ಬಹು ನಿರೀಕ್ಷಿತ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಹುದೊಡ್ಡ ಚಾಲನೆ ಸಿಕ್ಕಿದೆ. ಕಾರ್ಯಕ್ರಮಕ್ಕೆ ಮುಕುಂದ ಮುರಾರಿ ಸಿನಿಮಾದ ಹಾಡನ್ನು ಹಾಡುವ ಮೂಲಕ ಬಿಗ್ ಬಾಸ್ ಸೀಸನ್-7ನ್ನು ಕಿಚ್ಚ ಸುದೀಪ್ ಆರಂಭಿಸಿದರು.
ನಂತರ ಮೊದಲ ಸ್ಪರ್ಧಿಯಾಗಿ ಕಾಮಿಡಿಯನ್ ಕುರಿ ಪ್ರತಾಪ್, ಎರಡನೆಯ ಸ್ಪರ್ಧಿಯಾಗಿ ಕಿರುತೆರೆ ನಟಿ ಪ್ರಿಯಾಂಕ, ಮೂರನೇ ಸ್ಪರ್ಧಿಯಾಗಿ ಖ್ಯಾತ ಪತ್ರಕರ್ತ, ಹಾಯ್ ಬೆಂಗಳೂರು ಸಂಪಾದಕ ರವಿಬೆಳಗೆರೆ ಎಂಟ್ರಿಯಾಗಿದ್ದಾರೆ. ನಾಲ್ಕನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಚಂದನಾ, ಐದನೇ ಸ್ಪರ್ಧಿಯಾಗಿ ರಂಗಭೂಮಿ ಕಲಾವಿದ ಹಾಗೂ ಹಾಡುಗಾರ ವಾಸುಕಿ ವೈಭವ್ ಮನೆ ಪ್ರವೇಶಿಸಿದರು.
ನಂತರ ಆರನೇ ಸ್ಪರ್ಧಿಯಾಗಿ ನಾಗಿಣಿ ಧಾರವಾಹಿಯ ನಟಿ ದೀಪಿಕಾ ದಾಸ್ ಪ್ರವೇಶ ಪಡೆದರು. ನಂತರ ಏಳನೇ ಸ್ಪರ್ಧಿಯಾಗಿ ಜೈಜಗದೀಶ್ ಎಂಟ್ರಿ ಕೊಟ್ಟಿದ್ದಾರೆ. ಇವರು ಸುಮಾರು 600 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ಜೈಜಗದೀಶ್ ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ಸೇರಿ ಹಲವಾರು ದೊಡ್ಡ ನಟರ ಜೊತೆ ನಟಿಸಿದ್ದಾರೆ.