ್ಲಿ ಮೂಡಿಬಂದಿರುವ ಕಥಾ ವಸ್ತು. ಇತ್ತೀಚಿಗೆ ಚಿತ್ರದ ಪೋಸ್ಟರ್ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿ ಶುಭ ಕೋರಿದ್ದರು.
![babru](https://etvbharatimages.akamaized.net/etvbharat/prod-images/4887686_thumb.jpeg)
ಸುಮನ್ ನಗರ್ಕರ್ ಹಾಗೂ ಪತಿ ಗುರು ಯುಗ ಕ್ರಿಯೇಷನ್ ‘ಬಬ್ರೂ’ ಸಿನಿಮಾವನ್ನು ಕಸ್ತೂರಿ ಮೀಡಿಯಾ ಹಾಗೂ ಸ್ಯಾಂಡಲ್ವುಡ್ ಗೆಳೆಯರ ಬಳಗ ವತಿಯಿಂದ ವಿದೇಶಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಚಿತ್ರದ ಪ್ರಿಮಿಯರ್ ಪ್ರದರ್ಶನ ಸ್ಯಾನ್ ಫ್ರಾನ್ಸಿಸ್ಕೋ ಬೆ ಏರಿಯಾದಲ್ಲಿ ನಡೆಸಲಾಗುವುದು. ‘ಬಬ್ರೂ’ ಚಿತ್ರವನ್ನು ಅಲ್ಲದೆ ನವೆಂಬರ್ 1ರಂದು 7 ಕಡೆ ಪ್ರದರ್ಶನ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಅಮೆರಿಕ ಬಿಟ್ಟು ಬೆಂಗಳೂರಿಗೆ ಬಂದ ನಟಿ ಮುಂದೆ ಮಾಡಿದ್ದೇನು?
ಸಿನಿಮಾದಲ್ಲಿ ಸುಮನ್ ನಗರ್ಕರ್ ಜೊತೆ ಮಹಿ ಹಿರೇಮಠ್, ಸನ್ನಿ ಮೋಜ, ರೇ ತೊಸ್ಟಡೋ, ಪ್ರಕೃತಿ ಕಶ್ಯಪ್, ಗಾನ ಭಟ್, ಸಂದೀಪ್ ಬೆಳ್ಳಿಯಪ್ಪ, ಭರತ್ ಶ್ರೀಪಾಡ್ ಅಭಿನಯಿಸಿದ್ದಾರೆ. ಇನ್ನು ಸಿನಿಮಾಕ್ಕೆ ‘ಬಬ್ರೂ’ ಸುಜೈ ರಾಮಯ್ಯಾ ಕಥೆ ಹಾಗೂ ನಿರ್ದೇಶನ ಮಾಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ಒದಗಿಸಿದ್ದಾರೆ.
ಅಂದಹಾಗೆ ಭಾರತದಲ್ಲಿ ಮೊದಲು ಪ್ರದರ್ಶನ ಆಗುವುದಕ್ಕೆ ಮುಂಚೆ ಕನ್ನಡ ಚಿತ್ರವೊಂದು ಸಾರ್ವಜನಿಕರಿಗೆ ಅಮೆರಿಕ ಹಾಗೂ ಯು ಕೆ ದೇಶಗಳಲ್ಲಿ ಬಿಡುಗಡೆ ಅಂತ ಹೇಳುತ್ತಿದ್ದಾರೆ ಸುಮನ್ ನಗರ್ಕರ್.
- " class="align-text-top noRightClick twitterSection" data="">