ತಮ್ಮ ಚಿತ್ರ ಕಣ್ತುಂಬಿಕೊಳ್ಳಲು 'ಫೇಸ್ ಟು ಫೇಸ್' ಚಿತ್ರತಂಡ ಬೆಂಗಳೂರಿನ ಭೂಮಿಕಾ ಚಿತ್ರಮಂದಿರಕ್ಕೆ ಆಗಮಿಸಿತ್ತು. ನಾಯಕ ಭಾನುಪ್ರಕಾಶ್, ನಟಿಮಣಿಯರಾದ ಪೂರ್ವಿ, ದಿವ್ಯಾ ಉರುಡುಗ ಕೂಡ ಸೇರಿದಂತೆ ಇಡೀ ಚಿತ್ರತಂಡವೇ ಪ್ರೇಕ್ಷಕರ ಜತೆ ಕುಳಿತುಕೊಂಡು ಸಿನಿಮಾ ನೋಡಿ ಎಂಜಾಯ್ ಮಾಡಿದ್ರು. ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ಅವರು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ದಯವಿಟ್ಟು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ಎಂದು ಸಿನಿರಸಿಕರಲ್ಲಿ ಕೇಳಿ ಕೊಂಡಿತು.
ಇನ್ನು ಫೇಸ್ ಟು ಫೇಸ್ ಚಿತ್ರವನ್ನು ಸೂಪರ್ ಸ್ಟಾರ್ ಉಪೇಂದ್ರ ಅವರ ಶಿಷ್ಯ ಸಂದೀಪ್ ಜನಾರ್ಧನ್ ನಿರ್ದೇಶನ ಮಾಡಿದ್ದು, ವೀಕೆಂಡ್ನಲ್ಲಿ ಫ್ಯಾಮಿಲಿ ಜೊತೆ ನೋಡಬಹುದಾದ ಚಿತ್ರ ಎಂದು ಎಲ್ಲೆಡೆ ಕೇಳಿ ಬರುತ್ತಿದೆ.